3
July, 2026

A News 365Times Venture

3
Friday
July, 2026

A News 365Times Venture

ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್:  ಶೇ12.5 ರಷ್ಟು ವೇತನ ಹೆಚ್ಚಳ

Date:

ಬೆಂಗಳೂರು,ಜುಲೈ,2,2026 (www.justkannada.in):  ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು ವೇತನ ಹೆಚ್ಚಳ ಮಾಡಿ ಆದೇಶಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಮೂಲ ವೇತನದಲ್ಲಿ ಶೇ.12.5ರಷ್ಟು ಹೆಚ್ಚಳ ಮಾಡಲಾಗಿದೆ.  ಸಾರಿಗೆ ನೌಕರರ ಮೂಲ ವೇತನ ಈ ತಿಂಗಳಿನಿಂದ ಹೆಚ್ಚಳವಾಗಲಿದ್ದು, 2025 ಮಾರ್ಚ್ 31ರ ಮೂಲ ವೇತನದ ಮೇಲೆ ಅನ್ವಯವಾಗಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ ಡಬ್ಲ್ಯುಕೆಆರ್‌ ಟಿಸಿ ಹಾಗೂ ಕೆಕೆಆರ್‌ ಟಿಸಿ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1.05 ಲಕ್ಷಕ್ಕೂ ಹೆಚ್ಚು ನೌಕರರಿಗೆ ಈ ವೇತನ ಹೆಚ್ಚಳದ ಪ್ರಯೋಜನ ಸಿಗಲಿದೆ.

ನೌಕರರಿಗೆ ಬಾಕಿಯಾಗಿದ್ದ ಹಿಂಬಾಕಿ ಮೊತ್ತದ ಮೊದಲ ಕಂತನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಉಳಿದ ಮೊತ್ತವನ್ನು ಹಂತ ಹಂತವಾಗಿ ಮುಂದಿನ ತಿಂಗಳುಗಳಲ್ಲಿ ಪಾವತಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚಾಲಕರು, ನಿರ್ವಾಹಕರು, ತಾಂತ್ರಿಕ ವಿಭಾಗದ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿ ಸೇರಿದಂತೆ ಎಲ್ಲಾ ವಿಭಾಗದ ನೌಕರರಿಗೆ ಈ ಪರಿಷ್ಕರಣೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

Key words: Good news, transport employees, 12.5% ​​salary, hike

The post ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್:  ಶೇ12.5 ರಷ್ಟು ವೇತನ ಹೆಚ್ಚಳ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.എസ് രാഷ്ട്രീയത്തില്‍ ഇസ്രഈല്‍ വിമര്‍ശനം വിജയമന്ത്രമാകുന്നു, ഇടത് സ്ഥാനാര്‍ത്ഥികള്‍ ജയിക്കുന്നു; ആശങ്കയോടെ ഇസ്രഈലി മാധ്യമങ്ങള്‍

  വാഷിങ്ടണ്‍: അമേരിക്കന്‍ രാഷ്ട്രീയത്തില്‍ ഇസ്രഈലിനോടുള്ള നിലപാടുകളില്‍ നിര്‍ണായകമായ മാറ്റം പ്രകടമാകുന്നതായി...

தமிழகத்தில் அதிகரிக்கும் வேலையின்மை… என்ன செய்யப்போகிறது அரசு?

கல்வி தொடங்கி சுகாதாரம் வரைக்கும் வளர்ச்சிப் பட்டியலில் முன்னணியில் இருக்கிறது, தமிழ்நாடு....

Somu Veerraju: జగన్‌కు దమ్ముంటే చర్చకు రావాలి.. సోము వీర్రాజు సవాల్

Somu Veerraju: తిరుపతిలో బీజేపీ ఎమ్మెల్సీ సోము వీర్రాజు వైసీపీ అధినేత,...

ಮೈಸೂರು: 24 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಬಿಯರ್ ಹಾಗೂ ವೈನ್ ನಾಶ

ಮೈಸೂರು, ಜುಲೈ,2,2026 (www.justkannada.in): ಅಬಕಾರಿ ಇಲಾಖೆಯು ಅವಧಿ ಮೀರಿದ ಹಾಗೂ...