26
June, 2026

A News 365Times Venture

26
Friday
June, 2026

A News 365Times Venture

ಕೆಎಸ್‌ ಒಯುಗೆ ನೂತನ ಕುಲಪತಿಯಾಗಿ ಡಾ. ಜ್ಞಾನ ಪ್ರಕಾಶ್ ನೇಮಕ

Date:

ಮೈಸೂರು,ಜೂನ್,25,2026 (www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU)ದ ನೂತನ ಕುಲಪತಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಜ್ಞಾನ ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ.

ಈ ಸಂಬಂಧ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳೂ ಆಗಿರುವವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಹಾಲಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರ ಅಧಿಕಾರಾವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನೂತನ ಕುಲಪತಿಯನ್ನು ನೇಮಕ ಮಾಡಲಾಗಿದೆ.

ಡಾ. ಜ್ಞಾನ ಪ್ರಕಾಶ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದಲ್ಲಿ ಹಲವು ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆ, ಬೋಧನೆ ಹಾಗೂ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಇದೀಗ ಅವರಿಗೆ ಕೆಎಸ್‌ಒಯು ಕುಲಪತಿ ಹುದ್ದೆಯ ಜವಾಬ್ದಾರಿ ವಹಿಸಲಾಗಿದೆ.

ಮುಕ್ತ ಹಾಗೂ ದೂರ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಕೆಎಸ್‌ ಒಯು, ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುತ್ತಿದೆ. ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಾ. ಜ್ಞಾನ ಪ್ರಕಾಶ್ ಅವರ ನೇತೃತ್ವದಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಗುಣಮಟ್ಟ ಹೆಚ್ಚಳ, ನೂತನ ಶಿಕ್ಷಣ ನೀತಿ (NEP) ಅನುಷ್ಠಾನ, ಡಿಜಿಟಲ್ ಶಿಕ್ಷಣ ವ್ಯವಸ್ಥೆಯ ಬಲವರ್ಧನೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ವ್ಯಕ್ತವಾಗಿದೆ.

Key words: Dr. Gnana Prakash, appointed, new VC, KSOU

The post ಕೆಎಸ್‌ ಒಯುಗೆ ನೂತನ ಕುಲಪತಿಯಾಗಿ ಡಾ. ಜ್ಞಾನ ಪ್ರಕಾಶ್ ನೇಮಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

அமலுக்கு வரும் பாஸ்போர்ட் திருத்தச் சட்டம்; ஏறும் பாஸ்போர்ட் கட்டணம்; எவ்வளவு, எப்போது முதல்?

மத்திய வெளியுறவுத் துறை அமைச்சகம் 'பாஸ்போர்ட் திருத்தச் சட்டம், 2026'-ஐ கொண்டு...

Benefits of Hugging: భార్యాభర్తలు కౌగిలించుకుని నిద్రపోతే కలిగే అద్భుత ప్రయోజనాలు ఇవే.!

Benefits of Hugging: ప్రస్తుత ఆధునిక జీవితంలో పనిఒత్తిడి, కుటుంబ బాధ్యతలు,...

മയക്കുമരുന്ന് വരുന്നത് അദാനി തുറമുഖങ്ങള്‍ വഴി; അവര്‍ക്കെതിരെ നടപടിയെടുക്കാന്‍ പറ്റാത്തവരാണ് തൂഫാന്‍ കൊണ്ടുവരുന്നതെന്ന് കെ. സഹദേവന്‍

കൊച്ചി: രാജ്യത്തേക്ക് മയക്കുമരുന്ന് കടന്നു വരുന്നത് ഗൗതം അദാനിയുടെ കീഴിലുള്ള തുറമുഖങ്ങള്‍...