24
June, 2026

A News 365Times Venture

24
Wednesday
June, 2026

A News 365Times Venture

ಲಂಚ ಪ್ರಕರಣ: ಪಿಎಸ್‌ ಐ ಸೇರಿದಂತೆ ಇಬ್ಬರ ಜಾಮೀನು ಅರ್ಜಿ ತಿರಸ್ಕಾರ

Date:

ಯಡ್ರಾಮಿ, ಜೂನ್, 22,2026 (www.justkannada.in):  20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ ಐ ವಿಶ್ವನಾಥ ಮುದರೆಡ್ಡಿ ಹಾಗೂ ಎಸ್‌ ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಗುರುವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಬಳಿಕ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆರೋಪಿತರ ಪರವಾಗಿ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಗೆ ಲೋಕಾಯುಕ್ತ ಪರ ವಕೀಲರು ಆಕ್ಷೇಪಣೆ ಸಲ್ಲಿಸಿ, ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಎಲ್. ಲಕ್ಷ್ಮಿನಾರಾಯಣ ಅವರು ಎರಡೂ ಕಡೆಯ ವಾದ ಆಲಿಸಿದ ಬಳಿಕ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದರು.

ಲೋಕಾಯುಕ್ತ ಪರವಾಗಿ ಎಪಿಪಿ ಎಸ್.ಎಸ್. ಚಾಂದ್ ಕೌಟೆ ವಾದ ಮಂಡಿಸಿದರೆ, ಆರೋಪಿತರ ಪರವಾಗಿ ವಕೀಲ ಬಾಬುರಾವ್ ವಾದಿಸಿದರು. ನ್ಯಾಯಾಲಯದ ಆದೇಶದೊಂದಿಗೆ ಇಬ್ಬರೂ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದಾರೆ.

ENGLISH SUMMARY…

Bribe Case: Bail Plea of PSI, Staff Rejected

Yadrami, June 22: A court has rejected the bail applications of PSI Vishwanath Mudareddy and SB staff member Siddanna Biradar, who were arrested by Lokayukta officials while allegedly accepting a bribe of ₹20,000.

The Lokayukta opposed the bail, arguing that the investigation is still underway and granting bail at this stage could affect the probe. After hearing both sides, Judge B.L. Lakshminarayana dismissed the bail pleas.

The accused will continue to remain in judicial custody.

#Lokayukta #BriberyCase #PSI #KarnatakaNews #JudicialCustody #AntiCorruption #BreakingNews

Key words: Bribery case, Bail application, PSI, two, rejected

The post ಲಂಚ ಪ್ರಕರಣ: ಪಿಎಸ್‌ ಐ ಸೇರಿದಂತೆ ಇಬ್ಬರ ಜಾಮೀನು ಅರ್ಜಿ ತಿರಸ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಂಪುಟ ವಿಸ್ತರಣೆ ಕುರಿತು HDK ಹೇಳಿಕೆ ಖಂಡನೀಯ- ಎಚ್.ಎ. ವೆಂಕಟೇಶ್

ಮೈಸೂರು,ಜೂನ್,23,2026 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ...

അമേരിക്ക-ഇറാന്‍ ചര്‍ച്ചകളില്‍ ഇസ്രഈല്‍ ഭാഗമല്ല; ഹിസ്ബുല്ലയെ പൂര്‍ണമായും തകര്‍ക്കുന്നത് വരെ ആക്രമണമെന്ന് ഇസ്രഈല്‍

  ടെല്‍ അവീവ്: അമേരിക്കയും ഇറാനും തമ്മില്‍ നടത്തുന്ന നയതന്ത്ര ചര്‍ച്ചകളില്‍...

`தமிழ்நாட்டை விட்டு வெளியே சென்ற முதலீடுகள்' பட்டியலிட்ட கீர்த்தனா; ஏன் சென்றன? – TRB ராஜா விளக்கம்

தமிழ்நாடு சட்டமன்றக் கூட்டத்தொடருக்குப் பின், தமிழ்நாடு தொழிற்துறை அமைச்சர் கீர்த்தனா பத்திரிகையாளர்களிடம்...

మళ్లీ అందుబాటులోకి Telegram.. కానీ వారికీ మాత్రం.!

Telegram Back: దాదాపు వారం రోజుల అంతరాయం తర్వాత మెసేజింగ్ యాప్...