15
June, 2026

A News 365Times Venture

15
Monday
June, 2026

A News 365Times Venture

RSS ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ ಇನ್ಮುಂದೆ ಸಾಧ್ಯವಿಲ್ಲ- ಮೋಹನ್ ಭಾಗವತ್ ತಿರುಗೇಟು

Date:

ತ್ರಿಶೂರ್,ಜೂನ್,15,2026 (www.justkannada.in): ಆರ್ ಎಸ್ಎಸ್ ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ ಇನ್ಮುಂದೆ ಸಾಧ್ಯವಿಲ್ಲ. ಎಲ್ಲಾ ಚಟುವಟಿಕೆಗಳು ತೆರೆದ ಮೈದಾನದಲ್ಲೇ ನಡೆಯುತ್ತಿದೆ. ಯಾವುದನ್ನೂ ಕದ್ದುಮುಚ್ಚಿ ಮಾಡುತ್ತಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿರುಗೇಟು ನೀಡಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಪತ್ರ ವಿಚಾರವಾಗಿ ಮಾತನಾಡಿದ ಮೋಹನ್ ಭಾಗವತ್,  ಸಚಿವರ ಪತ್ರಕ್ಕೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ನೋಂದಣಿ ಆಗದಿರುವ ಆನೇಕ ಚಟುವಟಿಕೆ ನಡೆಯುತ್ತವೆ. ನಾವು ಕದ್ದುಮುಚ್ಚಿ ಯಾವುದನ್ನೂ ಮಾಡುತ್ತಿಲ್ಲ.  ನಮ್ಮ ಎಲ್ಲಾ ಚಟುವಟಿಕೆಗಳು ತೆರೆದ ಮೈದಾನದಲ್ಲೇ ನಡೆಯುತ್ತವೆ. ರಾಜಕೀಯಕ್ಕಾಗಿ ಎಲ್ಲ ಗಿಮಿಕ್ ಗಳನ್ನೂ ಮಾಡಲಾಗುತ್ತೆ.  ನಮಗೆ ಇದರ ಅರಿವಿದೆ ಇದೆಲ್ಲಾ ಎದುರಿಸಿಕೊಂಡೇ ಬಂದಿದ್ದೇವೆ ಎಂದರು.

ಹಿಂದೂ ಧರ್ಮ ನೋಂದಣಿಯಾಗಿಲ್ಲ. ಆರ್ ಎಸ್ ಎಸ್ ಕೂಡ ನೋಂದಣಿಯಾಗಿಲ್ಲ. ಸರ್ಕಾರದ ಅನುದಾನ ಬೇಕಿರುವವರು ನೋಂದಣಿ ಮಾಡುತ್ತಾರೆ. ಹಿಂದೆ ಎರಡು ಬಾರಿ ಆರ್ ಎಸ್ ಎಸ್ ಗೆ ನಿರ್ಬಂಧ ಹೇರಿದ್ದರು. ಒಂದು ಕೋರ್ಟ್ ಆದೇಶದ ಮೇಲೆ ನಿರ್ಬಂಧ ತೆರವಾಗಿತ್ತು.  ಕಳೆದ 100 ವರ್ಷಗಳಲ್ಲಿ ನಮಗೆ ಯಾರೂ ಸೂಚನೆ ಕೊಟ್ಟಿಲ್ಲ ನೋಂದಣಿ ಆಗಿ ಎಂದು ಸೂಚನೆ ಕೊಟ್ಟಿಲ್ಲ.  ಬ್ರಿಟಿಷರ ಕಾಲದಿಂದಲೂ ಆರ್ ಎಸ್ಎಸ್ ಇದೆ.  ಹೀಗಾಗಿ ನಾನು ಇದಕ್ಕೆಲ್ಲಾ ಏಕೆ ಉತ್ತರ ಕೊಡಬೇಕು? ಎಂದು ಪ್ರಶ್ನಿಸಿದರು.

Key words: Creating, doubts, RSS, Priyank Kharge, Mohan Bhagwat

The post RSS ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ ಇನ್ಮುಂದೆ ಸಾಧ್ಯವಿಲ್ಲ- ಮೋಹನ್ ಭಾಗವತ್ ತಿರುಗೇಟು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Land Missile: భారత అంబులపొదిలో మరో అస్త్రం.. భూతల దాడి క్రూయిజ్ క్షిపణి పరీక్ష విజయవంతం

భారత రక్షణ పరిశోధన, అభివృద్ధి సంస్థ (డీఆర్‌డీఓ) స్వదేశీ సాంకేతికతతో అభివృద్ధి...

ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಿಎಂ ಶ್ವೇತಪತ್ರ ಮಂಡಿಸಲಿ- ಬಿವೈ ವಿಜಯೇಂದ್ರ

ಶಿವಮೊಗ್ಗ,ಜೂನ್,15,2026 (www.justkannada.in):  ಸರ್ಕಾರ ಹಣವಿಲ್ಲದ ಬಗ್ಗೆ ಒಪ್ಪಿಕೊಳ್ಳದೆ ಗ್ಯಾರಂಟಿ ಪರಿಷ್ಕರಣೆಯ...

ശബരിമല സ്വര്‍ണക്കൊള്ള: പത്മകുമാറിനെ പ്രാഥമിക അംഗത്വത്തില്‍ നിന്ന് സസ്‌പെന്‍ഡ് ചെയ്ത് സി.പി.ഐ.എം

പത്തനംതിട്ട: ശബരിമല സ്വര്‍ണക്കൊള്ള കേസിലെ പ്രതിയും മുന്‍ എം.എല്‍.എയും സി.പി.ഐ.എം നേതാവുമായ...

“6 முதல் 8-ம் வகுப்பு மாணவர்களுக்கும் காலை உணவு: பெரியார் பிறந்தநாளில் அமல்" – முதல்வர் விஜய்!

தமிழ்நாடு அரசின் தலைமைச் செயலகத்தில் இன்று (15.06.2026) முதல்வர் ஜோசப் விஜய்...