13
June, 2026

A News 365Times Venture

13
Saturday
June, 2026

A News 365Times Venture

ಬೆಂಗಳೂರು ಅಭಿವೃದ್ಧಿ ಖಾತೆಗೆ ರಾಮಲಿಂಗಾರೆಡ್ಡಿ ಪಟ್ಟು; ಖಾತೆ ಹಂಚಿಕೆಯಲ್ಲಿ ಕಗ್ಗಂಟು..?

Date:

 

ಬೆಂಗಳೂರು, June.04,2026: ನೂತನ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಕಸರತ್ತು ತೀವ್ರಗೊಂಡಿದ್ದು, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ಅಭಿವೃದ್ಧಿ ಇಲಾಖೆಯ ಖಾತೆಗೆ ಪಟ್ಟು ಹಿಡಿದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಮಲಿಂಗಾರೆಡ್ಡಿಗೆ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಈ ಪ್ರಸ್ತಾವಕ್ಕೆ ರೆಡ್ಡಿ ಒಪ್ಪಿಗೆ ಸೂಚಿಸದೇ, ತಮಗೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನೇ ನೀಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ಬೆಂಗಳೂರು ಅಭಿವೃದ್ಧಿ ಇಲಾಖೆ ನೀಡದಿದ್ದರೆ ಸಚಿವ ಸ್ಥಾನವನ್ನೇ ತ್ಯಜಿಸಲು ಸಿದ್ಧ ಎಂಬ ಸಂದೇಶವನ್ನೂ ಪಕ್ಷದ ನಾಯಕತ್ವಕ್ಕೆ ರವಾನಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಖಾತೆ ಹಂಚಿಕೆ ಪ್ರಕ್ರಿಯೆಯಲ್ಲಿ ಹೊಸ ಬಿಕ್ಕಟ್ಟು ಉಂಟಾಗಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಕ್ಕಟ್ಟು ಪರಿಹರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟದಲ್ಲಿ ಪ್ರಾದೇಶಿಕ, ರಾಜಕೀಯ ಹಾಗೂ ಆಡಳಿತಾತ್ಮಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಹಲವು ಸುತ್ತಿನ ಮಾತುಕತೆ ನಡೆಸುತ್ತಿದೆ.

ಬೆಂಗಳೂರು ನಗರಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಮಹತ್ವದ ಕಾರಣದಿಂದ ಬೆಂಗಳೂರು ಅಭಿವೃದ್ಧಿ ಇಲಾಖೆ ಅತ್ಯಂತ ಪ್ರಭಾವಿ ಖಾತೆಯಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಖಾತೆಯ ಮೇಲಿನ ಆಸಕ್ತಿ ಮತ್ತು ಪೈಪೋಟಿ ಹೆಚ್ಚಾಗಿದೆ.

ಇದೀಗ ರಾಮಲಿಂಗಾರೆಡ್ಡಿ ಅವರ ಬೇಡಿಕೆ ಹಾಗೂ ಪಕ್ಷದ ನಾಯಕತ್ವದ ನಿರ್ಧಾರಗಳ ನಡುವೆ ಖಾತೆ ಹಂಚಿಕೆ ಕಸರತ್ತು ಕಗ್ಗಂಟಾಗಿ ಪರಿಣಮಿಸಿದ್ದು, ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದರತ್ತ ಕಾಂಗ್ರೆಸ್ ವಲಯದ ಗಮನ ನೆಟ್ಟಿದೆ.

Key words:  Ramalinga Reddy, reportedly, insisting on, the Bengaluru Development Department.

SUMMARY: 

A political tussle has emerged over cabinet portfolio allocation in the new Karnataka government, with senior minister Ramalinga Reddy reportedly insisting on the Bengaluru Development Department.

Sources indicate that Chief Minister D.K. Shivakumar had offered Reddy the Water Resources portfolio. However, Reddy is said to have rejected the proposal and demanded the Bengaluru Development portfolio instead. Reports suggest he even conveyed that he would rather step down than accept another department.

Amid the growing deadlock, Chief Minister D.K. Shivakumar reportedly rushed to former Chief Minister Siddaramaiah’s residence to discuss ways to resolve the issue. The portfolio allocation exercise has become increasingly complicated as the leadership attempts to balance political, regional, and administrative considerations.

With the Bengaluru Development Department considered one of the most influential portfolios in the state, the standoff has added fresh tension to the cabinet formation process. All eyes are now on the Congress leadership’s final decision on the matter.

#DKShivakumar #RamalingaReddy #CabinetBerth #PortfolioAllocation #CongressKarnataka #BengaluruDevelopment #KarnatakaPolitic

The post ಬೆಂಗಳೂರು ಅಭಿವೃದ್ಧಿ ಖಾತೆಗೆ ರಾಮಲಿಂಗಾರೆಡ್ಡಿ ಪಟ್ಟು; ಖಾತೆ ಹಂಚಿಕೆಯಲ್ಲಿ ಕಗ್ಗಂಟು..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

RBI Interest Rates: బిగ్ షాక్ ఇవ్వనున్న ఆర్బీఐ.. భారీగా పెరగనున్న వడ్డీరేట్లు..

దేశంలో ద్రవ్యోల్బణం మళ్లీ పెరుగుతుండటంతో భారతీయ రిజర్వ్ బ్యాంక్ (RBI) కీలక...

‘ಉತ್ತರಕುಮಾರನ ಪೌರುಷ’ ಸಾಕು ಮಾಡಿ: ಕಸದ ಟೆಂಡರ್‌ ಭ್ರಷ್ಟಚಾರ CBI ತನಿಖೆಗೆ ವಹಿಸಿ- ಆರ್.ಅಶೋಕ್

ಬೆಂಗಳೂರು,ಜೂನ್,13,2026 (www.justkannada.in): ಬೆಂಗಳೂರಿನ ಕಸದ ಟೆಂಡರ್ ನಲ್ಲಿ ಆಗಿರುವ ಬ್ರಹ್ಮಾಂಡ...

എബോളയും ആന്ത്രാക്‌സും ഉള്‍പ്പെടെ മാരക വൈറസുകള്‍; യു.എസ് ധനസഹായത്തോടെയുള്ള ഉക്രെയ്ന്‍ ബയോലാബ് രേഖകള്‍ പുറത്ത്

വാഷിങ്ടണ്‍: ഉക്രെയ്‌നിലേത് ഉള്‍പ്പെടെ ലോകമെമ്പാടുമുള്ള വിവിധ രാജ്യങ്ങളില്‍ യു.എസ് ധനസഹായത്തോടെ പ്രവര്‍ത്തിക്കുന്ന...

கொல்லூரில் முதல்வர் விஜய்: "எந்த விசேஷ கோரிக்கையும் அம்மனிடம் வைக்கவில்லை" – கோயில் கமிட்டி தலைவர்

கர்நாடகா மாநிலம் கொல்லூரில் இருக்கும் மூகாம்பிகை அம்மன் கோயில் மிகவும் பிரபலம்...