22
May, 2026

A News 365Times Venture

22
Friday
May, 2026

A News 365Times Venture

‘ಕಾಕ್ರೋಚ್’ X ಖಾತೆಗೆ ಭಾರತದಲ್ಲಿ ನಿರ್ಬಂಧ.

Date:

ನವದೆಹಲಿ,ಮೇ,21,2026 (www.justkannada.in): ಸಾಮಾಜಿಕ ಜಾಲತಾಣ X (ಹಳೆಯ ಟ್ವಿಟ್ಟರ್) ನಲ್ಲಿ ಭಾರೀ ವೈರಲ್ ಆಗಿದ್ದ “Cockroach Janta Party (CJP)” ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಖಾತೆಯ ಸ್ಥಾಪಕ ಅಭಿಜೀತ್ ದೀಪ್ಕೆ ಅವರು, “Account has been withheld in India” ಎಂದು ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.

ಈ ನಿರ್ಬಂಧದ ಬಳಿಕ ಭಾರತದಲ್ಲಿರುವ ಬಳಕೆದಾರರಿಗೆ ಆ ಖಾತೆ ಕಾಣಿಸದಂತಾಗಿದೆ. ಆದರೆ ಇತರೆ ದೇಶಗಳಲ್ಲಿ ಖಾತೆ ಲಭ್ಯವಿರುವ ಸಾಧ್ಯತೆ ಇದೆ. ಸರ್ಕಾರ ಅಥವಾ ಕಾನೂನು ಸಂಸ್ಥೆಗಳ ಮನವಿಯ ಮೇರೆಗೆ X ವೇದಿಕೆ ಇಂತಹ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿದುಬಂದಿದೆ.

“Cockroach Janta Party” ಯುವಕರ ಸಮಸ್ಯೆಗಳು, ನಿರುದ್ಯೋಗ, ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ವಿಚಾರಗಳನ್ನು ವ್ಯಂಗ್ಯ ಮತ್ತು ಮೀಮ್‌ ಗಳ ಮೂಲಕ ಪ್ರಸ್ತಾಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಕೆಲವೇ ದಿನಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಗಳಿಸಿದ್ದ ಈ ಖಾತೆ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿತ್ತು.

ಆದರೆ ಖಾತೆ ನಿರ್ಬಂಧಕ್ಕೆ ನಿಖರ ಕಾರಣವನ್ನು ಸರ್ಕಾರ ಅಥವಾ X ಸಂಸ್ಥೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಡಿಜಿಟಲ್ ಸೆನ್ಸಾರ್ ಕುರಿತು ಚರ್ಚೆಗಳು ಜೋರಾಗಿವೆ.

Key words: Cockroach,  X account, Restriction, India

The post ‘ಕಾಕ್ರೋಚ್’ X ಖಾತೆಗೆ ಭಾರತದಲ್ಲಿ ನಿರ್ಬಂಧ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഞങ്ങളുടെ സിസ്റ്റത്തിന് വീഴ്ചയില്ല; നീറ്റ് ചോദ്യപേപ്പര്‍ ചോര്‍ച്ചയില്‍ പാര്‍ലമെന്ററി സമിതിക്ക് മുമ്പില്‍ എന്‍.ടി.എ

  ന്യൂദല്‍ഹി: നീറ്റ്-യു.ജി ചോദ്യപേപ്പര്‍ ചോര്‍ച്ചയുമായി ബന്ധപ്പെട്ട് പാര്‍ലമെന്ററി സമിതിക്ക് മുമ്പില്‍...

தவெக அமைச்சரவையில் விசிக; அமைச்சராகும் வன்னியரசு!

முதல்வர் விஜய் தலைமையிலான தவெக அரசு பெரும்பான்மை பெறாத சூழலில் காங்கிரஸ்,...

Maoists Surrender : జార్ఖండ్‌లో మావోయిస్టులకు భారీ దెబ్బ.. ఒకేసారి 27 మంది లొంగుబాటు..!

Maoists Surrender : జార్ఖండ్ రాష్ట్రంలో నక్సలైట్ల నెట్‌వర్క్‌కు గట్టి ఎదురుదెబ్బ...

‘ബംഗ്ലാദേശി നുഴഞ്ഞുകയറ്റക്കാര്‍’ ഇനി കോടതിയിലേക്കല്ല, നേരെ ബി.എസ്.എഫിന് മുമ്പിലേക്ക്; പുതിയ നിയമവുമായി അധികാരി

  കൊല്‍ക്കത്ത: പശ്ചിമ ബംഗാളില്‍ അനധികൃതമായി പിടിക്കപ്പെടുന്ന ബംഗ്ലാദേശി നുഴഞ്ഞുകയറ്റക്കാരെ ഇനി...