ಕೊಡಗು,ಮೇ,18,2026 (www.justkannada.in): ಕುಶಾಲನಗರದ ದುಬಾರೆಯಲ್ಲಿ ಆನೆಗಳ ನಡುವೆ ಕಾದಾಟ ನಡೆದು ಮಹಿಳೆ ಬಲಿಯಾಗಿರುವ ಘಟನೆ ನಡೆದಿದೆ.
ದುಬಾರೆ ಆನೆ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಸ್ನಾನ ಮಾಡುವ ವೇಳೆ ಕಂಜನ್ ಆನೆ ಹಾಗೂ ಮಾರ್ತಾಂಡ ನಡುವೆ ಕಾದಾಟ ನಡೆದಿದ್ದು ಈ ವೇಳೆ ಆನೆಗಳನ್ನ ನೋಡುತ್ತ ನಿಂತಿದ್ದ ಪ್ರವಾಸಿ ಮಹಿಳೆ ಚೆನ್ನೈ ಮೂಲದ ಜೀನ್ಶು ಕಾದಾಟದ ವೇಳೆ ಸಿಲುಕಿ ಸಾವನ್ನಪ್ಪಿದ್ದಾರೆ.
ಇದನ್ನು ಕಣ್ಣಾರೇ ಕಂಡ ಮಹಿಳೆ ಜೀನ್ಶು ಅವರ ಪತಿ ಘಟನೆ ಬಗ್ಗೆ ವಿವರಿಸಿ ನೋವನ್ನ ತೋಡಿಕೊಂಡಿದ್ದಾರೆ. ನಾನು ನನ್ನ ಹೆಂಡತಿ ತಮಿಳುನಾಡಿನಿಂದ ಪ್ರವಾಸಕ್ಕೆ ಬಂದಿದ್ದವು. ಆನೆಗಳಿಗೆ ಸ್ನಾನ ಮಾಡಿಸುವುದನ್ನ ನೋಡುತ್ತಾ ನಿಂತಿದ್ದವು . ಈ ವೇಳೇ ಏಕಾಏಕಿ ಆನೆಗಳ ನಡುವೆ ಕಾದಾಟವಾಯಿತು . ಎಲ್ಲರೂ ಓಡಿ ಹೋದರು. ನಾನು ನನ್ನ ಹೆಂಡತಿ ಓಡಿ ಹೋಗಲು ಆಗಲಿಲ್ಲ ನಮ್ಮನ್ನ ಯಾರೂ ಕಾಪಾಡಲಿಲ್ಲ. ಆದರೆ ನಾನು ಬಚಾವ್ ಆದೆ. ನನ್ನ ಪತ್ನಿ ಸಿಲುಕಿಕೊಂಡರು ಎಂದು ಮಹಿಳೆ ಪತಿ ಅಳಲು ತೋಡಿಕೊಂಡರು.
Key words: Dubare, Woman death, elephant, fight
The post ಆನೆಗಳ ಕಾದಾಟಕ್ಕೆ ಮಹಿಳೆ ಬಲಿ: ಘಟನೆ ಕಣ್ಣಾರೇ ಕಂಡು ನೋವು ತೋಡಿಕೊಂಡ ಪತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





