12
July, 2026

A News 365Times Venture

12
Sunday
July, 2026

A News 365Times Venture

ಟಿವಿಕೆಗೆ 120 ಶಾಸಕರ ಬಲ: ರಾಜ್ಯಪಾಲರಿಗೆ ಪತ್ರ ಬರೆದ ವಿಜಯ್

Date:

ಚೆನ್ನೈ,ಮೇ,8,2026 (www.justkannada.in): ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನ ಗೆದ್ದರೂ ಬಹುಮತ ಸಾಬೀತಿಗೆ  ಬೇಕಾದಷ್ಟು ಶಾಸಕರ ಸಂಖ್ಯೆ ಇಲ್ಲದ ಕಾರಣ ಸರ್ಕಾರ ರಚನೆಗೆ ಹೆಣಗಾಡುತ್ತಿದ್ದ ವಿಜಯ ನೇತೃತ್ವ ಟಿವಿಕೆಗೆ ಇದೀಗ ಕಾಂಗ್ರೆಸ್ ಜೊತೆಗೆ ಇತರೆ ಪಕ್ಷಗಳು ಕೈಜೋಡಿಸಿವೆ.

ಹೌದು ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಟಿವಿಕೆಗೆ ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲ ಘೋಷಿಸುವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಟಿವಿಕೆಗೆ 120 ಸ್ಥಾನಗಳ ಬೆಂಬಲ ಸಿಕ್ಕಿದ್ದು ಈ ಸಂಬಂಧ ಟಿವಿಕೆ ಮುಖ್ಯಸ್ಥ ವಿಜಯ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

234 ಸದಸ್ಯರ ವಿಧಾನಸಭೆಯಲ್ಲಿ ಟಿವಿಕೆ 108 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ತನ್ನ 5 ಶಾಸಕರೊಂದಿಗೆ ಬೆಂಬಲವನ್ನು ನೀಡಿದೆ. ತಲಾ ಇಬ್ಬರು ಶಾಸಕರನ್ನು ಹೊಂದಿರುವ ಸಿಪಿಐ ಮತ್ತು ಸಿಪಿಐ(ಎಂ) ಸಹ ಇಂದಿನ ಸಭೆಗಳ ನಂತರ ಟಿವಿಕೆಯನ್ನು ಬೆಂಬಲಿಸಿವೆ. ಇಬ್ಬರು ಶಾಸಕರನ್ನು ಹೊಂದಿರುವ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಕೂಡ ವಿಜಯ್ ಅವರನ್ನು ಬೆಂಬಲಿಸಲು ಒಪ್ಪಿಕೊಂಡಿದೆ.

ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲದೊಂದಿಗೆ ವಿಜಯ್ ಅವರು ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ.

Key words: Tamilnadu, TVK , 121 MLAs, Support, Vijay, Governor

The post ಟಿವಿಕೆಗೆ 120 ಶಾಸಕರ ಬಲ: ರಾಜ್ಯಪಾಲರಿಗೆ ಪತ್ರ ಬರೆದ ವಿಜಯ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഒന്നുകില്‍ മാപ്പ്, അല്ലെങ്കില്‍ തെളിവ്; കുതിരക്കച്ചവട ആരോപണത്തില്‍ ഒമര്‍ അബ്ദുള്ളയ്‌ക്കെതിരെ ബി.ജെ.പി

ശ്രീനഗര്‍: നാഷണല്‍ കോണ്‍ഫറന്‍സ് എം.എല്‍.എമാരെ പണം നല്‍കി വശത്താക്കാന്‍ ശ്രമിച്ചെന്ന ജമ്മു...

'தவெக அரசு முடியும் போது கடன் 15 லட்சம் கோடியா இருக்கும், எழுதி வச்சுகோங்க' – மாநாட்டில் அண்ணாமலை

பாஜக முன்னாள் மாநில தலைவராக இருந்த அண்ணாமலை அக்கட்சியில் இருந்து விலகி...

ರಾಜ್ಯದಲ್ಲಿ ಇರೋದು ಟೆಂಡರ್ ಸರ್ಕಾರ, ಡಿಕೆಶಿ ಟೆಂಡರ್ ಸಿಎಂ- ಆರ್.ಅಶೋಕ್ ವ್ಯಂಗ್ಯ

ಮೈಸೂರು,ಜುಲೈ,11,2026 (www.justkannada.in): ರಾಜ್ಯದಲ್ಲಿ ಇರೋದು ಟೆಂಡರ್ ಸರ್ಕಾರ. ಡಿಕೆ ಶಿವಕುಮಾರ್...