ಮೈಸೂರು,ಮೇ,7,2026 (www.justkannada.in): ಸಿಎಂ ಬದಲಾವಣೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಅತಿಬೇಗ ನಿರ್ಧಾರ ಕೈಗೊಳ್ಳಲಿ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಆಗ್ರಹಿಸಿದ್ದಾರೆ.
ಇಂದು ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಮಾಜಿ ಸಚಿವ ಕೆಎನ್ ರಾಜಣ್ಣ ಕೆಲಕಾಲ ಚರ್ಚಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೆಎನ್ ರಾಜಣ್ಣ, ಸಿಎಂ ಬದಲಾಗುತ್ತಾರೆ ಎಂದು ನಾನು ಹೇಳುವುದಿಲ್ಲ ಇರುತ್ತಾರೆ ಅಂತಾನೂ ನಾನು ಹೇಳುವುದಿಲ್ಲ ಹೈಕಮಾಂಡ್ ಅತಿಬೇಗ ನಿರ್ಧಾರ ಕೈಗೊಳ್ಳಲಿ ನಿರ್ಧಾರ ತಡವಾದಷ್ಟು ಸರ್ಕಾರದ ಮೇಲೂ ಪರಿಣಾಮ ಬೀರುತ್ತೆ ಎಂದರು.
ಸಿಎಂಗೆ ಪರಿಪೂರ್ಣ ಅಧಿಕಾರ ಮುಂದುವರೆಸಿ ಅಂತಾದರೂ ಹೇಳಲಿ. ಇಲ್ಲ ಬದಲಾವಣೆ ಮಾಡುತ್ತಾರೆ ಎಂಬುದಾದರೂ ಹೇಳಲಿ. ಗೊಂದಲವೇ ಇದ್ದರೆ ಎಲ್ಲ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ ಎಂದರು.
Key words: Mysore, K.N. Rajanna, Meet, CM Siddaramaiah
The post ಸಿಎಂ ಬದಲಾವಣೆ ಗೊಂದಲ: ಹೈಕಮಾಂಡ್ ಅತಿಬೇಗ ನಿರ್ಧಾರ ಕೈಗೊಳ್ಳಲಿ- ಕೆ.ಎನ್ ರಾಜಣ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





