28
August, 2026

A News 365Times Venture

28
Friday
August, 2026

A News 365Times Venture

ಕಾಂಗ್ರೆಸ್ ಅವನತಿ ಶುರು: ಮಾಜಿ ಮೇಯರ್ ಶಿವಕುಮಾರ್

Date:

ಮೈಸೂರು,ಮೇ,4,2026 (www.justkannnada.in): ದುರಾಡಳಿತ, ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಗಾಂಧಿ ಕುಟುಂಬಕ್ಕೆ ಒತ್ತು ನೀಡುತ್ತಿರುವ ಕಾಂಗ್ರೆಸ್ ಇದೀಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಸೋಲು ಕಂಡು ಅವನತಿ ಶುರುವಾಗಿದ್ದು,ಕರ್ನಾಟಕದಲ್ಲೇ ಕಾಂಗ್ರೆಸ್ ಅಂತ್ಯವಾಗಲಿದೆ ಎಂದು ಮಾಜಿ ಮೇಯರ್  ಶಿವಕುಮಾರ್ ಹೇಳಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕುರಿತು ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್, ಪಶ್ಚಿಮ ಬಂಗಾಳ, ತಮಿಳುನಾಡು ,ಆಸ್ಸಾಂ ರಾಜ್ಯಗಳಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನಗಳನ್ನು ದಾಟದೆ ಇರುವುದು ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಿದೆ. ಆಸ್ಸಾಂನಲ್ಲಿ ಕಾಂಗ್ರೆಸ್ ಗೆಲ್ಲಿಸುತ್ತೇನೆಂದು ಉಸ್ತುವಾರಿ ಹೊತ್ತಿದ್ದ ಬಿ.ಕೆ.ಹರಿಪ್ರಸಾದ್, ಡಿ.ಕೆ.ಶಿವಕುಮಾರ್ ಅವರಿಗೆ ಭಾರೀ ಮುಖಭಂಗವಾಗಿದೆ. ಮಲ್ಲೇಶ್ವರಂ ಕ್ಷೇತ್ರದ ಪಾಲಿಕೆ ಚುನಾವಣೆಯಲ್ಲೂ ಗೆಲ್ಲಲು ಶಕ್ತರಲ್ಲದ ಬಿ.ಕೆ.ಹರಿಪ್ರಸಾದ್  ಆಸ್ಸಾಂ ಚುನಾವಣೆಯಲ್ಲಿ ಗೆಲುವು ಕಂಡಿದ್ದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಗೆ ನೆಲೆಯೂರಲು ಅವಕಾಶವಿಲ್ಲವೆಂದು ಹಾಗೂ ಬಿಜೆಪಿ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆಗೆ ದೊಡ್ಡ ಪಾಠ ಕಲಿಯುವಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮತದಾರರು ಮನ್ನಣೆ ನೀಡಿರುವುದು ಸಾಬೀತಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅವನತಿಯಾಗುವುದು ನಿಶ್ಚಿತವಾಗಿದೆ ಎಂದು ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.

Key words: Decline, Congress, begins, Mysore, Former mayor, Shivakumar

The post ಕಾಂಗ್ರೆಸ್ ಅವನತಿ ಶುರು: ಮಾಜಿ ಮೇಯರ್ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നേപ്പാൾ പ്രളയം: നാടക പരാമർശത്തിൽ വിശദീകരണവുമായി ശശി തരൂർ

ന്യൂദല്‍ഹി: നേപ്പാളിലുണ്ടായ മിന്നൽപ്രളയത്തെക്കുറിച്ച് വിവരിക്കാൻ ‘ഡ്രാമ’ എന്ന വാക്ക് ഉപയോഗിച്ചതിനെത്തുടർന്ന് ഉയർന്ന...

கூடலூர்: ஆட்கொல்லி புலி விவகாரம்; 2-வது நாளாக தொடரும் வேலை நிறுத்தம்! – பதற்றத்தில் காவல்துறை!

நாட்டில் மனித - வனவிலங்கு எதிர்கொள்ளல்கள் அதிகம் நிகழும் மாவட்டங்களில் ஒன்றான...

ಮೈಸೂರು ದಸರಾ: ಅರಮನೆ ಪ್ರವೇಶ ವೇಳೆ ಗಾಬರಿಗೊಂಡ ‘ಶ್ರೀರಾಮ’ ಆನೆ

ಮೈಸೂರು,ಆಗಸ್ಟ್,28,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ...