ನವದೆಹಲಿ,ಏಪ್ರಿಲ್,29,2026 (www.justkannada.in): ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಅಲ್ಲ, ಸಿದ್ದರಾಮಯ್ಯ ಅವರೇ ಒಂದು ಶಕ್ತಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದರು.
ಅಹಿಂದ ಸಮಾವೇಶ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್ ಸಿ ಮಹದೇವಪ್ಪ, ಅಹಿಂದ ಅನ್ನೋದು ಒಂದು ಚಳವಳಿ. ಅದು ಯಾರನ್ನು ಕಟ್ಟಿಕೊಂಡು ಮಾಡಲ್ಲ. ಅಹಿಂದ ಕಾಂಗ್ರೆಸ್ ಬೇಸ್. ಸಮಾವೇಶಕ್ಕೆ ಕರೆದರೆ ಹೋಗುತ್ತೇವೆ ಎಂದರು.
ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರು ಏನು ಹೇಳಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ನಮ್ಮಲ್ಲಿ ಅಂತಿಮ ಹೈಕಮಾಂಡ್ ಯಾವಾಗ ತೀರ್ಮಾನ ಮಾಡುತ್ತದೆಯೋ ಆಗ ಸಂಪುಟ ಪುನಾರಚನೆಯಾಗುತ್ತದೆ ಎಂದರು.
Key words: Siddaramaiah, power, Minister, HC Mahadevappa
The post ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಅಲ್ಲ, ಸಿದ್ದರಾಮಯ್ಯ ಅವರೇ ಒಂದು ಶಕ್ತಿ – ಸಚಿವ HC ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





