19
April, 2026

A News 365Times Venture

19
Sunday
April, 2026

A News 365Times Venture

ನೂತನ ಜನಗಣತಿಯ ಆಧಾರದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಎಂ‌ಎಲ್‌ ಸಿ ಕೆ.ಶಿವಕುಮಾರ್

Date:

ಮೈಸೂರು,ಏಪ್ರಿಲ್, 18,2026 (www.justkannada.in): ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲಾಗಿರುವುದು ದೇಶದ ಸಾರ್ವಭೌಮದ ಹಿತದೃಷ್ಟಿಯಿಂದ ಒಳ್ಳೆಯದು. ನೂತನ ಜನಗಣತಿಯ ಆಧಾರದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಒತ್ತಾಯಿಸಿದರು.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಶಿವಕುಮಾರ್ ಅವರು, ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಮಹಿಳೆಯರ ಸಮರ್ಥವಾದ ನಾಯಕತ್ವಕ್ಕೆ ಮೀಸಲಾತಿ ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರವು ಸರ್ವಪಕ್ಷ ಸಭೆ ಕರೆಯದೆ ನೇರವಾಗಿ ವಿಶೇಷ ಅಧಿವೇಶನ ನಡೆಸಿ ಮಸೂದೆ ಮಂಡಿಸಿದೆ. ಈ ರೀತಿಯ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಜಾರಿ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಈ ಮಸೂದೆ ಪ್ರಕಾರ 2011 ರ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಿ, ಮಹಿಳಾ ಮೀಸಲಾತಿ ಕಾನೂನು ಜಾರಿ ಮಾಡುವುದಾಗಿದೆ‌. ಕ್ಷೇತ್ರ ಮರುವಿಂಗಡಣೆಯ ಹಿಂದೆ ಬಹುದೊಡ್ಡ ಹುನ್ನಾರ ಅಡಗಿದೆ. ಈಗಾಗಲೇ ಅಸ್ಸಾಂ ಹಾಗೂ ಜಮ್ಮು ಕಾಶ್ಮೀರದಲ್ಲಿ ನಡೆದಂತಹ ಕ್ಷೇತ್ರ ಮರುವಿಂಗಡಣೆ ಬೇಡವಾಗಿದೆ. ತಮಿಳುನಾಡು ಮತ್ತು ಪಶ್ಚಿಮಬಂಗಾಳ ರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಸರ್ಕಾರವು ಈ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.

ಸರ್ವಪಕ್ಷಗಳ ಸಲಹೆ ಪಡೆದುಕೊಂಡು ನೂತನ ಜಾತಿ ಜನಗಣತಿ ಆಧಾರದಂತೆ ಮಹಿಳಾ ಮೀಸಲಾತಿಯ ಪ್ರತ್ಯೇಕ ಮಸೂದೆಯನ್ನು ಮಂಡಿಸಿ ಮಹಿಳೆಯರಿಗೆ ಶಾಸನಬದ್ಧವಾದ ಅಧಿಕಾರವನ್ನು ನೀಡಬೇಕು. ಅದರಲ್ಲಿಯೂ ಮುಖ್ಯವಾಗಿ ಎಸ್.ಸಿ, ಎಸ್‌ ಟಿ, ಒಬಿಸಿ ಮಹಿಳೆಯರಿಗೆ ಈ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲು ಕಲ್ಪಿಸಬೇಕು. ಇಲ್ಲವಾದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಕುಟುಂಬದವರ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತರಾತುರಿಯಲ್ಲಿ ಜಾರಿ ಮಾಡಲು ಹೊರಟಿದ್ದ ಈ ಮಸೂದೆಗೆ ಸೋಲಾಗಿರುವುದನ್ನು ಸ್ವಾಗತಿಸುತ್ತೇನೆ. ಈ ಸಂಬಂಧ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ನಡೆ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಪೂರ್ವಗ್ರಹವಿಲ್ಲದೆ ಈ ಮಸೂದೆ ಜಾರಿ ಮಾಡಿದರೆ ಬೆಂಬಲಿಸಲಾಗುವುದು ಎಂದು ಹೇಳಿದರು.

1993ರ ಮಂಡಲ್ ಕಮಿಷನ್ ಆಧಾರದ ಮೀಸಲಾತಿಯಡಿ ಹಿಂದುಳಿದ ವರ್ಗಗಳಿಗೆ ರಾಜಕೀಯವಾಗಿ ಆಯಕಟ್ಟಿನ ಸ್ಥಾನಗಳಲ್ಲಿ ಸಂಪೂರ್ಣವಾಗಿ ಅವಕಾಶ ದೊರಕಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ದೊರಕಲು ಅಂಬೇಡ್ಕರ್ ಅವರು ನೀಡಿದ ರಾಜಕೀಯ ಮೀಸಲಾತಿ ಕಾರಣವಾಗಿದೆ. ಇಲ್ಲವಾದಲ್ಲಿ ಈ ಸಮುದಾಯಗಳು ತೊಂದರೆಗೆ ಸಿಲುಕುತ್ತಿದ್ದವು ಎಂದು ಹೇಳಿದರು.

Key words: Implement, women’s reservation, new census, MLC, K. Shivakumar

The post ನೂತನ ಜನಗಣತಿಯ ಆಧಾರದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಎಂ‌ಎಲ್‌ ಸಿ ಕೆ.ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

രാജ്യത്തെ സ്ത്രീകളോട് മാപ്പുചോദിക്കുന്നു; പ്രതിപക്ഷത്തിന് തക്കതായ ശിക്ഷ ലഭിക്കും; രാജ്യത്തെ അഭിസംബോധന ചെയ്ത് പ്രധാനമന്ത്രി

ന്യൂദൽഹി: മണ്ഡല പുനർനിർണയ, വനിതാ സംവരണ ബില്ലുകൾ പരാജയപെട്ടതിന് പിന്നാലെ രാജ്യത്തെ...

Delimitation: "மதுரை கோடை வெயிலில் வெள்ளைச் சட்டைக்கு மீண்டும் மாறியதில் மகிழ்ச்சி" – PTR

நேற்று நாடாளுமன்றத்தில் தொகுதி மறுவரையறை மசோதா தோல்வி அடைந்ததையொட்டி, தமிழ்நாடு தகவல்...

Yuzvendra Chahal: ‘క్యూట్’ మెసేజ్ వివాదం.. చాహల్ తానియా ఛటర్జీపై పరువు నష్టం దావా వేసిన చాహల్

భారత క్రికెట్ జట్టు లెగ్ స్పిన్నర్ యుజ్వేంద్ర చాహల్ ప్రస్తుతం పంజాబ్...

ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಏಪ್ರಿಲ್ ,18,2026 (www.justkannada.in): ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ...