17
April, 2026

A News 365Times Venture

17
Friday
April, 2026

A News 365Times Venture

ಜಗ್ಗಿ ವಾಸುದೇವ್ ಜೊತೆ ಡಿಕೆಶಿ ವೇದಿಕೆ ಹಂಚಿಕೊಂಡ ವಿಚಾರ: KN ರಾಜಣ್ಣ ಹೇಳಿಕೆಗೆ ಬಾಲಕೃಷ್ಣ ತಿರುಗೇಟು

Date:

ಬೆಂಗಳೂರು,ಏಪ್ರಿಲ್,16,2026 (www.justkannada.in):  ಕೇಂದ್ರ ಸಚಿವ ಅಮಿತ್‌ ಶಾ ಭಾಗವಹಿಸಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವೇದಿಕೆ ಹಂಚಿಕೊಂಡಿದ್ದಕ್ಕೆ ಕ್ರಮ ಏಕೆ ಆಗಿಲ್ಲ. ದೊರೆ ಮಾಡಿದ್ದಕ್ಕೆ ದಂಡವಿಲ್ಲವೆ ಎಂಬ ಮಾಜಿ ಸಚಿವ ಕೆ ಎನ್ ರಾಜಣ್ಣ ಪ್ರಶ್ನೆಗೆ ಕಾಂಗ್ರೆಸ್ ಶಾಸಕ ಮಾಗಡಿ ಹೆಚ್ ಸಿ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಬಾಲಕೃಷ್ಣ, ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ರಾಹುಲ್‌ ಗಾಂಧಿ ಯಾರು ಎಂಬ ಪಾಠವನ್ನು ಡಿಕೆ ಶಿವಕುಮಾರ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ನಾವೆಲ್ಲ ರಾಹುಲ್ ಗಾಂಧಿಯಿಂದ ಬೆಳೆದವರು. ಎಲ್ಲಾ ಪಕ್ಷದಲ್ಲೂ ದೊರೆಗೆ ದಂಡವಿಲ್ಲ ಎಂಬ ಸ್ಥಿತಿ ಇದೆ. ರಾಹುಲ್ ಗಾಂಧಿ ಪಕ್ಷದವರು. ನಮ್ಮನ್ನು ಕರೆಯುವ ಶಕ್ತಿ ಕೊಟ್ಟಿದ್ದು ರಾಹುಲ್ ಗಾಂಧಿ ಎಂದು ತಿಳಿದಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.

ಸಿದ್ದರಾಮಯ್ಯ 5 ವರ್ಷ ಸಿಎಂ ಎಂಬ ಮತ್ತೆ ಎಂಎಲ್ ಸಿ ಯತೀಂದ್ರ  ಸಿದ್ದರಾಮಯ್ಯ ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಬಾಲಕೃಷ್ಣ, ಪದೇ ಪದೇ ಯಾಕೆ ಹೇಳಿಕೆ ಕೊಡುತ್ತಾರೋ ಗೊತ್ತಿಲ್ಲ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಬೇಕು. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂದರು.

Key words: DK Shivakumar, Jaggi Vasudev, HC Balakrishna, KN Rajanna

The post ಜಗ್ಗಿ ವಾಸುದೇವ್ ಜೊತೆ ಡಿಕೆಶಿ ವೇದಿಕೆ ಹಂಚಿಕೊಂಡ ವಿಚಾರ: KN ರಾಜಣ್ಣ ಹೇಳಿಕೆಗೆ ಬಾಲಕೃಷ್ಣ ತಿರುಗೇಟು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ആർ.എസ്.എസ് നൂറാം വാർഷികത്തിന് പൊതു ഖജനാവിൽ നിന്നും ചെലവാക്കിയത് 76.13 ലക്ഷം

ന്യൂദൽഹി: ആർ.എസ്.എസ് ജന്മ ശതാബ്‌ദി ആഘോഷങ്ങൾക്ക് പൊതു ഖജനാവിൽ നിന്നും ചെലവാക്കിയത്...

20 பேர் பலியான சத்தீஸ்கர் ஆலை விபத்து: வேதாந்தா நிறுவனர் அனில் அகர்வால் மீது வழக்குப் பதிவு!

சத்தீஸ்கர் மாநிலத்தின் சக்தி மாவட்டத்தில் அமைந்துள்ள வேதாந்தா மின் நிலையத்தின் கொதிகலனில்...

ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ: 6 ಮಂದಿ ಸಜೀವ ದಹನ

ಯಾದಗಿರಿ,ಏಪ್ರಿಲ್,17,2026 (www.justkannada.in): ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ...