30
August, 2026

A News 365Times Venture

30
Sunday
August, 2026

A News 365Times Venture

ಎಪಿಎಂಸಿಗಳಲ್ಲಿ 70 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ: ಸಚಿವ ಶಿವಾನಂದ ಪಾಟೀಲ್

Date:

ಬೆಂಗಳೂರು,ಮಾರ್ಚ್,10,2026 (www.justkannada.in):  ಪ್ರಸಕ್ತ ಹಣಕಾಸು ವರ್ಷದ ಜನವರಿ ಅಂತ್ಯಕ್ಕೆ ರಾಜ್ಯದ ಎಪಿಎಂಸಿಗಳಲ್ಲಿ ಒಟ್ಟು 71 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದರು.

ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಟಿ.ಶರವಣ ಅವರು ಕೇಳಿದ  ಪ್ರಶ್ನೆಗೆ ಉತ್ತರ ನೀಡಿರುವ ಸಚಿವ ಶಿವಾನಂದ್ ಪಾಟೀಲ್, ಕಳೆದ ಹಣಕಾಸು ವರ್ಷದಲ್ಲಿ 82 ಲಕ್ಷ ಕೋಟಿ ರೂ.  ವಹಿವಾಟು ನಡೆದಿತ್ತು. ಈ ಬಾರಿ 71 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ. 476.65 ಕೋಟಿ ರೂ. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 170 ಎಪಿಎಂಸಿಗಳಿವೆ. ಅಂಗಡಿಗಳ ಹಂಚಿಕೆ ಪ್ರಕ್ರಿಯೆ ನಿರಂತರವಾಗಿದ್ದು, 141 ಎಪಿಎಂಸಿಗಳಲ್ಲಿ ಅಂಗಡಿ ಹರಾಜು ಬಾಕಿ ಇದ್ದು, ಕ್ರಮ ಕೈಗೊಳ್ಳಲು ಸಮಿತಿಗಳಿಗೆ ಸೂಚನೆ ನೀಡಲಾಗಿದೆ. ವಾಣಿಜ್ಯ ಸ್ವರೂಪದ ಚಿಕ್ಕ ಮಳಿಗೆಗಳನ್ನು 55 ತಿಂಗಳ ಹಂಚಿಕೆ ಅವಧಿ ಮುಕ್ತಾಯವಾದ ನಂತರ ಮತ್ತೆ ಮುಂದುವರಿಸಲು ಅವಕಾಶ ಇಲ್ಲ. ಅಂತಹ ಅಂಗಡಿಗಳನ್ನು ಹೊಸದಾಗಿ ಟೆಂಡರ್‌ ಕರೆದು ಬೇಡಿಕೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಶಿವಾನಂದ್ ಪಾಟೀಲ್ ಉತ್ತರಿಸಿದರು.

Key words: 70 lakh crore, rupees, APMCs, Minister, Shivanand Patil

The post ಎಪಿಎಂಸಿಗಳಲ್ಲಿ 70 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ: ಸಚಿವ ಶಿವಾನಂದ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

“ಗೋದಿ ಮೀಡಿಯಾ “ ಟ್ಯಾಗ್‌ ಲೈನ್‌ ಕಳಚಲು ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ: ಡಾ.ಯತೀಂದ್ರ.

  ಮೈಸೂರು, ಆ.29, 2026:  ದೇಶದಲ್ಲಿ ಮಾಧ್ಯಮದ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು...

ട്രംപ് ഭരണകൂടത്തിലെ ചിലര്‍ ആഗോള ഊര്‍ജ വിപണിയെ സ്വാധീനിക്കാന്‍ ഇടപെടുന്നതായി അരാഗ്ചി

ടെഹ്‌റാന്‍: യു.എസിലെ ഡൊണാള്‍ഡ് ട്രംപ് ഭരണകൂടത്തിലെ ചിലര്‍ ആഗോള ഊര്‍ജ വിപണികളെ...

"மோடிக்கு இணையாக இன்னொரு பிரதமரை சிந்தித்துக்கூட பார்க்க முடியாது"- விஜய் குறித்து தமிழிசை

இந்தியாவின் அடுத்த பிரதமர் விஜய் தான் என்று தவெகவினர் கூறி வருகின்றனர்....

Ram Mohan Naidu: ‘పీ4’ విధానంలో శ్రీకాకుళం జిల్లాకు ‘ఎ’ గ్రేడ్.. ప్రశంసించిన కేంద్ర మంత్రి..

రెండేళ్లలో నేరిడి బ్యారేజీ పూర్తి చేసి తీరతామని కేంద్ర పౌర విమానయాన...