20
April, 2026

A News 365Times Venture

20
Monday
April, 2026

A News 365Times Venture

ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ತಡೆ, ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಶಾಸಕರ ಆಗ್ರಹ..

Date:

ಮೈಸೂರು,ಫೆಬ್ರವರಿ,7,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ತಡೆಗೆ ಮತ್ತು  ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಗೆ  ಶಾಸಕರು ಆಗ್ರಹಿಸಿದ್ದಾರೆ.

ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಶ್ರೀವತ್ಸ ಆಗ್ರಹ, ಟೂರಿಸ್ಟ್ ಫ್ರೆಂಡ್ಲಿ, ಪೀಪಲ್ ಫ್ರೆಂಡ್ಲಿ ಎನ್ನುವಂತಹ ವಾತಾವರಣ ನಿರ್ಮಿಸಬೇಕು. ಶುಕ್ರವಾರ, ಶನಿವಾರ, ಭಾನುವಾರ ಮೈಸೂರಿನ ಹೃದಯ ಭಾಗದಲ್ಲಿ ವಿಪರೀತ ಟ್ರಾಫಿಕ್ ಜಾಮ್ ಆಗುತ್ತಿದೆ. ಪರಿಣಾಮ ದೂರದ ಊರುಗಳಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಟ್ರಾಫಿಕ್ ನಲ್ಲಿ ಸಿಲುಕಿ‌‌ ಪರದಾಡುತ್ತಿದ್ದಾರೆ. ಹಾಗಾಗಿ ಮೈಸೂರಿನ ಹೃದಯ ಭಾಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾನು ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಬಿ ಫಾರ್ಮ್ ಕೊಟ್ಟಿದ್ದು ಪರಮೇಶ್ವರ್ ಅವರು.ಅವರು ಬಿ ಫಾರ್ಮ್ ಕೊಟ್ಟ ಕಾರಣ ನಾನು 29 ವರ್ಷಕ್ಕೇ ಶಾಸಕನಾಗಲು ಸಾಧ್ಯವಾಯಿತು. ನಾನು ಅವರಿಗೆ ಚಿರ ಋಣಿಯಾಗಿರುತ್ತೇನೆ. ಗೃಹ ಸಚಿವ ಪರಮೇಶ್ವರ್ ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಇತ್ತೀಚಿಗೆ ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಈ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಅದರಲ್ಲೂ ಇಂಜಿನಿಯರಿಂಗ್, ಮೆಡಿಕಲ್, ಬಿಎ., ಬಿಕಾಂ., ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಸಮಾರಂಭದಲ್ಲಿ ಎಂಎಲ್ ಸಿ.  ಸಿ ಎನ್ ಮಂಜೇಗೌಡ ಮಾತನಾಡಿ, ಪೊಲೀಸರ ವಸತಿ ಗೃಹಗಳ ನವೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸರು ಹಗಲಿರುಳೆನ್ನದೇ ಕರ್ತವ್ಯ ‌ನಿರ್ವಹಿಸುತ್ತಿದ್ದಾರೆ.. ಪೊಲೀಸರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ರಾಜಕಾರಣಿ ಬೆಳೆಯ ಬೇಕಾದರೆ ಪೊಲೀಸರ ನೆರವು ಅಗತ್ಯ. ಹಾಗಾಗಿ ರಾಜಕಾರಣಿ ಬೆಳೆದ ನಂತರ ಪೊಲೀಸರಿಗೆ ನೆರವು ನೀಡಬೇಕು ಎಂದರು.

Key words: MLAs, stop, drug, solve, traffic jam, problem, Mysore.

The post ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ತಡೆ, ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಶಾಸಕರ ಆಗ್ರಹ.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

2027ല്‍ യു.പിയില്‍ സമാജ്‌വാദി പാര്‍ട്ടി അധികാരത്തിലെത്തും; കോണ്‍ഗ്രസ് സഖ്യം തുടരുമെന്ന് അഖിലേഷ് യാദവ്

ലഖ്നൗ: വരാനിരിക്കുന്ന 2027ലെ നിയമസഭാ തെരഞ്ഞെടുപ്പില്‍ ഉത്തര്‍പ്രദേശില്‍ സമാജ്‌വാദി പാര്‍ട്ടി വന്‍...

`ராயபுரத்தால் நான்… ராயபுரத்துக்காக நான்!' – `இஸ்லாமியர்களின் செல்லப்பிள்ளை’ டி.ஜெயக்குமார்

ராயபுரத்தில் ஐந்து முறை சட்டமன்ற உறுப்பினராக இருந்த டி.ஜெயக்குமார் ஏழாவது முறையாகத்...

Iran-US Talks: చిత్తశుద్ధి లేదు.. అమెరికాతో చర్చలు ఉండబోవన్న ఇరాన్

ఇరాన్‌తో రెండో విడత చర్చల కోసం జేడీ వాన్స్ బృందం సోమవారం...

ಮೀಸಲಾತಿ ಹೋರಾಟ ಆರಂಭ ಬಳಿಕ ಇಂತಹ ಬೆದರಿಕೆ: ತನಿಖೆ ನಡೆಯಲಿ- ಬಸವ ಜಯಮೃತ್ಯುಂಜಯ ಸ್ವಾಮೀಜಿ

ನವದೆಹಲಿ,ಏಪ್ರಿಲ್,20,2026 (www.justkannada.in):   ತಮ್ಮ ವಿರುದ್ದ ಕೇಳಿ ಬಂದಿರುವ ಮಹಿಳೆ ಮೇಲೆ...