18
April, 2026

A News 365Times Venture

18
Saturday
April, 2026

A News 365Times Venture

ಬೂದನೂರು ಉತ್ಸವ ಅಂಗವಾಗಿ ಹೆಲಿಟೂರಿಸಂ: ಸುರಕ್ಷತಾ ಕ್ರಮಗಳನ್ನು ವಹಿಸಿ- ಜಿಲ್ಲಾಧಿಕಾರಿ ಡಾ. ಕುಮಾರ

Date:

ಮಂಡ್ಯ. ಫೆಬ್ರವರಿ,7,2026 (www.justkannada.in): ಬೂದನೂರು ಉತ್ಸವ ಅಂಗವಾಗಿ ಫೆಬ್ರವರಿ 20 ರಿಂದ 22 ರವರೆಗೆ ಹೆಲಿಟೂರಿಸಂ ಆಯೋಜನೆ ಮಾಡಲಾಗುತ್ತಿದ್ದು ಹೆಲಿಪ್ಯಾಡ್ ನಿಲ್ದಾಣದ  ಸ್ಧಳದಲ್ಲಿ  ಎಲ್ಲಾ ರೀತಿಯ ಸುರಕ್ಷತ ಕ್ರಮಗಳನ್ನು ಅನುಸರಿಸಬೇಕು ಎಂದು ಮಂಡ್ಯ  ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.

ಬೂದನೂರು ಉತ್ಸವ ಅಂಗವಾಗಿ ಜಿಲ್ಲೆಯಲ್ಲಿ 20, 21,22 ರಂದು ಹೆಲಿ ಟೂರಿಸಂ ಅನ್ನು ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. ಹೆಲಿ ಟೂರಿಸಂ ಮೂರು ದಿನ ಇರುವುದರಿಂದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಲೈಟಿಂಗ್ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮಗಳನ್ನು ಕೖಗೊಂಡು  ಪ್ರಥಮ ಚಿಕಿತ್ಸೆಗೆ ಬೇಕಾಗುವ ಔಷಧಿಗಳು ಮತ್ತು ನುರಿತ ವೈದ್ಯರು ಹಾಗೂ ಅಧಿಕಾರಿಗಳು ನಿಗದಿತ ಸ್ಥಳದಲ್ಲಿ ನೇಮಿಸಬೇಕು ಹಾಗೂ ಆಂಬುಲೆನ್ಸ್ ವ್ಯವಸ್ಥೆ ಇರಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅವಘಡ ಉಂಟಾಗದಂತೆ ಅಗ್ನಿಶಾಮಕ ದಳದವರು ನೋಡಿಕೊಳ್ಳಬೇಕು ಹಾಗೂ ಅಗ್ನಿಶಾಮಕ ದಳದ ವಾಹನ ಸ್ಧಳದಲ್ಲಿರಬೇಕು. ಟಿಕೆಟ್ ಕೌಂಟರ್ ಸ್ಥಾಪಿಸಿ ಹೆಲಿಪ್ಯಾಡ್ ನ ನಿಯಮದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಾರ್ವಜನಿಕರಿಗೆ ಹೆಲಿಪ್ಯಾಡ್ ಮೂಲಕ ಬೂದನೂರು ಉತ್ಸವವನ್ನು ಕಣ್ತುಂಬಿಕೊಳ್ಳಲು ಒಬ್ಬರಿಗೆ 3,800 ರೂಪಾಯಿಗಳನ್ನು ಪಾವತಿಸಬೇಕಾಗಿರುತ್ತದೆ. ಒಬ್ಬರಿಗೆ 7 ನಿಮಿಷಗಳ ಕಾಲಾವಕಾಶ ಇದ್ದು 5 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿರುವುದಿಲ್ಲ ಎಂದು ಡಿಸಿ ಡಾ. ಕುಮಾರ ಸೂಚಿಸಿದರು

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ ವಿ.ಜೆ.ಶೋಭಾರಾಣಿ ಮಾತನಾಡಿ ಸಾರ್ವಜನಿಕರು ಸರದಿ ಸಾಲಿನಲ್ಲಿ ಟಿಕೆಟ್ ಗಳನ್ನು ಪಡೆಯಬೇಕು. ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಾಟರ್ ಬಾಟಲ್ ಫೋನ್ ಗಳನ್ನು ನಿಷೇಧಿಸಲಾಗಿರುತ್ತದೆ. ಸಾರ್ವಜನಿಕರಿಗೆ ಹೆಲಿಪ್ಯಾಡ್ ಗೆ ಹೋಗಲು ಇರುವ ಮಾರ್ಗದಲ್ಲಿ ಹೋಗುವಂತೆ ಸೂಚಿಸಬೇಕು. ಸಾರ್ವಜನಿಕರು ಹೆಲಿಪ್ಯಾಡ್ ಮೂಲಕ ಪ್ರಯಾಣಿಸಲು ತಮ್ಮ ಗುರುತಿನ ಚೀಟಿಯನ್ನು  ಕಡ್ಡಾಯವಾಗಿ ತರಬೇಕು. ಎಂದು ಹೇಳಿದರು.

ಉಪವಿಭಾಗಾಧಿಕಾರಿ ಶಿವಮೂರ್ತಿ, ಅಗ್ನಿಶಾಮಕ ದಳದ ಅಧೀಕ್ಷಕರು ರಾಘವೇಂದ್ರ, ವಿಮ್ಸ್ ನ ನಿರ್ದೇಶಕ ನರಸಿಂಹಮೂರ್ತಿ, ಡಾ. ಜವರೇಗೌಡ, ಡಾ. ವೀರಭದ್ರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

Key words: Helitourism, Budanur festival, Mandya DC, Dr. Kumar

The post ಬೂದನೂರು ಉತ್ಸವ ಅಂಗವಾಗಿ ಹೆಲಿಟೂರಿಸಂ: ಸುರಕ್ಷತಾ ಕ್ರಮಗಳನ್ನು ವಹಿಸಿ- ಜಿಲ್ಲಾಧಿಕಾರಿ ಡಾ. ಕುಮಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘ആ നുണയും മായ്ച്ചു; വയനാട് ടൗണ്‍ഷിപ്പിലെ വീടിന് വിള്ളലെന്നത് വ്യാജ വാര്‍ത്തയെന്ന് മന്ത്രി കെ. രാജന്‍; നേരിട്ടെത്തി പരിശോധന

കല്പറ്റ: വയനാട് ദുരന്തബാധിധർക്കായി സർക്കാർ നിർമിച്ച വീടുകളിൽ വിള്ളൽ കണ്ടെന്ന വാർത്തയെ...

"தமிழக மக்களை சொந்த நாட்டிலேயே அகதிகளாக்க பார்த்த பாஜக, ஏவல் அடிமைகள் அதிமுக" – ஸ்டாலின்

நாடாளுமன்றத்தில் தொகுதி மறுவரையறை மசோதா தோல்வியைத் தழுவியதையொட்டி, தமிழ்நாடு முதலமைச்சர் ஸ்டாலின்...

Shreyas Iyer: ‘సర్పంచ్ సాబ్’.. శ్రేయస్ అయ్యర్‌కు ఆ పేరు ఎలా వచ్చిందో తెలుసా?

Shreyas Iyer: ఐపీఎల్‌లో పంజాబ్ కింగ్స్ జట్టును సక్సెస్‌పుల్‌గా నడిపిస్తున్న సారథిగా...

 ಸಚಿವ ಸ್ಥಾನದಿಂದ ಜಮೀರ್ ಇಳಿಸೋದು ಕೇವಲ ಊಹಾಪೋಹ- ದಿನೇಶ್ ಗುಂಡೂರಾವ್

ಮಂಗಳೂರು,ಏಪ್ರಿಲ್,18,2026 (www.justkannada.in):  ಸಚಿವ ಸ್ಥಾನದಿಂದ ಜಮೀರ್ ಅಹ್ಮದ್ ಖಾನ್ ಅವರನ್ನ...