3
May, 2026

A News 365Times Venture

3
Sunday
May, 2026

A News 365Times Venture

ಜೈಲಿನಲ್ಲಿ ರಾಜಾತಿಥ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ: ಸಿಎಂ ರಾಜೀನಾಮೆಗೆ ಒತ್ತಾಯ

Date:

ಬೆಂಗಳೂರು,ನವೆಂಬರ್,10,2025 (www.justkannada.in): ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯವನ್ನು ಖಂಡಿಸಿ ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ನಗರದ ಶಿವಾನಂದ ಸರ್ಕಲ್ ಬಳಿ ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ  ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಅಶ್ವಥ್ ನಾರಾಯಣ್, ಎಂಎಲ್ ಸಿ ಸಿ.ಟಿ ರವಿ ಸೇರಿದಂತೆ ಹಲವು ಭಾಗಿಯಾಗಿದ್ದಾರೆ.

ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ  ಸಿಎಂ ನಿವಾಸದಲ್ಲಿ ಬಿಗಿ ಪೊಲೀಸ್ ಭದ್ರತೆ  ಮಾಡಲಾಗಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಆರ್.ಅಶೋಕ್,  ಕರ್ನಾಟಕದ ಜೈಲುಗಳು ಭಯೋತ್ಪಾದಕರಿಗೆ ಸ್ವರ್ಗವಾಗಿದೆ.  ಪಂಚತಾರ ಹೋಟೆಲ್ ಗಿಂತ ಹೆಚ್ಚು ಸೌಲಭ್ಯಗಳನ್ನ ಕಾಂಗ್ರೆಸ್ ನೀಡುತ್ತಿದೆ. ಕಾಂಗ್ರೆಸ್ ಜಾತ್ಯಾತೀತ ಪಕ್ಷವಾಗಿ ಉಳಿದಿಲ್ಲ ಎರಡು ವರ್ಷದಿಂದ ಜೈಲಿನಲ್ಲಿ ಭಯೋತ್ಪಾದಕನಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿದರು.

Key words:  BJP, protest, against, government, jail, Royal hospitality

The post ಜೈಲಿನಲ್ಲಿ ರಾಜಾತಿಥ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ: ಸಿಎಂ ರಾಜೀನಾಮೆಗೆ ಒತ್ತಾಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മാപ്പ് മാപ്പ് മാപ്പ്; സവര്‍ക്കര്‍ ബ്രിട്ടീഷ് ഭരണകാലത്ത് അഞ്ച് തവണ മാപ്പപേക്ഷ നല്‍കിയിരുന്നു: ചെറുമകന്‍

ന്യൂദല്‍ഹി: തീവ്ര ഹിന്ദുത്വവാദിയായ സവര്‍ക്കര്‍ ബ്രിട്ടിഷ് ഭരണകാലത്ത് അഞ്ച് തവണ മാപ്പപേക്ഷ...

Donald Trump: జర్మనీకి డబుల్ షాక్ ఇచ్చిన ట్రంప్..

Donald Trump: అమెరికా అధ్యక్షుడు జర్మనీ టార్గెట్ చేసుకుంటోంది. డొనాల్డ్ ట్రంప్...

50 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸರ್ವೇ ಸೂಪರ್ ವೈಸರ್

ದಾವಣಗೆರೆ,ಮೇ,2,2026 (www.justkannada.in):  50 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಸರ್ವೇ...