28
March, 2026

A News 365Times Venture

28
Saturday
March, 2026

A News 365Times Venture

ಸರಗೂರು ಹುಲಿ ದಾಳಿ ವ್ಯಕ್ತಿ ಸಾವು: ನಿರ್ಲಕ್ಷ್ಯವಿದ್ದರೆ ಕ್ರಮ- ಸಚಿವ ಈಶ್ವರ್ ಖಂಡ್ರೆ

Date:

ಮೈಸೂರು, ಅಕ್ಟೋಬರ್, 27,2025 (www.justkannada.in): ಸರಗೂರು ತಾಲೂಕು ಬೆಣ್ಣೆಗೆರೆ (ಮುಳ್ಳೂರು) ಬಳಿ ನಿನ್ನೆ ನಡೆದ ಹುಲಿ ದಾಳಿ ತೀವ್ರ ನೋವು ತಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ  ತಿಳಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದ ಸಚಿವ ಈಶ್ವರ್ ಖಂಡ್ರೆ ಅವರು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ, ನಿನ್ನೆ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹುಲಿಯ ಓಡಾಟದ ಬಗ್ಗೆ ದೂರು ಬಂದಿದ್ದರೂ ಬೋನು ಇಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರೆ, ಎಚ್.ಡಿ. ಕೋಟೆ, ಸರಗೂರಿನಲ್ಲೇ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ಇದ್ದರೂ, ಮೈಸೂರಿಗೆ ಏಕೆ ತಂದರು ಎಂಬ ಬಗ್ಗೆ ತನಿಖೆ ಮಾಡಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಮಾನವ ವನ್ಯಜೀವಿ ಸಂಘರ್ಷ ಇಂದು ನಿನ್ನೆಯದಲ್ಲ ಹಿಂದಿನಿಂದಲೂ ಇದೆ. ಅರಣ್ಯದಂಚಿನ ಗ್ರಾಮದ ಜನರು ವನ್ಯ ಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.

ಸರಗೂರು ಬಳಿ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಮೃತದೇಹವನ್ನು ಮೈಸೂರಿಗೆ ತಂದಿರುವ ವಿಚಾರ ತಮಗೆ ಮೈಸೂರಿಗೆ ಬರುವ ಮಾರ್ಗದಲ್ಲಿ ತಿಳಿಯಿತು.  ಅಂತಿಮ ನಮನ ಸಲ್ಲಿಸಲು ಬಂದಿದ್ದೇನೆ. ಮೈಸೂರಿಗೆ ಏಕೆ ಪಾರ್ಥೀವ ಶರೀರ ತಂದಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

Key words: Man dies, tiger attack, Action, negligence, Minister, Ishwar Khandre

The post ಸರಗೂರು ಹುಲಿ ದಾಳಿ ವ್ಯಕ್ತಿ ಸಾವು: ನಿರ್ಲಕ್ಷ್ಯವಿದ್ದರೆ ಕ್ರಮ- ಸಚಿವ ಈಶ್ವರ್ ಖಂಡ್ರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪ್ರಚಾರದ ವೇಳೆ ಹೈಡ್ರಾಮಾ: ‘ಕೈ’ಶಾಸಕ ಪ್ರದೀಪ್ ಈಶ್ವರ್ ಗೆ ಚಪ್ಪಲಿ , ಪೊರಕೆ ಪ್ರದರ್ಶನ

ದಾವಣಗೆರೆ,ಮಾರ್ಚ್,28,2026 (www.justkannada.in):  ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣಾ ಕಣ ರಂಗೇರಿದ್ದು...

ഇറാനിലെ കരയുദ്ധം അമേരിക്കയെ ചെളിക്കുണ്ടിലാക്കും; വിയറ്റ്നാം ആവര്‍ത്തിക്കുമെന്ന മുന്നറിയിപ്പുമായി റഷ്യ

മോസ്‌കോ: ഇറാനെതിരായ ഏതൊരാക്രമണത്തിന്റെയും വിധി പരാജയമായിരിക്കുമെന്ന് അമേരിക്കയ്ക്ക് മുന്നറിയിപ്പുമായി റഷ്യന്‍ സുരക്ഷാ...

நாமக்கல்: `தொகுதி வேட்பாளரை மாற்ற வேண்டும்'- தங்கமணிக்கு எதிராக கட்சி நிர்வாகிகள் போர்க்கொடி

நாமக்கல் மாவட்டத்தில் முன்னாள் அமைச்சர் தங்கமணிக்கு எதிராக கட்சி நிர்வாகிகள் போர்க்கொடி...

India Receives Good News Amid Conflict: యుద్ధం మధ్యలో భారత్‌కు శుభవార్త..

India Receives Good News Amid Conflict: మధ్యప్రాచ్యంలో కొనసాగుతున్న యుద్ధ...