29
March, 2026

A News 365Times Venture

29
Sunday
March, 2026

A News 365Times Venture

ಎಸ್ ಬಿಎಂ ಬಡಾವಣೆ ನಿವಾಸಿಗಳ ಸಮಸ್ಯೆ ನಿವಾರಣೆಗೆ ಆದ್ಯತೆ –MLC ಡಾ. ಕೆ .ಶಿವಕುಮಾರ್

Date:

ಮೈಸೂರು,ಅಕ್ಟೋಬರ್,4,2025 (www.justkannada.in): ಬೋಗಾದಿಯ ಎಸ್ ಬಿಎಂ ಬಡಾವಣೆಯ ನಿವಾಸಿಗಳ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಕೆ ಶಿವಕುಮಾರ್ ತಿಳಿಸಿದರು.

ವಿಧಾನಪರಿಷತ್ ಸದಸ್ಯರಾಗಿ ನಾಮಕರಣಗೊಂಡಿರುವ  ಡಾ. ಕೆ .ಶಿವಕುಮಾರ್ ಅವರನ್ನು ಬೋಗಾದಿಯ ಎಸ್ ಬಿ ಎಂ ಬಡಾವಣೆಯ ಹಿರಿಯ ನಾಗರಿಕರು ಅಭಿನಂದಿಸಿದರು.

ಎಸ್ ಬಿಎಂ ಲೇಔಟ್ ನಲ್ಲಿ ಖಾಲಿ ನಿವೇಶನಗಳಲ್ಲಿ ಕಸಗಳನ್ನು ಬೇಕಾಬಿಟ್ಟಿಯಾಗಿ ಲಾರಿಯಲ್ಲಿ ತಂದು ಬಿಸಾಡುತ್ತಿದ್ದಾರೆ. ರಸ್ತೆಗಳು ಗುಂಡಿಮಯವಾಗಿದೆ, ನೀರಿನ ಸಮಸ್ಯೆ ಹೆಚ್ಚಾಗಿದೆ, ವಿದ್ಯುತ್  ಸಮಸ್ಯೆ, ರಸ್ತೆಗಳ ಇಕ್ಕಳುಗಳಲ್ಲಿ , ಗಿಡಗಂಟಿಗಳು ಬೆಳೆದು ನಿಂತಿವೆ. ಬಹುಮುಖ್ಯವಾಗಿ ಬಡವಣೆಯಲ್ಲಿ ಮನೆ ಕಟ್ಟಲು ನಕ್ಷೆಗಳು ಅನುಮೋದನೆ ಆಗುತ್ತಿಲ್ಲ,  ಮನೆ ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ, ಇ- ಸ್ವತ್ತು ಮಾಡಿಕೊಡುತ್ತಿಲ್ಲ . ಇದರಿಂದ ತುಂಬಾ ತೊಂದರೆಯನ್ನು ಅನುಭವಿಸಬೇಕಾಗಿದೆ ಎಂದು ಮನವಿ ಮಾಡಿದರು.

ನಂತರ ಕೆ.ಶಿವಕುಮಾರ್ ಮಾತನಾಡಿ, ಶೀಘ್ರದಲ್ಲಿ ತಮ್ಮ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿ ಬಗೆಹರಿಸಲಾಗುವು ಎಂದು ಭರವಸೆ ನೀಡಿದರು. ನಾನು ಕೂಡ ಈ ಬಡಾವಣೆಯ ನಿವಾಸಿಯಾಗಿದ್ದು ಸಮಸ್ಯೆಗಳ ಅರಿವಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ವೈ. ಎಸ್. ನಾಗರಾಜ್, ರಾಘವೇಂದ್ರ ಬಲ್ಲಾಳ, ಎಂ. ನಾಗರಾಜ್, ನಿವಾಸಿಗಳ ಸಂಘದ ಮಾಜಿ ಅಧ್ಯಕ್ಷ ಸ್ವಾಮಿ, ರಾಮಚಂದ್ರು, ಪರಶಿವಮೂರ್ತಿ, ಚಂದ್ರಶೇಖರಪ್ಪ, ರಂಗನಾಥ್, ರಾಮಕೃಷ್ಣ, ಕುಮಾರಸ್ವಾಮಿ, ರಮೇಶ್ ಮುಂತಾದವರು ಉಪಸ್ಥಿತರಿದ್ದರು.

Key words: Mysore, SBM Layout, residents, problems, resolving MLC, Dr. K. Shivakumar

The post ಎಸ್ ಬಿಎಂ ಬಡಾವಣೆ ನಿವಾಸಿಗಳ ಸಮಸ್ಯೆ ನಿವಾರಣೆಗೆ ಆದ್ಯತೆ –MLC ಡಾ. ಕೆ .ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಹಿಂದಿ ಕಲಿಯಬಾರದು ಅಂತೇನಿಲ್ಲ, ಆದ್ರೆ ಪರೀಕ್ಷೆ ಕಡ್ಡಾಯವಾಗಬಾರದಷ್ಟೆ- ಸಿಎಂ ಸಿದ್ದರಾಮಯ್ಯ

ಮೈಸೂರು,ಮಾರ್ಚ್,28,2026 (www.justkannada.in): ರಾಜ್ಯದಲ್ಲಿಈ ವರ್ಷದಿಂದಲೇ ದ್ವಿಭಾಷಾ ನೀತಿ ಜಾರಿ ಮಾಡಲಾಗುತ್ತದೆ. ...

ഐ.പി.എല്ലില്‍ ചരിത്രം കുറിച്ച സഞ്ജുവിന്റെ സെഞ്ച്വറി; വമ്പന്‍ ലിസ്റ്റില്‍ ഇടം നേടി ഇഷാന്‍ കിഷനും

ഐ.പി.എല്ലിലെ ഓപ്പണിങ് മത്സരത്തില്‍ തകര്‍പ്പന്‍ വിജയമാണ് റോയല്‍ ചലഞ്ചേഴ്സ് ബെംഗളൂരു സ്വന്തമാക്കിയത്....

தவெக: நீண்ட கால பணியாளரின் மகனை வேட்பாளராக்கிய விஜய்! – பின்னணி என்ன?

தவெகவின் வேட்பாளர் பட்டியலை இன்று விஜய் வெளியிட்டுள்ளார். சென்னை விருகம்பாக்கம் தொகுதியில்...

IAS Officer Transfers: ఏపీలో పలువురు ఐఏఎస్‌ అధికారుల బదిలీలు!

AP IAS Officer Transfers 2026: ఆంధ్రప్రదేశ్‌ రాష్ట్రంలో మరోసారి ఉన్నతాధికారుల...