24
September, 2026

A News 365Times Venture

24
Thursday
September, 2026

A News 365Times Venture

ಬೋಧಕೇತರ ಹುದ್ದೆಗೆ ಪ್ರೌಢಶಾಲಾ ಶಿಕ್ಷಕರು..!

Date:

ಬೆಂಗಳೂರು,ಆಗಸ್ಟ್,22,2025 (www.justkannada.in):  ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದನ್ನು ಹೊರತುಪಡಿಸಿ ಬೇರೆ  ಕಾರ್ಯಕ್ಕೆ ನಿಯೋಜಿಸಬಾರದೆಂದು ಸುಪ್ರೀಂ ಕೋರ್ಟ್ ಆದೇಶವೇ ಇದೆ.  ಆದರೆ ಇದೀಗ ಬೋಧಕೇತರ ಹುದ್ದೆಗೆ ಪ್ರೌಢಶಾಲಾ ಶಿಕ್ಷಕರನ್ನ ನೇಮಕ ಮಾಡಿ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿಗೆ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ಬಂದಿರುವ ರಶ್ಮಿ ಮಹೇಶ್  ಅವರು ಶಿಕ್ಷಕರನ್ನು ಬೋಧನೆಯಲ್ಲಿ ತೊಡಗಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಆದರೆ ದಿನಾಂಕ 20/08/2025 ರಂದು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ವರ್ಗಾವಣೆ ಆದೇಶ ಸುಪ್ರೀಂ ಕೋರ್ಟ್ ಆದೇಶವನ್ನೂ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ಆಶಯವನ್ನೂ ಗಾಳಿಗೆ ತೂರಿದಂತೆ ಕಾಣುತ್ತಿದೆ.

ಜಿಲ್ಲೆಗಳ ಡಯಟ್ ಹಾಗೂ ಸಿಟಿಇ ಗಳಲ್ಲಿರುವ ತಂತ್ರಜ್ಞರು, ತಾಂತ್ರಿಕ ಸಹಾಯಕರು, ಕಾರ್ಯಕ್ರಮ ಸಹಾಯಕರು , ಅಂಕಿ ಸಂಖ್ಯಾ ಸಹಾಯಕರು, ಮುಂತಾದ ಬೋಧಕೇತರ ಹುದ್ದೆಗಳಿಗೆ ರಾಜ್ಯದ ವಿವಿಧ ಪ್ರೌಢಶಾಲಾ ಸಹ ಶಿಕ್ಷಕರನ್ನು ವರ್ಗಾವಣೆ ಮಾಡಿಲಾಗಿದ್ದು,  ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ವರ್ಗಾವಣೆಗಳು ಪ್ರಸ್ತುತ SSLC ವಿದ್ಯಾರ್ಥಿಗಳು ಅರ್ಧ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಲ್ಲವೇ? ಈ ಬಗ್ಗೆ ಇಲಾಖೆಯ ಮಂತ್ರಿಗಳು , ಪ್ರಧಾನ ಕಾರ್ಯದರ್ಶಿಗಳು ಗಮನಹರಿಸುವರೇ? ಎಂದು ಕಾದು ನೋಡಬೇಕಿದೆ.

Key words: High school, teachers, non-teaching, positions

The post ಬೋಧಕೇತರ ಹುದ್ದೆಗೆ ಪ್ರೌಢಶಾಲಾ ಶಿಕ್ಷಕರು..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

"எடப்பாடியுடன் கூட்டணி வைத்தால் துணை முதல்வர் பதவி என்றார் ஆதவ் அர்ஜுனா" – ரகசியம் பகிர்ந்த சீமான்

தாராபுரம் இடைத்தேர்தலில் நாம் தமிழர் கட்சி வேட்பாளராக களத்தில் உள்ள கார்த்திகாவை...

AP Severe Depression Landfall: తీరాన్ని తాకిన తీవ్ర వాయుగుండం.. 70 కి.మీ వేగంతో గాలులు

AP Severe Depression Landfall: తీవ్ర వాయుగుండం ఆంధ్రప్రదేశ్‌ తీరాన్ని తాకడం...

ഗ്യാനേഷ് കുമാറിനെ ജയിലിലടക്കണം; ബാലറ്റ് പേപ്പറുകള്‍ ഉപയോഗിച്ച് തെരഞ്ഞെടുപ്പുകള്‍ വീണ്ടും നടത്തണം: ഉദ്ധവ് താക്കറെ

ന്യൂദല്‍ഹി: മുഖ്യ തെരഞ്ഞെടുപ്പ് കമ്മീഷണര്‍ ഗ്യാനേഷ് കുമാറിനെതിരെ രൂക്ഷവിമര്‍ശനവുമായി ശിവസേന (യു.ബി.ടി)...

`தேர்தல் முடிவுகள் மீது கடும் சந்தேகங்களை எழுப்புகிறது; ஞானேஷ் குமார் பதவி விலக வேண்டும்!'- ஸ்டாலின்

வாக்காளர் சிறப்பு தீவிர திருத்தம் (SIR) மூலம் வாக்காளர் பட்டியலிலிருந்து சுமார்...