28
September, 2026

A News 365Times Venture

28
Monday
September, 2026

A News 365Times Venture

ಆಗಸ್ಟ್ 17 ರಂದು ವಿದೇಶ ವ್ಯಾಸಂಗದ ವಿಶೇಷ ಮೇಳ

Date:

ಬೆಂಗಳೂರು ಗ್ರಾಮಾಂತರ ಆಗಸ್ಟ್,14,2025 (www.justkannada.in): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಆರ್ಥಿಕವಾಗಿ ದುರ್ಬಲವಾಗಿರುವ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ವಿದೇಶಿ ಅಧ್ಯಯನ ಮೇಳವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ.

ಆಗಸ್ಟ್ 17 ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಬೆಂಗಳೂರು ನಗರದ ಲಲಿತ್ ಅಶೋಕ ಹೋಟೆಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇಳದಲ್ಲಿ ಭಾಗವಹಿಸಲು ಉಚಿತ ಪ್ರವೇಶಕ್ಕಾಗಿ  http://studyabroad.ksdckarnataka.com ನೋಂದಾಯಿಸಿಕೊಳ್ಳಬಹುದು.

ಉನ್ನತ ಶಿಕ್ಷಣ ಪಡೆಯಲು ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವವರಿಗೆ ಪ್ರೋತ್ಸಾಹ ಧನವನ್ನು ನೀಡಿ ಜೊತೆಗೆ ಉಚಿತ ವಿಮಾನ ಟಿಕೆಟ್ ಸೌಲಭ್ಯ ನೀಡಲಾಗುತ್ತದೆ.

ಎಕ್ಸ್ಪೋ ವಿಶ್ವವಿದ್ಯಾಲಯದ ಪ್ರತಿನಿಧಿಗಳೊಂದಿಗೆ ನೇರ ಸಂವಾದ, ವಿದ್ಯಾರ್ಥಿ ವೇತನ ಮತ್ತು ಅರ್ಹತಾ ಮೌಲ್ಯಮಾಪನ, ವೀಸಾ ಪ್ರಕ್ರಿಯೆ, ಹಣಕಾಸು ಯೋಜನೆ, ಆರೋಗ್ಯ ವಿಮೆ, ಭಾಷಾ ಪ್ರಾವೀಣ್ಯ ಮತ್ತು ಇತರೆ ವಿಷಯಗಳ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ. ಇದರಲ್ಲಿ 10ಕ್ಕೂ ಹೆಚ್ಚು ದೇಶಗಳು, 50ಕ್ಕೂ ಅಧಿಕ ಜಾಗತಿಕ ವಿಶ್ವವಿದ್ಯಾಲಯಗಳು ಭಾಗವಹಿಸುತ್ತವೆ.

ಹೆಚ್ಚಿನ ಮಾಹಿತಿಗಾಗಿ 7338674791, 7338674792, 7338674794,73386 74798 ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Special ,Study, Abroad Fair, Bangalore

The post ಆಗಸ್ಟ್ 17 ರಂದು ವಿದೇಶ ವ್ಯಾಸಂಗದ ವಿಶೇಷ ಮೇಳ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഫലസ്തീന്‍ അനുകൂല പ്രതിഷേധം: 50 ലധികം ആളുകളെ അറസ്റ്റ് ചെയ്തു

ലണ്ടന്‍: ലിവര്‍പൂളില്‍ നടന്ന ലേബര്‍ പാര്‍ട്ടി സമ്മേളനത്തിന് പുറത്ത് ഫലസ്തീന്‍ അനുകൂല...

மீண்டும் போர்? "நானும், எங்கள் அதிபரும் நியூயார்க் வந்த காரணமே.!" – ஈரான் வெளியுறவுத்துறை அமைச்சர்

கடந்த வாரம் ஈரானும், அமெரிக்காவும் ‘ஈரான் போர் நிறுத்தம்’ குறித்து பாசிட்டிவாகப்...

Shai Hope: మమ్మల్ని దారుణంగా ముంచేశారు.. ఇలా ఆడతారని అస్సలు ఊహించలేదు: వెస్టిండీస్ కెప్టెన్

భారత్ , వెస్టిండీస్ జట్ల మధ్య జరిగిన తొలి వన్డే మ్యాచ్‌లో...

ആടിനെ പട്ടിയാക്കുന്ന പ്രവണത പ്രതിപക്ഷ നേതാവ് മാറ്റമില്ലാതെ തുടരുകയാണ്; മറുപടിയുമായി മന്ത്രി കെ മുരളീധരന്‍

തിരുവനന്തപുരം: പ്രതിപക്ഷ നേതാവ് പിണറായി വിജയന്‍ ആടിനെ പട്ടിയാക്കുന്ന പ്രവണത മാറ്റമില്ലാതെ...