12
March, 2026

A News 365Times Venture

12
Thursday
March, 2026

A News 365Times Venture

ವಿಶೇಷ ಸಚಿವ ಸಂಪುಟ ಸಭೆ: ಬೆಂ.ಗ್ರಾಮಾಂತರ ಜಿಲ್ಲೆ ಹೆಸರು ಬದಲಾವಣೆ ಸೇರಿ ಹಲವು ನಿರ್ಣಯ

Date:

ಚಿಕ್ಕಬಳ್ಳಾಪುರ,ಜುಲೈ 2,2025 (www.justkannada.in): ಇಂದು ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದಿದ್ದು ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರು ಬದಲಾವಣೆ ಸೇರಿ ಹಲವು ನಿರ್ಣಯ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಂದಿಗಿರಿಧಾಮದ ಮಯೂರ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರೂ ಭಾಗವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನ  ಬೆಂಗಳೂರು ಉತ್ತರ ಜಿಲ್ಲೆ ಎಂದು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸಭೆಯಲ್ಲಿ ಹಲವು ಮಹತ್ವದ ವಿಚಾರಗಳನ್ನು  ಚರ್ಚಿಸಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜೊತೆಗೆ ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಕೊಪ್ಪಳ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಲಾಗಿದೆ. ಈಗಾಗಲೇ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದೆ. ಮುಂದುವರೆದ ಭಾಗವಾಗಿ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ತಾಲ್ಲೂಕುಗಳನ್ನೊಳಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸಮ್ಮತಿಸಲಾಗಿದೆ.vtu

Key words: Cabinet meeting, Chikkaballapur,  name Change, Bengalore Rural, District

The post ವಿಶೇಷ ಸಚಿವ ಸಂಪುಟ ಸಭೆ: ಬೆಂ.ಗ್ರಾಮಾಂತರ ಜಿಲ್ಲೆ ಹೆಸರು ಬದಲಾವಣೆ ಸೇರಿ ಹಲವು ನಿರ್ಣಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಹಿರಿಯ ಪತ್ರಕರ್ತ ಕೆ ಜೆ. ಕುಮಾರ್ ನಿಧನ: ಇಂದು ಅಂತ್ಯಕ್ರಿಯೆ

ಮೈಸೂರು,ಮಾರ್ಚ್,12,2026 (www.justkannada.in):  ನಿನ್ನೆ ಹೃದಯಾಘಾತದಿಂದ ನಿಧನರಾದ ಹಿರಿಯ ಪತ್ರಕರ್ತ ಕೆ...

മലയാളം എവിടെ? ചങ്ങനാശ്ശേരി റെയില്‍വേ സ്‌റ്റേഷനിലെ ഹിന്ദി ബോര്‍ഡിനെതിരെ സോഷ്യല്‍ മീഡിയ

കോട്ടയം: ചങ്ങനാശ്ശേരി റെയില്‍വേസ്റ്റ്ഷനിലെ പുതുക്കിയ പ്രവേശന കവാടത്തിലും കെട്ടിടത്തിലും ഹിന്ദിയില്‍ ബോര്‍ഡ്...

Suryakumar Yadav: డ్రెస్సింగ్ రూమ్ సీక్రెట్స్ బయటపెట్టిన సూర్య.. గంభీర్ స్పీచ్‌తో ప్లేయర్లలో పూనకాలు!

Suryakumar Yadav: భారత్ ప్రపంచ క్రికెట్‌లో ఆధిపత్యం చెలాయిస్తోంది. మూడు సార్లు...