23
September, 2026

A News 365Times Venture

23
Wednesday
September, 2026

A News 365Times Venture

ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಬಾಲಕಿ ಅಪಹರಣ ಕೇಸ್: FIR ದಾಖಲು.

Date:

ಮಂಡ್ಯ,ಜೂನ್,21,2025 (www.justkannada.in): ಲೋನ್ ಕಟ್ಟುವುದು ತಡವಾಗಿದ್ದಕ್ಕೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ  ದಂಪತಿಯ ಮಗುವನ್ನ ಮೈಕ್ರೋ ಫೈನಾನ್ಸ್  ಸಿಬ್ಬಂದಿಗಳು ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಬೆಳಕವಾಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಬಾಲಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್ 2023, 137, 352 ರ ಅಡಿ ದೂರು ದಾಖಲಾಗಿದ್ದು  ಬಾಲಕಿ ತಂದೆ ನವೀನ್ ಕೊಟ್ಟ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.  ಟಿ.ನರಸೀಪುರದ ಬಜಾಜ್ ಮೈಕ್ರೋ ಫೈನಾನ್ಸ್ ನ ಅಜಿತ್ ಹಾಗೂ ಮ್ಯಾನೇಜರ್ ವಿರುದ್ದ ನವೀನ್  ದೂರು ಕೊಟ್ಟಿದ್ದರು.

ನವೀನ್ ತಾಯಿ ಮಂಗಳಮ್ಮ ಬಜಾಜ್ ಮೈಕ್ರೋ ಫೈನಾನ್ಸ್ ನಿಂದ 40 ಸಾವಿರ ಸಾಲ ಪಡೆದಿದ್ದರು. 24 ಕಂತುಗಳ ಪೈಕಿ 12 ಕಂತು ಕಟ್ಟಿದ್ದರು. ಆದರೆ ಈ ತಿಂಗಳ ಕಂತು ಕಟ್ಟಿಲ್ಲ ಎಂದು ನವೀನ್ ಗೆ ಸಿಬ್ಬಂದಿಗಳು ಕರೆ ಮಾಡಿದ್ದರು

ಈ ಮಧ್ಯೆ ಜೂನ್ 16 ರಂದು ಪೂರಿಗಾಲಿಯ ಸಂಬಂಧಿಕರ ಮನೆಗೆ ನವೀನ್ ದಂಪತಿ & ಮಕ್ಕಳು ತೆರಳಿದ್ದರು.  ನವೀನ್ ಮೈಸೂರಿಗೆ, ಪತ್ನಿ ಫ್ಯಾಕ್ಟರಿಗೆ ತೆರಳಿದ್ದ ವೇಳೆ  ಮೈಕ್ರೋ ಫೈನಾನ್ಸ್ ಸಿಬ್ಬಂದಿ ಆಗಮಿಸಿದ್ದು, ಬಾಲಕಿ ಮುಂದೆಯೇ ಸಿಬ್ಬಂಧಿ ಅಜಿತ್ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾನೆ.  ಅಲ್ಲದೇ ಬಾಲಕಿಯನ್ನ ಫ್ಯಾಕ್ಟರಿ ಬಳಿ ಕರೆದೊಯ್ದಿದ್ದು ಅಲ್ಲಿಯೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬಾಲಕಿಯನ್ನು ವಾಪಸ್ಸು ಬಿಟ್ಟು ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕಿರುಕುಳ ನೀಡುತ್ತಿರುವ ಫೈನಾನ್ಸ್ ಸಿಬ್ಬಂದಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕುಟುಂಬಕ್ಕೆ ರಕ್ಷಣೆ ನೀಡುವಂತೆ ನವೀನ್  ದೂರು ನೀಡಿದ್ದರು.vtu

Key words: FIR, girl, kidnapping case, microfinance staff

The post ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಬಾಲಕಿ ಅಪಹರಣ ಕೇಸ್: FIR ದಾಖಲು. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

“ஈரானைத் தவிர்க்க ‘IMEC’ பொருளாதாரப் பாதை" – முழு ஆதரவு தெரிவித்த ட்ரம்ப்

மத்திய கிழக்கு நாடுகளின் மீது ஈரான் நடத்தி வரும் கடல்வழித் தாக்குதல்களை...

Mamata Banerjee: బెంగాల్‌లో మళ్లీ ఎన్నికలు, జ్ఞానేశ్ కుమార్‌ అరెస్టు.. మమత సంచలన డిమాండ్..

Mamata Banerjee: కేంద్ర ఎన్నికల సంఘం నిర్వహించిన స్పెషల్ ఇంటెన్సివ్ రివిజన్(SIR)పై...

കേരളത്തില്‍ സി.ജെ.പിയുടെ ഫ്യൂച്ചര്‍ പ്ലാന്‍: ഏതെല്ലാം വിഷയം ഏറ്റെടുക്കും, സ്‌കൂള്‍ ഠീക് കരോ എവിടെയെല്ലാം

കോക്രോച്ച് ജനതാ പാര്‍ട്ടി (സി.ജെ.പി) രാജ്യത്താകെ അവരുടെ പ്രവര്‍ത്തനം വ്യാപിപ്പിക്കാനൊരുങ്ങുകയാണ്. ഇതിന്റെ...

`நான் இருக்கேன்' கையில் முத்தமிட்டு ஆறுதல் சொன்ன விஜய்; உருகிய வி.எஸ்.பாபு… 10 நிமிட சந்திப்பு!

75 வயதாகும் வி.எஸ்.பாபுவுக்கு சமீபத்தில் மூச்சுத்திணறல் ஏற்பட்டு, சென்னை நெல்சன் மாணிக்கம்...