13
March, 2026

A News 365Times Venture

13
Friday
March, 2026

A News 365Times Venture

ಕೇಂದ್ರ ಸಚಿವ ಹೆಚ್ ಡಿಕೆಗೆ ಬಿಗ್ ರಿಲೀಫ್: ಎಸ್‌ ಐಟಿಗೆ ಹೈಕೋರ್ಟ್ ಮಧ್ಯಂತರ ತಡೆ

Date:

ಬೆಂಗಳೂರು, ಜೂನ್,​ 19,2025 (www.justkannada.in):  ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ರಚಿಸಿದ್ದ ಎಸ್‌ ಐಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಬಿಗ್ ರಿಲೀಫ್​ ಸಿಕ್ಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಪ್ರಶ್ನಿಸಿ ಕೇಂದ್ರ ಸಚಿವ​  ಹೆಚ್.ಡಿ.ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು . ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ​ ಅವರು ಸರ್ಕಾರ ರಚಿಸಿದ್ದ ಎಸ್‌ ಐಟಿಗೆ ಮಧ್ಯಂತರ ತಡೆ ನೀಡಿ  ಆದೇಶ ಹೊರಡಿಸಿದ್ದಾರೆ.

ಈ ವೇಳೆ ಹೆಚ್​​​ಡಿ ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಮತ್ತು ಎ.ವಿ.ನಿಶಾಂತ್ ವಾದ ಮಂಡಿಸಿದ್ದು, ಅಧಿಸೂಚನೆಯಿಲ್ಲದೇ ಎಸ್‌ಐಟಿ ರಚನೆ ಕಾನೂನುಬಾಹಿರ. ಎಸ್‌ಐಟಿಯ ಕ್ರಮಗಳನ್ನು ಅನೂರ್ಜಿತವೆಂದು ಘೋಷಿಸಲು ಮನವಿ ಮಾಡಿದರು.

ಇನ್ನು ಜನವರಿ ತಿಂಗಳಿನಲ್ಲಿ ಸರ್ಕಾರ ಒತ್ತುವರಿ ಪತ್ತೆಗೆ ಐಎಎಸ್ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ-2011ರ ಅಡಿಯಲ್ಲಿ ಎಸ್​ಐಟಿ ರಚನೆ ಮಾಡಲಾಗಿತ್ತು. 6 ಎಕರೆ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದರು.

ಫೆಬ್ರವರಿ 18 ರಂದು ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 7,8,9,10,16,17 ಹಾಗೂ 79ರಲ್ಲಿ ಕಂದಾಯ ಹಾಗೂ ಸರ್ವೆ ಇಲಾಖೆ ಜಂಟಿ ಸರ್ವೆ ಕಾರ್ಯ ನಡೆಸಿತ್ತು. ಸರ್ವೆ ಕಾರ್ಯದ ವೇಳೆ ಕುಮಾರಸ್ವಾಮಿ ಸೇರಿದಂತೆ ಇತರರು ಸೇರಿ 14 ಕ್ಕೂ ಹೆಚ್ಚು ಎಕರೆ ಒತ್ತುವರಿ ಮಾಡಿರುವುದು ಗೊತ್ತಾಗಿತ್ತು.  ಹೀಗಾಗಿ ಭೂ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಒತ್ತುವರಿ ತೆರವಿಗೆ ಮುಂದಾಗಿತ್ತು.

ಕೇತಗಾನಹಳ್ಳಿ ಸರ್ವೆ ನಂಬರ್ 7,8,9 ರಲ್ಲಿ ಕುಮಾರಸ್ವಾಮಿ ಜಮೀನು ಸೇರಿದಂತೆ 11 ಎಕರೆಯಷ್ಟು ಮಾರ್ಕಿಂಗ್ ಕಾರ್ಯ ಕೂಡ ನಡೆದಿತ್ತು. ಈ‌ ನಿಟ್ಟಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಇತರೆ‌ ಒತ್ತುವರಿದಾರರಿಗೆ ರಾಮನಗರ ಜಿಲ್ಲಾಡಳಿತ ನೋಟೀಸ್ ನೀಡಲಾಗಿತ್ತು.vtu

Key words: Union Minister, HDK,  High Court, interim stay , SIT

The post ಕೇಂದ್ರ ಸಚಿವ ಹೆಚ್ ಡಿಕೆಗೆ ಬಿಗ್ ರಿಲೀಫ್: ಎಸ್‌ ಐಟಿಗೆ ಹೈಕೋರ್ಟ್ ಮಧ್ಯಂತರ ತಡೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,12,2026 (www.justkannada.in): ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದವಿದೆ...

ട്രംപിന്റെ ഭീഷണി വകവെയ്ക്കാതെ ശ്രീലങ്ക; അമേരിക്ക കൊലപ്പെടുത്തിയ 84 നാവികരുടെ മൃതദേഹങ്ങൾ ഇറാന് കൈമാറും

കൊളംബോ: കഴിഞ്ഞയാഴ്ച അമേരിക്ക ആക്രമിച്ച ഇറാന്റെ യുദ്ധക്കപ്പലായ ഐറിസ് ദേനയിൽ ഉണ്ടായിരുന്ന...

`எங்க ஆளுங்கதான், ஆனா திமுக MLA' – ஒற்றை சீட் எனும் முட்டுச் சந்தில் மதிமுக! – காரணம் யார்?

நேற்று மாலை முதல் சமூக ஊடகங்கள் முழுக்க கட்சியில் மிச்சமிருக்கிற மதிமுக...

CM Revanth Reddy: అల్లు అర్జున్ హాలీవుడ్‌లో కూడా రాణించాలి.. సీఎం రేవంత్ రెడ్డి..

హైదరాబాద్ కోకాపేటలో అల్లు కుటుంబం ప్రతిష్టాత్మకంగా నిర్మించిన ‘అల్లు సినిమాస్’ మల్టీప్లెక్స్‌ను...