13
March, 2026

A News 365Times Venture

13
Friday
March, 2026

A News 365Times Venture

ಬೆಳಗ್ಗೆಯಿಂದ ಸಾಧನಾ ಸಮಾವೇಶ ಮಾಡಿದ್ದು ಸಾಕು: ಮಳೆ ಅನಾಹುತದ ಕಡೆ ಗಮನ ಹರಿಸಿ- ಕೇಂದ್ರ ಸಚಿವ ಹೆಚ್.ಡಿಕೆ

Date:

ಬೆಂಗಳೂರು,ಮೇ,20,2025 (www.justkannada.in): ರಾಜ್ಯದಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಠಿಯಾಗಿರುವ ವೇಳೆಯೇ ಕಾಂಗ್ರೆಸ್ ಸರ್ಕಾರ ತನ್ನ ಎರಡು ವರ್ಷದ ಸಾಧನಾ ಸಮಾವೇಶ ನಡೆಸಿದಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ಬೆಳಗ್ಗೆಯಿಂದ ಸಾಧನಾ ಸಮಾವೇಶ ಮಾಡಿದ್ದು ಸಾಕು. ನಿಮ್ಮ ಗ್ಯಾರಂಟಿ ನಾಟಕವೂ ಸಾಕು. ಮೊದಲು ಬೆಂಗಳೂರು ಸೇರಿ ರಾಜ್ಯದ ಉದ್ದಗಲಕ್ಕೂ ಆಗಿರುವ ಮಳೆ ಅನಾಹುತದ ಕಡೆ ಗಮನ ಹರಿಸಿ ಎಂದು ಕುಟುಕಿದ್ದಾರೆ.

ಇಡೀ ರಾಷ್ಟ್ರಕ್ಕೆ ಮಾದರಿ ನಗರ ಆಗಿದ್ದ ಬೆಂಗಳೂರು ದುಸ್ಥಿತಿಯನ್ನು ಸರಿಪಡಿಸಿ. ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿ. ರಾಜ್ಯಾದ್ಯಂತ ಮಳೆಹಾನಿ ಪ್ರದೇಶಗಳಿಗೆ ಸಚಿವರನ್ನು ನಿಯೋಜನೆ ಮಾಡಿ ತಕ್ಷಣವೇ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಿ ಎಂದು ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದಾರೆ.

Key words: Sadhana convention, congress, rain, Union Minister, HDK

The post ಬೆಳಗ್ಗೆಯಿಂದ ಸಾಧನಾ ಸಮಾವೇಶ ಮಾಡಿದ್ದು ಸಾಕು: ಮಳೆ ಅನಾಹುತದ ಕಡೆ ಗಮನ ಹರಿಸಿ- ಕೇಂದ್ರ ಸಚಿವ ಹೆಚ್.ಡಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇന്ധനക്ഷാമമില്ല, എല്‍.പി.ജി ഉത്പാദനം 28% വര്‍ധിപ്പിച്ചു; വ്യാജപ്രചരണം വേണ്ട: ഹര്‍ദീപ് സിങ്

ന്യൂദല്‍ഹി: ഇന്ത്യയിലെ ഊര്‍ജ ഇറക്കുമതി സുരക്ഷിതമായി തുടരുകയാണെന്ന് പെട്രോളിയം മന്ത്രി ഹര്‍ദീപ്...

சென்னை ரயில் நிலையங்களில் இந்தி எழுத்துகள் அழிப்பு போராட்டத்தில் மே 17 இயக்கத்தினர்!

தமிழ்நாட்டில் இந்தி திணிப்புக்கு எதிராக தொடர்ந்து குரல் எழுப்பப்பட்டு வருகிறது. அந்தவகையில்...

Lifetime Achievement Award: ‘ది వాల్’ రాహుల్ ద్రావిడ్ కు అరుదైన గౌరవం..

Lifetime Achievement Award: భారత మాజీ క్రికెటర్, మాజీ టీమిండియా కోచ్,...