26
March, 2026

A News 365Times Venture

26
Thursday
March, 2026

A News 365Times Venture

SSLC Result: 22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ

Date:

ಬೆಂಗಳೂರು,ಮೇ,2,2025 (www.justkannada.in):  2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ಶೇ.66.1ರಷ್ಟು ಅಂದರೆ ಕಳೆದ ವರ್ಷಕ್ಕಿಂತ 8% ಫಲಿತಾಂಶ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಜಿಲ್ಲಾವಾರು ಫಲಿತಾಂಶ ಹೀಗಿದೆ

ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ(ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ(ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ(ಶೇ.83.19), ಶಿವಮೊಗ್ಗ ಜಿಲ್ಲೆಗೆ 4ನೇ ಸ್ಥಾನ(ಶೇ.82.29), ಕೊಡಗು ಜಿಲ್ಲೆಗೆ 5ನೇ ಸ್ಥಾನ(ಶೇ.82.21), ಹಾಸನ 6ನೇ ಸ್ಥಾನ ಶಿರಸಿ 7ನೇ ಸ್ಥಾನ, ಚಿಕ್ಕಮಗಳೂರು 8ನೇ ಸ್ಥಾನ,  ಬೆಂಗಳೂರು ಗ್ರಾಮಾಂತರ 9ನೇ ಸ್ಥಾನ  ಹಾವೇರಿ 13ನೇ ಸ್ಥಾನ  ಮೈಸೂರು 15ನೇ ಸ್ಥಾನ ಪಡೆದಿದ್ದು ಕಲಬುರಗಿ ಕೊನೆಯ ಸ್ಥಾನ(ಶೇ42.43) ಪಡೆದಿದೆ.

2025 ಮಾರ್ಚ್​ 21ರಿಂದ ಏಪ್ರಿಲ್​ 4 ರವರೆಗೆ ರಾಜ್ಯದ 2,818 ಕೇಂದ್ರಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲಾಗಿತ್ತು. 4,61563 ಹುಡುಗರು ಮತ್ತು 4,34,884 ಹುಡಗಿಯರು ಪರೀಕ್ಷೆ ಬರೆದಿದ್ದರು. ಮಧ್ಯಾಹ್ನ 12.30ರ ನಂತರ ವೆಬ್‌ಸೈಟ್‌ನಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ ಲಭ್ಯವಿದ್ದು, https://karresults.nic.in ಜಾಲತಾಣದಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.

Key words: SSLC Result, 625 Marks, 22 students, Dakshina Kannada district, first place

The post SSLC Result: 22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

KSOU ನಲ್ಲಿ ಲಂಚ-ಭ್ರಷ್ಟಾಚಾರ: ಬ್ಯಾಂಕ್ ಖಾತೆಗಳು ಸ್ಥಗಿತಕ್ಕೆ ಸರ್ಕಾರದ ಆದೇಶ

  ಬೆಂಗಳೂರು,March.25,2026: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU)ದಲ್ಲಿ ಲಂಚ ಹಾಗೂ...

ബി.ജെ.പിയുടെ ബി ടീമല്ല, മുസ്‌ലിം ശാക്തീകരണത്തിന്റെ എം ടീം; ബംഗാളില്‍ മമതയ്‌ക്കെതിരെ പോരിന് ഒവൈസി

കൊല്‍ക്കത്ത: പശ്ചിമ ബംഗാള്‍ നിയമസഭാ തെരഞ്ഞെടുപ്പിന് മുന്നോടിയായി ഭരണകക്ഷിയായ തൃണമൂല്‍ കോണ്‍ഗ്രസിനെതിരെ...

Punjab Kings: ఈ సారి ఎలాగైనా ట్రోఫీ గెలవాల్సిందే.. స్పెషల్ పూజలు చేసిన ‘పంజాబ్ కింగ్స్’ టీం..!

Punjab Kings: ఈ సారి ఎలాగైనా ట్రోఫీని గెలవాల్సిందే అన్నట్లుగా పంజాబ్...