27
August, 2026

A News 365Times Venture

27
Thursday
August, 2026

A News 365Times Venture

ಮೈಸೂರಿನಲ್ಲಿ ಹಜ್ ಯಾತ್ರಾರ್ಥಿಗಳಿಗೆ ಲಸಿಕೆ ಶಿಬಿರ, ವಿಶೇಷ ಕಾರ್ಯಗಾರ

Date:

ಮೈಸೂರು,ಏಪ್ರಿಲ್,21,2025 (www.justkannada.in): ಏಪ್ರಿಲ್ 29 ರಿಂದ ರಾಜ್ಯದಿಂದ ಹಜ್ ಯಾತ್ರೆ ಆರಂಭವಾಗಲಿದ್ದು ಮೈಸೂರಿನಲ್ಲಿ ಹಜ್ ಯಾತ್ರಾರ್ಥಿಗಳಿಗೆ ವಿಶೇಷ ಲಸಿಕೆ ಶಿಬಿರ ಮತ್ತು ವಿಶೇಷ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದಿಂದ ಸುಮಾರು 8600 ಕ್ಕೂ ಹೆಚ್ಚು ಯಾತ್ರಾರ್ಥಿಗಳ ಪ್ರವಾಸ ಕೈಗೊಡಿದ್ದು, ಯಾತ್ರಾರ್ಥಿಗಳಿಗೆ ಯಾವುದೇ ರೋಗ ರುಜುನೆ ಬಾರದಂತೆ ಮುನ್ನೆಚ್ಚರಿಕೆಯಾಗಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಯಾತ್ರಾರ್ಥಿಗಳಿಗೆ ಲಸಿಕಾ ಶಿಬಿರ ನಡೆಸಲಾಯಿತು.

ಮೈಸೂರಿನಿಂದಲೂ 600 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಹಜ್ ಯಾತ್ರೆ ಕೈಗೊಂಡಿದ್ದು, ಲಸಿಕಾ ಶಿಬಿರದಲ್ಲಿ ನೂರಾರು ಜನ ಭಾಗಿಯಾಗಿದ್ದರು.

ಯಾತ್ರಾರ್ಥಿಗಳಿಗೆ ವಿಶೇಷ ಕಾರ್ಯಗಾರ

ಹಜ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳಿಗೆ ಮೈಸೂರಿನಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿಶೇಷ ಕಾರ್ಯಗಾರ  ಹಮ್ಮಿಕೊಳ್ಳಲಾಗಿತ್ತು. ಹಜ್ ಯಾತ್ರೆ ಛೇರ್ಮನ್ ಜುಲ್ಫಿಕರ್ ಟಿಪ್ಪು ನೇತೃತ್ವದಲ್ಲಿ ವಿಶೇಷ ಕ್ಯಾಂಪ್ ಆಯೋಜನೆ ಮಾಡಲಾಗಿತ್ತು.

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡುಗು ಭಾಗದ ಹಜ್ ಯಾತ್ರಾರ್ಥಿಗಳು ಭಾಗಯಾಗಿದ್ದರು. ಹಜ್ ಯಾತ್ರೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು.

ಸೌದಿ ಅರೇಬಿಯಾ ಸರ್ಕಾರದಲ್ಲಿ ಇರುವ ನೀತಿ, ನಿಯಮಗಳ ಅನುಸಾರ ಯಾತ್ರಾರ್ಥಿಗಳು ಯಾವ ರೀತಿ ನಡೆದುಕೊಳ್ಳಬೇಕು, ಎಲ್ಲಿ ತಂಗಬೇಕು, ಹೇಗೆ ಆರೋಗ್ಯ ನೋಡಿಕೊಳ್ಳಬೇಕು ಎಂಬ ಇತ್ಯಾದಿ ಮಾಹಿತಿಗಳ ಸಂಪನ್ಮೂಲ ವ್ಯಕ್ತಿಗಳು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಅಯೂಬ್ ಖಾನ್ ಹಜ್ ಯಾತ್ರೆ ಛೇರ್ಮನ್ ಜುಲ್ಫಿಕರ್ ಟಿಪ್ಪು ಸೇರಿದಂತೆ ಮೈಸೂರು ಭಾಗದ ನೂರಾರು ಹಜ್ ಯಾತ್ರಾರ್ಥಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

Key words: Vaccination camp, special workshop, Haj pilgrims, Mysore

The post ಮೈಸೂರಿನಲ್ಲಿ ಹಜ್ ಯಾತ್ರಾರ್ಥಿಗಳಿಗೆ ಲಸಿಕೆ ಶಿಬಿರ, ವಿಶೇಷ ಕಾರ್ಯಗಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

தளபதி எக்ஸிட்; பி.டி.ஆர் என்டரி? டு `புது நட்பு?' விஜய் – மத்திய மாண்புமிகு ரகசிய சந்திப்பு| கழுகார்

சூடுபிடிக்கும் மதுரை அரசியல்!கோ.தளபதி எக்ஸிட்... பி.டி.ஆர் என்டரி..?சட்டமன்றத் தேர்தல் தோல்விக்கு பிறகு...

Iran-Oman: హార్ముజ్ ఆదాయంపై ఇరాన్-ఒమన్ కీలక ఒప్పందం.. అమెరికాకు షాక్

హార్ముజ్ జలసంధి విషయంలో ఇరాన్, ఒమన్ మధ్య కీలక ఒప్పందం కుదిరినట్లు...

ಸದನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಂಗ್ರೆಸ್ ಪಲಾಯಾನ-ಆರ್.ಅಶೋಕ್

ಬೆಂಗಳೂರು,ಆಗಸ್ಟ್,25,2026 (www.justkannada.in):  ಅಧಿವೇಶನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸದನವನ್ನ ಬಂದ್...

മിന്നല്‍ പ്രളയത്തില്‍ വിറങ്ങലിച്ച് നേപ്പാള്‍; മരണം 160 ആയി: 133 ഇന്ത്യക്കാരുള്‍പ്പെടെ 750 ലധിം പേരെ കാണാനില്ല

കാഠ്മണ്ഡു: നേപ്പാളിലുണ്ടായ മിന്നല്‍ പ്രളയത്തില്‍ മരണ സംഖ്യ ഉയര്‍ന്നു. 160 ഓളം...