17
March, 2026

A News 365Times Venture

17
Tuesday
March, 2026

A News 365Times Venture

ಬಿರು ಬೇಸಿಗೆ: ಬಂಡೀಪುರ ವನ್ಯಜೀವಿಗಳಿಗೆ ಎದುರಾಗುತ್ತಾ ಕುಡಿಯುವ ನೀರಿನ ಭೀತಿ..?

Date:

ಚಾಮರಾಜನಗರ,ಮಾರ್ಚ್,11,2025 (www.justkannada.in): ರಾಜ್ಯದಲ್ಲಿ ಈಗಾಗಲೇ ಬಿರು ಬೇಸಿಗೆ ಆರಂಭ ಆಗಿದ್ದು, ಜನ ಜಾನುವಾರು ಕೃಷಿಗೆ ಸಾಕಷ್ಟು ನೀರಿಗೆ ಬೇಕಾಗುತ್ತದೆ. ಏಪ್ರಿಲ್ ಮೇ ತಿಂಗಳಿನಲ್ಲಿ ಬೇಸಿಗೆ ವಿಪರೀತ ಮಟ್ಟಕ್ಕೆ ಹೋಗುವ ಸಾಧ್ಯತೆ ಇದ್ದು ಈ ವೇಳೆ ಪ್ರಾಣಿ ಪಕ್ಷಿಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರಲಿದೆ. ಈ ಮಧ್ಯೆ  ಬಂಡಿಪುರದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಭೀತಿ ಎದುರಾಗಲಿದೆಯೇ ಎಂಬ ಆತಂಕ ಶುರುವಾಗಲಿದೆ.

ದೇಶದ ಪ್ರತಿಷ್ಠಿತ  ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡಿಪುರದ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ‌ ಅಭಾವ ಸದ್ಯಕ್ಕೆ ಇರಲ್ಲ. ಹೌದು ಶೇ 70 ರಷ್ಟು ಕೆರೆಗಳಲ್ಲಿ ಇನ್ನೂ ನೀರಿದ್ದು, ಅವಶ್ಯಕತೆ ಇರುವ ಕೆರೆಗಳಿಗೆ ಸೋಲಾರ್ ಪಂಪ್ ಮೂಲಕ ನೀರು ಸಪ್ಲೈ ಮಾಡಲು ಅರಣ್ಯ ಇಲಾಖೆ ಮುಂದಾಗಿದ್ದು, ಈ ಮೂಲಕ ಬಂಡೀಪುರದಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಿದೆ. ಇನ್ನು ಖಾಲಿಯಾದ ಕೆರೆಗಳಿಗೆ ಸೋಲಾರ್  ಪಂಪ್ ಸೆಟ್ ಮೂಲಕ ಪ್ರಾಣಿಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿರುವ ಬಂಡೀಪುರ ಸಿ.ಎಫ್.ಒ ಪ್ರಭಾಕರ್, ಸದ್ಯಕ್ಕೆ ಬಂಡಿಪುರದ 70% ಕೆರೆಗಳಲ್ಲಿ ನೀರಿದೆ. ಖಾಲಿಯಾಗಿರುವ ಕೆರೆಗಳಿಗೆ ಸೋಲಾರ್ ಪಂಪ್ ಮತ್ತು ಟ್ಯಾಂಕರ್ ಗಳ ಮೂಲಕ ನೀರು ತುಂಬಿಸಲು ಸಿದ್ದರಾಗಿದ್ದೇವೆ. ಸದ್ಯಕ್ಕೆ ವನ್ಯಜೀವಿಗಳ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಿಲ್ಲ. ಈ ತಿಂಗಳು ಅಥವಾ ಮುಂದಿನ ತಿಂಗಳವರಗೆ ಮಳೆಯಾಗುವ ಸಾಧ್ಯತೆ ಇದೆ. ಅಲ್ಲಿವರೆಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Key words: summer, Bandipur, wildlife, drinking water

The post ಬಿರು ಬೇಸಿಗೆ: ಬಂಡೀಪುರ ವನ್ಯಜೀವಿಗಳಿಗೆ ಎದುರಾಗುತ್ತಾ ಕುಡಿಯುವ ನೀರಿನ ಭೀತಿ..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಿರ್ಸಿ ವೃತ್ತದಿಂದ ಮತ್ತೊಂದು ಮೇಲ್ಸೇತುವೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,17,2026 (www.justkannada.in):  ಚಾಮರಾಜಪೇಟೆ ಸಿರ್ಸಿ ಜಂಕ್ಷನ್‌ನಿಂದ ಬಿಎಚ್ ಇಎಲ್ ಕಿಮಕೋ...

അമേരിക്കയ്ക്ക് നിങ്ങളോട് കൂറില്ല, ഇസ്രഈല്‍ നിങ്ങളുടെ ശത്രുവാണ്; ഇസ്‌ലാമിക രാഷ്ട്രങ്ങള്‍ക്ക് മുന്നറിയിപ്പുമായി ലാരിജാനി

ടെഹ്റാന്‍: ഇസ്‌ലാമിക രാജ്യങ്ങള്‍ക്ക് തുറന്ന കത്തുമായി ഇറാന്റെ സുരക്ഷാ കൗണ്‍സില്‍ സെക്രട്ടറി അലി...

Rajinikanth: 'காலம் பேசாது ஆனால் காத்திருந்து பதில் சொல்லும்' – ஆதவ் அர்ஜுனாவுக்கு ரஜினிகாந்த் பதில்

நடிகர் ரஜினிகாந்த் அரசியலுக்கு வராதது குறித்து தவெக நிர்வாகி ஆதவ் அர்ஜுனா...

Haryana Shocker: లవర్‌కు రంగులు రాశాడని, ఫ్రెండ్ దారుణహత్య..

Haryana Shocker: తన ప్రేయసికి రంగులు పూశాడనే కారణంగా ఒక వ్యక్తి...