15
June, 2026

A News 365Times Venture

15
Monday
June, 2026

A News 365Times Venture

ಅಪಾಯಕಾರಿ ಸ್ಟಂಟ್ಸ್ ಮಾಡುತ್ತಿದ್ದ ಯುವಕನ ಬಂಧನ: ಹೋಂಡಾ ಡಿಯೋ ಸೀಜ್

Date:

ಮೈಸೂರು,ಮಾರ್ಚ್,1,2025 (www.justkannada.in):  ಮೈಸೂರು – ಹುಣಸೂರು ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಭೀತಿ ಸೃಷ್ಟಿಸುವಂತೆ ಸ್ಕೂಟರ್ ನಲ್ಲಿ ಅಪಾಯಕಾರಿ ಸ್ಟಂಟ್ಸ್ ಮಾಡಿ ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದ ಯುವಕನನ್ನ ಇಲವಾಲ ಪೊಲೀಸ್ ಠಾಣೆ ಪಿಎಸ್ಐ ಬಿ .ಆರ್.ಮಹೇಶ್ ಕುಮಾರ್ ಬಂಧಿಸಿದ್ದಾರೆ.

ಮೈಸೂರಿನ ಮೇಟಗಳ್ಳಿ ಬಡಾವಣೆ ಏಕಲವ್ಯ ನಗರದ ನಿವಾಸಿ ಪ್ರಜ್ವಲ್ (22) ಬಂಧಿತ ಯುವಕ. ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರಗಳನ್ನ ಅಪ್ ಲೋಡ್ ಮಾಡುವ ಖಾತೆಗಳ ಮೇಲೆ ನಿಗಾ ಇಡುವ ಜವಾಬ್ದಾರಿ ಹೊತ್ತ ಪೊಲೀಸ್ ಸಿಬ್ಬಂದಿ ಅಭಿಷೇಕ್  ಅವರು ಪ್ರಜ್ವಲ್ ಅಪ್ ಲೋಡ್ ಮಾಡಿರುವ ಫೋಟೋಗಳನ್ನ ಪತ್ತೆ ಹಚ್ಚಿದ್ದಾರೆ. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ ಹಿನ್ನಲೆ ಇನ್ಸ್ ಪೆಕ್ಟರ್ ಬಿ.ಆರ್ ಮಹೇಶ್ ಕುಮಾರ್ ಗಮನಕ್ಕೆ ತಂದಿದ್ದಾರೆ.

ಕೂಡಲೇ ಎಚ್ಚೆತ್ತ ಪೊಲೀಸರು ಹೋಂಡಾ ಡಿಯೋ ವಾಹನ ನೊಂದಣಿ ಸಂಖ್ಯೆ KA-12 S5574ಯಲ್ಲಿ ಮುಖ್ಯರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಅಪಾಯಕಾರಿ ಸ್ಟಂಟ್ಸ್ ಮಾಡುತ್ತಿದ್ದ ಪ್ರಜ್ವಲ್ ನ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸ್ಟಂಟ್ಸ್ ಗೆ ಬಳಸಿದ ಹೋಂಡಾ ಡಿಯೋ ವಶಕ್ಕೆ ಪಡೆದು ಪ್ರಜ್ವಲ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿದ್ದ ಆತಂಕವನ್ನು ದೂರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Key words: Boy, arrested, dangerous, stunts, mysore

The post ಅಪಾಯಕಾರಿ ಸ್ಟಂಟ್ಸ್ ಮಾಡುತ್ತಿದ್ದ ಯುವಕನ ಬಂಧನ: ಹೋಂಡಾ ಡಿಯೋ ಸೀಜ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ശബരിമല സ്വര്‍ണക്കൊള്ള: പത്മകുമാറിനെ പ്രാഥമിക അംഗത്വത്തില്‍ നിന്ന് സസ്‌പെന്‍ഡ് ചെയ്ത് സി.പി.ഐ.എം

പത്തനംതിട്ട: ശബരിമല സ്വര്‍ണക്കൊള്ള കേസിലെ പ്രതിയും മുന്‍ എം.എല്‍.എയും സി.പി.ഐ.എം നേതാവുമായ...

“6 முதல் 8-ம் வகுப்பு மாணவர்களுக்கும் காலை உணவு: பெரியார் பிறந்தநாளில் அமல்" – முதல்வர் விஜய்!

தமிழ்நாடு அரசின் தலைமைச் செயலகத்தில் இன்று (15.06.2026) முதல்வர் ஜோசப் விஜய்...

Southwest Monsoon: రాష్ట్రవ్యాప్తంగా విస్తరించిన నైరుతి రుతుపవనాలు.. పిడుగులతో కూడిన వర్షాలకు హెచ్చరిక

Southwest Monsoon: ఆంధ్రప్రదేశ్‌లో నైరుతి రుతుపవనాలు పూర్తిస్థాయిలో విస్తరించినట్లు రాష్ట్ర విపత్తుల...

RSS ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ ಕೆಲಸ ಇನ್ಮುಂದೆ ಸಾಧ್ಯವಿಲ್ಲ- ಮೋಹನ್ ಭಾಗವತ್ ತಿರುಗೇಟು

ತ್ರಿಶೂರ್,ಜೂನ್,15,2026 (www.justkannada.in): ಆರ್ ಎಸ್ಎಸ್ ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವ...