1
July, 2026

A News 365Times Venture

1
Wednesday
July, 2026

A News 365Times Venture

ಮುಡಾ ಕೇಸ್ ನಲ್ಲಿ ಸಿಎಂಗೆ ಕ್ಲೀನ್ ಚಿಟ್: ಇನ್ನಾದ್ರೂ ಸ್ನೇಹಮಯಿ ಕೃಷ್ಣ ವ್ಯರ್ಥ ಪ್ರಯತ್ನ ನಿಲ್ಲಿಸಲಿ- ಎಂ.ಲಕ್ಷ್ಮಣ್

Date:

ಮೈಸೂರು,ಫೆಬ್ರವರಿ,19,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಕೆಗೆ ಮುಂದಾಗಿದ್ದು ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರು ಆರೋಪಿಗಳಿಗೆ ಕ್ಲಿನ್ ಚಿಟ್ ಸಿಗಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಇನ್ನಾದರೂ ಸ್ನೇಹಮಯಿ ಕೃಷ್ಣ ವ್ಯರ್ಥ ಪ್ರಯತ್ನ ಮಾಡೋದನ್ನ ನಿಲ್ಲಿಸಬೇಕು ಎಂದಿದ್ದಾರೆ.

ಲೋಕಾಯುಕ್ತಾ ಬಿ ರಿಪೋರ್ಟ್ ಸಲ್ಲಿಕೆ ಹಿನ್ನೆಲೆ, ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್  ಅವರು ಸತ್ಯಮೇವ ಜಯತೆ, ಸತ್ಯಕ್ಕೆ ಜಯ ಎಂದು ನಾಮ ಫಲಕ ಹಿಡಿದು ಲೋಕಾಯುಕ್ತ ಕಚೇರಿ ಬಳಿಗೆ ಆಗಮಿಸಿದರು.

ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು. ಈಗ ಪ್ರಕರಣಕ್ಕೆ  ಸಂಬಂಧಿಸಿದಂತೆ ಲೋಕಾಯುಕ್ತಾ ಬಿ.ರಿಪೋರ್ಟ್ ಕೊಟ್ಟಿದೆ. ಸೂಕ್ತ ದಾಖಲೆ, ಸಾಕ್ಷ್ಯಾಧಾರಗಳಿಲ್ಲದೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯವರಿಗೆ  ಕ್ಲೀನ್ ಚೀಟ್ ಕೊಡುತ್ತಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ ಎಂದು ಲೋಕಾಯುಕ್ತಾ ವರದಿ ಹೇಳುತ್ತಿದೆ ಎಂದರು.

ಈ ಪ್ರಕರಣ ಕ್ರಿಮಿನಲ್ ಪ್ರಕರಣ ಅಲ್ಲವೇ ಅಲ್ಲ. ಇದೊಂದು ಸಿವಿಲ್ ಪ್ರಕರಣ. ಸೂಕ್ತ ಸಾಕ್ಷ್ಯಾಧಾರಗಳನ್ನ ನೀವು ಕೊಟ್ಟಿಲ್ಲ ಅಂತ ಲೋಕಾಯುಕ್ತಾ ಪೋಲಿಸರು ಈಗ ದೂರುದಾರ ಸ್ನೇಹಮಯಿ ಕೃಷ್ಣಗೆ ನೋಟೀಸ್ ಕೊಟ್ಟಿದ್ದಾರೆ. ಇದು ಬಿಜೆಪಿ ಜೆಡಿಎಸ್ ಷಡ್ಯಂತ್ರ.  ಇವರು ಏನೇ ಷಡ್ಯಂತ್ರ ಮಾಡಿದರೂ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನು ಇಲ್ಲ ಅಂತ ಈಗಾಗಲೇ ಲೋಕಾಯುಕ್ತಾ ವರದಿ ಹೇಳುತ್ತಿದೆ. ಇನ್ನಾದರೂ ಸ್ನೇಹಮಯಿ ಕೃಷ್ಣ ವ್ಯರ್ಥ ಪ್ರಯತ್ನ ಮಾಡೋದನ್ನ ನಿಲ್ಲಿಸಬೇಕು ಎಂದು ಎಂ.ಲಕ್ಷ್ಮಣ್ ಟಾಂಗ್ ಕೊಟ್ಟರು.

Key words: Clean chit ,  CM , Muda case,  Snehamayi Krishna, M. Laxman

The post ಮುಡಾ ಕೇಸ್ ನಲ್ಲಿ ಸಿಎಂಗೆ ಕ್ಲೀನ್ ಚಿಟ್: ಇನ್ನಾದ್ರೂ ಸ್ನೇಹಮಯಿ ಕೃಷ್ಣ ವ್ಯರ್ಥ ಪ್ರಯತ್ನ ನಿಲ್ಲಿಸಲಿ- ಎಂ.ಲಕ್ಷ್ಮಣ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അന്‍സിബയുടെ പരാതിയില്‍ കഴമ്പുണ്ട്; ‘ജിഹാദി’ വിളി തമാശയെന്ന പൊലീസ് റിപ്പോര്‍ട്ട് തള്ളി കോടതി

കൊച്ചി: നടിയും എ.എം.എം.എ മുന്‍ ജോയിന്റ് സെക്രട്ടറിയുമായ അന്‍സിബ ഹസന്റെ പരാതിയില്‍...

பாகிஸ்தான், ஆப்கானிஸ்தான் இடையே மோதல்: 'Open War' ஆக மாறுமா? என்ன பிரச்னை? |Full Summary

இந்தியாவின் எல்லை நாடுகள் பாகிஸ்தான் மற்றும் ஆப்கானிஸ்தான். இப்போது இந்த இரண்டு...

ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜುಲೈ,1,2026 (www.justkannada.in): ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ...