15
March, 2026

A News 365Times Venture

15
Sunday
March, 2026

A News 365Times Venture

ಸಹಜ ಸ್ಥಿತಿಯತ್ತ ಮರಳಿದ ಉದಯಗಿರಿ: ಇಂದು ಗೃಹಸಚಿವರಿಂದ ಭೇಟಿ

Date:

ಮೈಸೂರು,ಫೆಬ್ರವರಿ,14,2025 (www.justkannada.in): ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಘಟನೆ ಬಳಿಕ ಉದ್ವಿಗ್ನಗೊಂಡಿದ್ದ ಉದಯಗಿರಿ ಬಡಾವಣೆ ಇದೀಗ ಸಹಜ ಸ್ಥಿತಿಯತ್ತ ಮರಳಿದೆ.

ಉದಯಗಿರಿಯಲ್ಲಿ ವಿಧಿಸಲಾಗಿದ್ದ ನಿಷೇದಾಜ್ಞೆಯನ್ನು  ಮೈಸೂರು ನಗರ ಪೊಲೀಸರು ಹಿಂಪಡೆದದಿದ್ದು, ಅಂಗಡಿಗಳನ್ನ ತೆರೆಯಲು‌ ಹಿಂದೇಟು‌ ಹಾಕುತ್ತಿದ್ದ ವ್ಯಾಪಾರಸ್ಥರು, ಪೊಲೀಸರ ಅಭಯದ ನಡುವೆ ಅಂಗಡಿಗಳು ಓಪನ್ ಮಾಡಿದ್ದಾರೆ. ಇನ್ನು ಉದಯಗಿರಿ ಪೊಲೀಸ್ ಠಾಣೆಯ ಸುತ್ತಲೂ ಬಿಗಿ ಬಂದೋಬಸ್ತ್ ಮುಂದುವರೆದಿದೆ.

ಇಂದು ಪೊಲೀಸ್ ಠಾಣೆಗೆ ಗೃಹ ಸಚಿವರ ಭೇಟಿ.

ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಘಟನೆ ನಡೆದ ನಾಲ್ಕು ದಿನದ ಬಳಿಕ ಇಂದು ಗೃಸಚಿವ ಜಿ.ಪರಮೇಶ್ವರ್ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಪೊಲೀಸ್ ಠಾಣೆಗೆ ಭೇಟಿ‌‌ ನೀಡಲಿದ್ದಾರೆ.

ಬೆಳಗ್ಗೆ ಮೈಸೂರಿನ ಪಿರಿಯಾಪಟ್ಟಣಕ್ಕೆ ಆಗಮಿಸಿ ದಲೈಲಾಮ‌ ಭೇಟಿ ಬಳಿಕ ಮೈಸೂರಿಗೆ ಪ್ರಯಾಣ ಬೆಳೆಸಲಿರುವ ಪರಮೇಶ್ವರ್ ಬಳಿಕ ಕಲ್ಲು ತೂರಾಟ  ನಡೆದಿದ್ದ ಠಾಣೆಗೆ ಭೇಟಿ ನೀಡಿ  ಘಟನೆ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ.

ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಎಫ್‌ ಐ ಆರ್

ಪ್ರಕರಣ ಸಂಬಂಧ ಈಗಾಗಲೇ ಹಲವರನ್ನ ಬಂಧಿಸಲಾಗಿದೆ.  ವಿವಾದಿತ ಪೋಸ್ಟ್ ಹಾಕಿದ್ದ ವ್ಯಕ್ತಿ ಕೂಡ ಅರೆಸ್ಟ್ ಆಗಿದ್ದಾನೆ. ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಎಫ್‌ಐ ಆರ್ ದಾಖಲಾಗಿದ್ದು, 50 ಕ್ಕೂ ಹೆಚ್ಚು ಮಂದಿಯ ಗುರುತು ಪತ್ತೆಯಾಗಿದೆ. 25 ಕ್ಕೂ ಹೆಚ್ಚು ಮಂದಿ ಶಂಕಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದು, ತಲೆಮರೆಸಿಕೊಂಡಿರುವ ನೂರಾರು ಗಲಭೆಕೋರರಿಗಾಗಿ  ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಸಿಸಿಟಿವಿಯಲ್ಲಿ ಕಲ್ಲು ತೂರಾಟ ನಡೆಸಿರುವ ಭೀಕರ ದೃಶ್ಯಗಳು ಸೆರೆಯಾಗಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಗಲಭೆಕೋರರನ್ನ  ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

Key words: Udayagiri, police station, Home Minister, visit, today

The post ಸಹಜ ಸ್ಥಿತಿಯತ್ತ ಮರಳಿದ ಉದಯಗಿರಿ: ಇಂದು ಗೃಹಸಚಿವರಿಂದ ಭೇಟಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಮಗ್ರ ಆರೋಗ್ಯಕ್ಕೆ ಯೋಗ-ವಿಜ್ಞಾನದ ಸಮನ್ವಯ ಅಗತ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಮೈಸೂರು,ಮಾರ್ಚ್,14,2026 (www.justkannada.in):  ಭಾರತ ದೇಶ ಜಗತ್ತಿಗೆ ಕೊಟ್ಟತಂಹ ಕೊಡಗೆಗಳಲ್ಲಿ ಯೋಗವೂ...

ആര്‍ത്തവ അവധി സ്ത്രീകളുടെ അവകാശങ്ങളുടെ ഭാഗമാക്കണം; സുപ്രീം കോടതിക്കെതിരെ പോളിറ്റ് ബ്യൂറോ

ന്യൂദല്‍ഹി: ആര്‍ത്തവ അവധികള്‍ നിയമവിധേയമാക്കിയാല്‍ സ്ത്രീകളെ ജോലിക്കെടുക്കാന്‍ കമ്പനികള്‍ മടിക്കുമെന്ന സുപ്രീം...

`அதிமுக உறுப்பினர் கார்டை கிழிச்சு போடக்கூட மனசு வரலை!'- சசிகலா கட்சியின் நிறுவன தலைவர் சக்கரவர்த்தி

தனது ஆதரவாளர் ஒருவர் பதிவு செய்து வைத்திருந்த ‘அகில இந்திய புரட்சித்...

Breaking News: మొయినాబాద్ ఫామ్ హౌస్‌లో కాల్పుల కలకలం.. పోలీసులపై డ్రగ్స్ బ్యాచ్ దాడి.!

హైదరాబాద్ శివార్లలోని మొయినాబాద్‌ మరోసారి వార్తల్లో నిలిచింది. ఒక మాజీ ఎమ్మెల్యేకు...