11
March, 2026

A News 365Times Venture

11
Wednesday
March, 2026

A News 365Times Venture

ಎಂ.ಲಕ್ಷ್ಮಣ್ ಕೇವಲ ಮೈಸೂರಿಗೆ ಸೀಮಿತ: ಅವರ ಆರೋಪದಲ್ಲಿ ಸತ್ಯಾಂಶವಿಲ್ಲ- ಮೋಹನ್ ವಾಗ್ದಾಳಿ

Date:

ಮೈಸೂರು,ಫೆಬ್ರವರಿ,4,2025 (www.justkannada.in): ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ರಾಜ್ಯ ವಕ್ತಾರರಾಗಿರುವ ಲಕ್ಷ್ಮಣ್ ಕೇವಲ ಮೈಸೂರಿಗೆ ಸೀಮಿತವಾಗಿದ್ದಾರೆ ಎಂದು ಮೈಸೂರು ಬಿಜೆಪಿ ವಕ್ತಾರ ಮೋಹನ್  ವಾಗ್ದಾಳಿ ನಡೆಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಬಿಜೆಪಿ ವಕ್ತಾರ ಮೋಹನ್,  ಕೇಂದ್ರ ಬಜೆಟ್ ಜನಪರವಾಗಿದೆ. ಲಕ್ಷ್ಮಣ್ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಮೈಸೂರು-ಬೆಂಗಳೂರು ಜೋಡಿ ರೈಲು ಮಾರ್ಗ ಪೂರ್ಣಗೊಳ್ಳಲು ಪ್ರತಾಪ್ ಸಿಂಹ ಬರಬೇಕಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೈಸೂರು ಜಿಲ್ಲೆಗೆ ಸಾಕಷ್ಟು ಅನುದಾನವನ್ನು ನೀಡಲಾಗಿದೆ. ಇದನ್ನು ಸಹಿಸಲಾಗದ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕಾಂಗ್ರೆಸ್ ಸಂಸದರು ಏನು ಮಾಡಿದ್ದಾರೆಂದು ತಿಳಿಸಲಿ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಮೈಸೂರು ಜಿಲ್ಲೆಗೆ ಏನು ಮಾಡಿದ್ದಾರೆಂದು ತಿಳಿಸಲಿ. ಕಾಂಗ್ರೆಸ್ ನವರು 60 ವರ್ಷದಲ್ಲಿ ಮಾಡಲಾಗದ್ದನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆ. ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿ ಆಗಿದೆ ಎಂದು ಮೋಹನ್ ಹರಿಹಾಯ್ದರು.

Key words: M. Laxman, limited, Mysore, only, BJP, Mohan

The post ಎಂ.ಲಕ್ಷ್ಮಣ್ ಕೇವಲ ಮೈಸೂರಿಗೆ ಸೀಮಿತ: ಅವರ ಆರೋಪದಲ್ಲಿ ಸತ್ಯಾಂಶವಿಲ್ಲ- ಮೋಹನ್ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೃಷಿ ಕ್ಷೇತ್ರದಲ್ಲಿ AI ಬಳಕೆ ಅಗತ್ಯ : ವಿಟಿಯು ಕುಲಪತಿ ಎಸ್. ವಿದ್ಯಾಶಂಕರ್

  ಮೈಸೂರು, ಮಾ.೧೦,೨೦೨೬ : ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೃತಕ...

പെന്തക്കോസ്ത് സഭകളെ ക്രൈസ്തവ സഭാ വിഭാഗമായി അംഗീകരിക്കും

തിരുവനന്തപുരം: പെന്തക്കോസ്ത് സഭകളെ ക്രൈസ്തവ സഭാ വിഭാഗമായി അംഗീകരിക്കാന്‍ മന്ത്രിസഭാ യോഗത്തില്‍...

"போர் தொடர்ந்தால் உலகளாவிய எண்ணெய் சந்தைக்கு பேரழிவு ஏற்படும்" – எச்சரிக்கும் சவுதி அராம்கோ CEO

ஈரான், இஸ்ரேல், அமெரிக்கா இடையேயான போர் சூழல் காரணமாக ஹார்முஸ் ஜலசந்தி...