22
April, 2026

A News 365Times Venture

22
Wednesday
April, 2026

A News 365Times Venture

ಯಂತ್ರೋಪಕರಣ ಉದ್ಯಮದಲ್ಲಿ ಕರ್ನಾಟಕದ ಪಾಲು ಶೇ.50 : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Date:

ಬೆಂಗಳೂರು,ಜನವರಿ,23,2025 (www.justkannada.in):  ಯಂತ್ರೋಪಕರಣ ಕ್ಷೇತ್ರವು ಉತ್ಪಾದನಾ ವಲಯಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದು, ಕರ್ನಾಟಕವು ಭಾರತದ ಯಂತ್ರೋಪಕರಣಗಳಲ್ಲಿ ಶೇ.50ರಷ್ಟು ಉತ್ಪಾದನೆ ಪಾಲು ಹೊಂದಿದೆ. ಈ ರಾಜ್ಯವು ದೇಶದ ಯಂತ್ರೋಪಕರಣಗಳ ರಾಜಧಾನಿ ಎಂದು ಪ್ರಖ್ಯಾತಿ ಆಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆದ ಭಾರತೀಯ ಯಂತ್ರೋಪಕರಣ ತಂತ್ರಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಂತ್ರೋಪಕರಣ ಕ್ಷೇತ್ರಕ್ಕೆ ಕರ್ನಾಟಕವು ಐದು ದಶಕಗಳ ಹಿಂದೆಯೇ ಬಲಿಷ್ಟವಾದ ಅಡಿಪಾಯ ಹಾಕಿದೆ. ಹಿಂದೂಸ್ತಾನ್ ಮಷಿನ್ ಅಂಡ್ ಟೂಲ್ಸ್ (HMT) ಈ ಕ್ಷೇತ್ರಕ್ಕೆ ಮಹೋನ್ನತ ಕೊಡುಗೆಯನ್ನು ನೀಡಿ, ಉತ್ಪಾದನಾ ಕ್ಷೇತ್ರದಲ್ಲಿ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿತ್ತು. ಆಗಿನಿಂದಲೇ ಕರ್ನಾಟಕವು ನಾವೀನ್ಯತೆ ಮತ್ತು ಉತ್ಪಾದನಾ ಉತ್ಕೃಷ್ಟತೆಯನ್ನು ಪ್ರೋತ್ಸಾಹಿಸುವುದನ್ನು ಮುಂದುವರೆಸಿದೆ. ಪ್ರಸ್ತುತ, ಯಂತ್ರೋಪಕರಣ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಎಲ್ಲಾ ಆಯಾಮಗಳಲ್ಲಿಯೂ ಉತ್ತೇಜನ ನೀಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಹೇಳಿದರು.

ತಂತ್ರಜ್ಞಾನದ ಉನ್ನತೀಕರಣ, ಕೌಶಲ್ಯ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಭಾರತ ಸ್ಪಷ್ಟ ಗುರಿಯನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಭಾರತೀಯ ಬಂಡವಾಳ ಸರಕುಗಳ ವಲಯದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಹೇಳಿದರು.

ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಸಚಿವಾಲಯವು ತುಮಕೂರಿನಲ್ಲಿ ಮಷಿನ್ ಅಂಡ್ ಟೂಲ್ ಪಾರ್ಕ್ ಸ್ಥಾಪನೆಗೆ ಉತ್ತೇಜನ  ನೀಡಿದೆ ಮತ್ತು ಐಐಟಿ-ಮದ್ರಾಸ್‌ನಲ್ಲಿ ಸುಧಾರಿತ ಉತ್ಪಾದನಾ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರದಂತಹ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸಲು ಉದ್ಯಮ ಮತ್ತು ಅಕಾಡೆಮಿಗಳೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದರು.

ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿ- 2025 ಶೀಘ್ರ:

ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿ- 2025 ರೂಪಿಸಲು ನಮ್ಮ ಸಚಿವಾಲಯದ ಕೆಲಸ ಮಾಡುತ್ತಿದೆ. ಈ ವಲಯದಲ್ಲಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವತ್ತ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಬೇಗ ಈ ನೀತಿಯು ಹೊರಬರಲಿದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.

ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿಯು ನಾವೀನ್ಯತೆಯನ್ನು ಉತ್ತೇಜಿಸಲು, ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ವ್ಯವಸ್ಥಿತವಾದ ಚೌಕಟ್ಟನ್ನು ಒದಗಿಸುತ್ತದೆ ಎಂದ ಹೆಚ್ ಡಿ ಕುಮಾರಸ್ವಾಮಿ,  ಈ ಪ್ರದರ್ಶನದಲ್ಲಿ 23 ದೇಶಗಳಿಂದ 1,100ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ಯಂತ್ರೋಪಕರಣ ಉದ್ಯಮಕ್ಕೆ ಇದು ಅತ್ಯುತ್ತಮ ವೇದಿಕೆ ಆಗಿದೆ ಎಂದರು.

ಮಳಿಗೆಗಳಿಗೆ ಭೇಟಿ ಕೊಟ್ಟ ಕೇಂದ್ರ ಸಚಿವರು:

ಪ್ರದರ್ಶನದಲ್ಲಿನ ಮಳಿಗೆಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಯತ್ರೋಪಕರಣ ಉದ್ಯಮದ ಆವಿಷ್ಕಾರ ಮತ್ತು ನಾವೀಣ್ಯತೆಯನ್ನು ಖುದ್ದು ವೀಕ್ಷಿಸಿದರು.

ಕೈಗಾರಿಕೆ ಉತ್ಪಾದನೆಗೆ ಬಹಳಷ್ಟು ಉತ್ತೇಜನ, ಶಕ್ತಿ ತುಂಬುವ ಈ ಕ್ಷೇತ್ರದಲ್ಲಿನ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಸಂಬಂಧಪಟ್ಟ ಕಂಪನಿಗಳ ನಿಪುಣರಿಂದ ಕೇಂದ್ರ ಸಚಿವರು ಮಾಹಿತಿ ಪಡೆದುಕೊಂಡರು. ಇದೇ ವೇಳೆ ಅವರು ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಚ್ ಎಂಟಿ ಮಳಿಗೆಗೆ ಭೇಟಿ ನೀಡಿದರು.

ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಎಂ.ಬಿ.ಪಾಟೀಲ್ ಸೇರಿ ಅನೇಕರು ಸಚಿವರ ಜತೆಯಲ್ಲಿ ಉಪಸ್ಥಿತರಿದ್ದರು.

Key words: Karnataka,  share, machinery industry, 50%,  Union Minister, HDK

The post ಯಂತ್ರೋಪಕರಣ ಉದ್ಯಮದಲ್ಲಿ ಕರ್ನಾಟಕದ ಪಾಲು ಶೇ.50 : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്ത്രീ സംവരണം ബി.ജെ.പി വൈകിപ്പിക്കുന്നു, സോണിയയുടെയും രാഹുലിന്റെയും പഴയ കത്ത് പുറത്തുവിട്ട് കോൺഗ്രസ്

ന്യൂ ദൽഹി: സ്ത്രീ സംവരണം നടപ്പിലാക്കുന്നത് മനപൂർവ്വം വൈകിപ്പിക്കാൻ പ്രധാനമന്ത്രി നരേന്ദ്ര...

அண்ணா நகர் 2026! – சிற்றரசின் ‘செக்-மேட்’ பாலிடிக்ஸ்!

சென்னை என்றாலே அது ‘திமுகவின் கோட்டை’ என்பது அரசியல் பாலபாடம். அதிலும்...

Off The Record : హైలెవల్ బ్రిడ్జిపై కాంగ్రెస్, బీజేపీ మధ్య మాటల యుద్ధం

హైలెవల్‌ బ్రిడ్జి చుట్టూ హైటెన్షన్ పాలిటిక్స్‌ నడుస్తున్నాయా? శంకుస్థాపన రాయి పడీ...

ಮೈಸೂರಿನ GRS  ಫ್ಯಾಂಟಸಿ ಪಾರ್ಕ್‌ ಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳ ಗರಿ

ಮೈಸೂರು,ಏಪ್ರಿಲ್,21,2026 (www.justkannada.in): ನಗರದ ಖ್ಯಾತ ಅಮ್ಯೂಸ್‌ಮೆಂಟ್‌ ಪಾರ್ಕ್‌ ಜಿಆರ್‌ಎಸ್‌ ಫ್ಯಾಂಟಸಿ...