20
March, 2026

A News 365Times Venture

20
Friday
March, 2026

A News 365Times Venture

ದೆಹಲಿಯಲ್ಲಿ 76ನೇ ಗಣರಾಜ್ಯೋತ್ಸವ: ರಾಜ್ಯದ ಕೃಷಿಕ ದಂಪತಿಗೆ ಆಹ್ವಾನ

Date:

ಮೈಸೂರು,ಜನವರಿ,18,2025 (www.justkannada.in):  ಈ ಬಾರಿಯ ಗಣರಾಜ್ಯೋತ್ಸವ ಪರೇಡ್​  ವಿಶೇಷವಾಗಿರಲಿದ್ದು ದೇಶದ 1,500ಕ್ಕೂ ಅಧಿಕ ರೈತರನ್ನು ಆಹ್ವಾನಿಸಲಾಗಿದೆ.

ಚಾಮರಾಜನಗರ ಜಿಲ್ಲೆಯಿಂದ ವಡ್ಡಗೆರೆ ಗ್ರಾಮದ ಕೃಷಿಕ ದಂಪತಿ ಚಿನ್ನಸ್ವಾಮಿ ವಡ್ಡಗೆರೆ ,ಪತ್ನಿ ಕೆ.ಎಸ್. ಗಿರಿಕನ್ಯೆ ದೆಹಲಿಯ ಕರ್ತವ್ಯಪಥದಲ್ಲಿ ಆಯೋಜಿಸಲಾಗಿರುವ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಭಾಗವಾಗಲಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ, ಕೇಂದ್ರ ಸರ್ಕಾರವು ನಡೆಸುತ್ತಿರುವ ವಿವಿಧ ಕೃಷಿ ಮತ್ತು ರೈತ ಕಲ್ಯಾಣ ಯೋಜನೆಗಳ ಲಾಭವನ್ನು ಪಡೆಯುತ್ತಿರುವ ರೈತರನ್ನು ಆಹ್ವಾನಿಸಲಾಗಿದೆ.  ಕೃಷಿಕರು ಮತ್ತು ಅವರ ಪತ್ನಿಯರನ್ನು ಕೇಂದ್ರ ಸರ್ಕಾರ ವಿಶೇಷ ಅತಿಥಿಗಳಾಗಿ ಆಹ್ವಾನಿಸಿದ್ದು,ಅವರನ್ನು ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ಯಲಾಗುತ್ತದೆ.

ಕೇಂದ್ರ ಸರಕಾರದ ಜಲಶಕ್ತಿ  (ಅಟಲ್ ಭೂ ಜಲ್ ಯೋಜನ ) ಸಚಿವಾಲಯದಿಂದ ಈ ಕೃಷಿಕ ದಂಪತಿಯನ್ನು ಆಹ್ವಾನಿತ ಅತಿಥಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ . ರಾಜ್ಯದಿಂದ ಆಯ್ಕೆಯಾದ ಕೃಷಿಕ ದಂಪತಿ ಜನವರಿ 25 ರಂದು ವಿಮಾನದ ಮೂಲಕ ದೆಹಲಿಗೆ ಹೋಗುತ್ತಾರೆ ಮತ್ತು ಜನವರಿ 28 ರಂದು ಹಿಂತಿರುಗುತ್ತಾರೆ.

Key words: 76th Republic Day, Invitation, farmer couple

The post ದೆಹಲಿಯಲ್ಲಿ 76ನೇ ಗಣರಾಜ್ಯೋತ್ಸವ: ರಾಜ್ಯದ ಕೃಷಿಕ ದಂಪತಿಗೆ ಆಹ್ವಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

ಬಾಗಲಕೋಟೆ,ಮಾರ್ಚ್,20,2026 (www.justkannada.in):  ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ...

ശബരിമല സ്ത്രീപ്രവേശനം: ആചാരങ്ങളില്‍ ഏകപക്ഷീയമായ നിലപാടില്ല, ചര്‍ച്ചകള്‍ വേണമെന്ന് മുഖ്യമന്ത്രി

തിരുവനന്തപുരം: ശബരിമലയിലെ സ്ത്രീ പ്രവേശനവുമായി ബന്ധപ്പെട്ട വിഷയത്തില്‍ വിശ്വാസികളെ പരിഗണിച്ചുകൊണ്ടുള്ള സമവായത്തിന്റെ...

அதிமுக – பாஜக கூட்டணியின் தொகுதிப் பங்கீடு விவரம் எப்போது வெளியாகும்? – டெல்லியில் இபிஎஸ் பதில்

தமிழகத்தில் சட்டமன்றத் தேர்தல் நெருங்கிக்கொண்டிருக்கிறது. கட்சிகள், தொகுதிப் பங்கீடு பேச்சுவார்த்தைகளை நடத்தி...

S.S.Thaman: త్రివిక్రమ్ నా గురువు.. వచ్చే సినిమాతో ఆస్కారే లక్ష్యం!

S.S.Thaman: ప్రముఖ సంగీత దర్శకుడు ఎస్.ఎస్.తమన్ తన కెరీర్‌లో ఎందరో దర్శకులతో...