11
April, 2026

A News 365Times Venture

11
Saturday
April, 2026

A News 365Times Venture

ಮಂಡ್ಯದಲ್ಲಿ “ ಮಹಿಳಾ ಜನ್‌ಸುನ್ವಾಯಿ”  ಸಭೆ: ‘ಅಹವಾಲು ಸ್ವೀಕಾರ’ ಹೆಸರಿನಲ್ಲಿ ಹಿಂದಿ ಮಿಶ್ರಣಕ್ಕೆ ಟೀಕೆ

Date:

 

ಮಂಡ್ಯ, APRIL.10,2026: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರ ನೇತೃತ್ವದಲ್ಲಿ ಏಪ್ರಿಲ್ 17 ರಂದು ಜಿಲ್ಲಾ ಮಟ್ಟದ ಮಹಿಳಾ ಅಹವಾಲು ಸ್ವೀಕಾರ ಸಭೆ ನಡೆಯಲಿದೆ.

ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆಯುವ ಈ ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಪೊಲೀಸ್ ಅಧೀಕ್ಷಕ, ಜಿಲ್ಲಾ ವೈದ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಮಹಿಳೆಯರ ಅಹವಾಲುಗಳನ್ನು ಆಲಿಸಲಿದ್ದಾರೆ.

ಸಭೆಯಲ್ಲಿ ಮಹಿಳೆಯರು ನೇರವಾಗಿ ತಮ್ಮ ಸಮಸ್ಯೆಗಳನ್ನು ಮಂಡಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08232-227336 / 221315 ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಆದರೆ, “ಮಹಿಳಾ ಜನ್‌ಸುನ್ವಾಯಿ” ಎಂಬ ಹೆಸರಿನ ಬಳಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಕನ್ನಡ ರಾಜ್ಯದಲ್ಲೇ ‘ಜನಸುನ್ವಾಯಿ’ ಎಂಬ ಹಿಂದಿ ಪದಪ್ರಯೋಗ ಬಳಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, “ಅಹವಾಲು ಸ್ವೀಕಾರ ಸಭೆ” ಎಂಬ ಶುದ್ಧ ಕನ್ನಡ ಪದ ಬಳಕೆ ಮಾಡಬಹುದಿತ್ತು ಎಂಬ ಟೀಕೆ ಕೇಳಿಬಂದಿದೆ.

ಹಿಂದಿ ಹೇರಿಕೆ ವಿರುದ್ಧ ಮಾತಾಡುವ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿ ಹಿಂದಿ ಪದಗಳ ಬಳಕೆಗೆ ಉತ್ತೇಜನ ನೀಡುತ್ತಿರುವುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ. ಕನ್ನಡ ಪ್ರಾಮುಖ್ಯತೆಯ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಾಳಬೇಕೆಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ.

Key words: Mandya, Women’s Grievance Meet, Sparks Language Row

SUMMARY: 

Mandya Women’s Grievance Meet Sparks Language Row, State Women’s Commission Chairperson, Dr. Nagalakshmi Choudhary.

Mandya: A women’s grievance meeting will be held on April 17 at 11 AM at the Zilla Panchayat Cauvery Hall, led by State Women’s Commission Chairperson Dr. Nagalakshmi Choudhary. District officials will attend to hear complaints directly from women.

However, the use of the term “Jan Sunwai” has triggered criticism, with many questioning why a Hindi term was used instead of a Kannada equivalent like “grievance hearing.”

The issue has sparked debate, with critics accusing the Congress-led government of promoting Hindi despite opposing its imposition.

The post ಮಂಡ್ಯದಲ್ಲಿ “ ಮಹಿಳಾ ಜನ್‌ಸುನ್ವಾಯಿ”  ಸಭೆ: ‘ಅಹವಾಲು ಸ್ವೀಕಾರ’ ಹೆಸರಿನಲ್ಲಿ ಹಿಂದಿ ಮಿಶ್ರಣಕ್ಕೆ ಟೀಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഗള്‍ഫിലെ എസ്.എസ്.എല്‍.സി, പ്ലസ്ടു പരീക്ഷകള്‍ റദ്ദാക്കും; മാര്‍ക്കിന് പകരം സംവിധാനം

തിരുവനന്തപുരം: യുദ്ധ സാഹചര്യത്തില്‍ മാറ്റിവെച്ച ഗള്‍ഫിലെ എസ്.എസ്.എല്‍.സി, പ്ലസ്ടു പരീക്ഷകള്‍ റദ്ദാക്കും....

குமரி: விபத்துகளால் பலியாகும் உயிர்கள்; நான்குவழிச் சாலை பணி முடியும் வரை கனிமவள லாரிகள் செல்ல தடை

கன்னியாகுமரி மாவட்டம் வழியாக கேரளா மாநிலத்திற்குத் தினமும் நூற்றுக்கணக்கான லாரிகளில் கனிமவளங்கள்...

Central Govt: మీకు ఈ ప్రశ్నలకు జవాబులు తెలుసా..? అయితే రూ.10 వేలు మీకే..

దేశంలో ఆరు దశాబ్దాల క్రితం నాటి 1961 ఆదాయపు పన్ను చట్టం...

ದ್ವಿತೀಯ ಪಿಯು ಫಲಿತಾಂಶ: ಸರ್ಕಾರಿ ವಸತಿ ಶಾಲೆಗಳಲ್ಲಿ ಶೇ.97.22 ಮಕ್ಕಳು ತೇರ್ಗಡೆ: ಸಚಿವ ಮಹದೇವಪ್ಪ

ಬೆಂಗಳೂರು,ಏಪ್ರಿಲ್,10,2026 (www.justkannada.in): ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು,...