ಚಿಕ್ಕಮಗಳೂರು,ಏಪ್ರಿಲ್,10,2026 (www.justkannada.in): ಚಿಕ್ಕಮಗಳೂರು ಜಿಲ್ಲೆ ಕುಂಭದ್ರೋಣ ಪರ್ವತದ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ14 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಕೇರಳ ಮೂಲದ ಶ್ರೀನಂದಾ ಚಿಕ್ಕಮಗಳೂರಿನ ಮಾಣಿಕ್ಯಧಾರದ ಶೋಲಾ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಏಪ್ರಿಲ್ 7 ರಂದು ಕುಂಭದ್ರೋಣ ಪರ್ವತದ ಮಾಣಿಕ್ಯಧಾರಕ್ಕೆ ಕುಟುಂಬ ಸಮೇತ ಶ್ರೀನಂದಾ ಪ್ರವಾಸಕ್ಕೆ ಬಂದಿದ್ದಳು. ಅಂದೇ ಅಲ್ಲಿಂದ ನಾಪತ್ತೆಯಾಗಿದ್ದಳು.
ನಂತರ ಕುಟುಂಬ ಆತಂಕಕ್ಕೀಡಾಗಿತ್ತು. ನಂತರ ಎಸ್ ಡಿಆರ್ ಎಫ್, ಅಗ್ನಿಶಾಮಕ ದಳ, ಪೊಲೀಸರು ಶೋಧ ಕಾರ್ಯ ನಡೆಸಿದ್ದು ಈ ವೇಳೆ ಮಾಣಿಕ್ಯಧಾರದ ಸುಮಾರು 2 ಸಾವಿರ ಅಡಿ ಕೆಳಗೆ ಶ್ರೀನಂದಾ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.
Key words: Missing, 14-year, old girl, found ,dead, Manikyadhara
The post ಪ್ರವಾಸಕ್ಕೆಂದು ಬಂದು ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಶವವಾಗಿ ಪತ್ತೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





