11
April, 2026

A News 365Times Venture

11
Saturday
April, 2026

A News 365Times Venture

ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ: ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆಯಿದು?

Date:

ವಿಜಯಪುರ,ಏಪ್ರಿಲ್,8,2026 (www.justkannada.in):  ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ವಿರುದ್ದ ಕೇಳಿ ಬಂದಿರುವ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್.   ಅದು ಸತ್ಯವೋ ಅಸತ್ಯವೋ  ಅನ್ನೋದರ ಬಗ್ಗೆ ಸೂಕ್ತ ತನಿಖೆಯಾಗಲಿ. ಈ ಬಗ್ಗೆ ಸೂಕ್ತ ತನಿಖೆ  ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ನಮಗೂ ಇದಕ್ಕೂ ಸಂಬಂಧ ಇಲ್ಲ ಹೀಗಾಗಿ ಪ್ರತಿಕ್ರಿಯೆ ನೀಡಲ್ಲ ಎಂದರು.

ಬಿಜೆಪಿ ಆರ್ ಎಸ್ ಎಸ್ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್,  ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಇರುತ್ತೆ. ಬೆಂಕಿ ಪಟ್ಟಣ ಇಟ್ಟುಕೊಂಡು ಬಿಜೆಪಿಯವರು ಓಡಾಡುತ್ತಿದ್ದಾರೆ. ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡ್ತಾರೆ.  ಬಿಜೆಪಿಯವರು ದೇಶಕ್ಕಾಗಿ ಯಾವುದೇ ಹೋರಾಟ ಮಾಡಿಲ್ಲ ಎಂದರು.

ಇಂಡಿಯಾ ಗೇಟ್ ನಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರ ಹೆಸರಿದೆ. ಹೋರಾಟ ಮಾಡಿದ ಮುಸ್ಲೀಮರ ನೂರಾರು ಹೆಸರಿದೆ. ಬಿಜೆಪಿಯವರು ಬ್ರಿಟೀಷರ ಏಜೆಂಟ್ ಆಗಿದ್ದರು. ಈಗ ಬಿಜೆಪಿಯವರು ರಾಷ್ಟ್ರೀಯತೆ ಅನ್ನುತ್ತಿದ್ದಾರೆ. ವಿಷಕಾರಿ ನಿರ್ಮೂಲನೆ ಮಾಡಿ ಎಂಬರ್ಥದಲ್ಲಿ ಖರ್ಗೆ ಹೇಳಿದ್ದಾರೆ.  ಇದನ್ನು ಹೊಡೆದು ಕೊಲ್ಲಿ ಎಂದು ಹೇಳಿಲ್ಲ ಎಂದು ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದರು.

Key words:  Minister M.B. Patil, Sexual assault, allegations, against, Jaya Mrityunjaya Swamiji

The post ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ: ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆಯಿದು? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಅಲೆಮಾರಿ ಸಮುದಾಯದ ಪ್ರಥಮ ಮಹಿಳಾ ವಕೀಲೆಯಾಗಿ ಸಾಧನೆ ಮಾಡಿದ ಯುವತಿ

ಮೈಸೂರು,ಏಪ್ರಿಲ್,11,2026 (www.justkannada.in): ಅಲೆಮಾರಿ ಸಮುದಾಯದ ಯುವತಿ ಅರುಣ ವಕೀಲೆಯಾಗುವ ಮೂಲಕ...

2028ലെ പ്രസിഡന്റ് തെരഞ്ഞെടുപ്പില്‍ മത്സരിക്കാന്‍ കമല ഹാരിസ്; ട്രംപിന് കീഴില്‍ അമേരിക്കയുടെ പ്രതിച്ഛായ മങ്ങിയെന്നും വിമര്‍ശനം

വാഷിങ്ടണ്‍: 2024ലെ തെരഞ്ഞെടുപ്പ് പരാജയത്തിന് ശേഷം അമേരിക്കന്‍ രാഷ്ട്രീയത്തില്‍ വീണ്ടും സജീവമാകാനൊരുങ്ങി...

Madhubala biopic: సంజయ్ లీలా భన్సాలీ బిగ్ ప్లాన్.. మధుబాలగా మలయాళ భామ !

భారతీయ సినిమా చరిత్రలో తిరుగులేని అందగత్తెగా, దిగ్గజ నటిగా గుర్తింపు పొందిన...