21
September, 2026

A News 365Times Venture

21
Monday
September, 2026

A News 365Times Venture

ಸಿಎಂ ತವರಲ್ಲಿ ಅಧಿಕಾರಿಗಳ ದರ್ಬಾರ್: ಜನಪ್ರತಿನಿಧಿಗಳ ಮಾತಿಗೂ ಸ್ಪಂದನೆ ಇಲ್ಲ- ಸಂಸದ ಯದುವೀರ್ ಕಿಡಿ

Date:

ಮೈಸೂರು,ಏಪ್ರಿಲ್,7,2026 (www.justkannada.in):  ಚಾಮುಂಡಿ ಬೆಟ್ಟದಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಸ್ಥಳೀಯ ನಿವಾಸಿಗಳ ಭಾವನೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು  ಚಾಮುಂಡಿ ಬೆಟ್ಟ ಪ್ರಾಧಿಕಾರದ ವಿರುದ್ಧ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿಕಾರಿದರು.

ಇಂದು ಮಾತನಾಡಿದ ಸಂಸದ ಯದುವೀರ್, ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ವಿಚಾರ ನ್ಯಾಯಾಲಯದಲ್ಲಿದೆ. ಚಾಮುಂಡಿ ಬೆಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಯಾರ ಮಾತಿಗೂ ಬೆಲೆ‌ ಕೊಡುತ್ತಿಲ್ಲ. ಈ ಬಗ್ಗೆ ವ್ಯಾಪಕ ದೂರುಗಳು‌ ಕೇಳಿ ಬಂದಿವೆ. ಸ್ಥಳೀಯ ಆಡಳಿತ ಹಾಗೂ ಅಲ್ಲಿನ ನಿವಾಸಿಗಳ ಮಾತಿಗೂ ಪ್ರಾಧಿಕಾರದ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ಸ್ಥಳೀಯ ನಿವಾಸಿಗಳ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ಹರಿಹಾಯ್ದರು.

ಮೈಸೂರಿನ ವಿವಿಧೆಡೆಗಳಲ್ಲಿ ಅವೈಜ್ಞಾನಿಕವಾಗಿ ಸಿಗ್ನಲ್ ಲೈಟ್ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದ‌ ಯದುವೀರ್, ಮೈಸೂರಿ ಹಲವೆಡೆ ಎಲ್ಲೆಂದರಲ್ಲಿ ಸಿಗ್ನಲ್ ಲೈಟ್ ಅಳವಡಿಸಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಈ ರೀತಿ ಅವೈಜ್ಞಾನಿಕವಾಗಿ ಸಿಗ್ನಲ್ ಲೈಟ್ ಅಳವಡಿಸಲು ಯಾರು ಅನುನತಿ ನೀಡಿದರೋ ಗೊತ್ತಿಲ್ಲ. ಕೆಲವೇ ಮೀಟರ್ ಅಂತರದಲ್ಲಿ ಸಿಗ್ನಲ್ ಲೈಟ್ ಅಳವಡಿಸಿರುವ ಕಾರಣ ವಾಹ‌ನ ಸವಾರರಿಗೆ ತೊಂದರೆ ಆಗುತ್ತಿದೆ. ರಸ್ತೆಯಲ್ಲಿ ಸಂಚರಿಸಲು ಅನಗತ್ಯವಾಗಿ ವಿಳಂಬ ಆಗುತ್ತಿದೆ. ಸಿಗ್ನಲ್‌ ಲೈಟ್ ಅಳವಡಿಕೆಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಹೇಳಿದರು.

ಸಿಎಂ ತವರಲ್ಲಿ ಅಧಿಕಾರಿಗಳ ದರ್ಬಾರ್

ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ. ಸರ್ಕಾರಿ ಅಧಿಕಾರಿಗಳ ಕಾರ್ಯ ವೈಖರಿ ಸರಿಯಿಲ್ಲ. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಾಗಿದೆ. ಆದರೆ ಇಲ್ಲಿ ಅಧಿಕಾರಿಗಳ ದರ್ಬಾರು ನಡೆಯುತ್ತಿದೆ. ಜನಪ್ರತಿನಿಧಿಗಳ ಮಾತಿಗೆ ಅಧಿಕಾರಿಗಳು ಕಿವಿಕೊಡುತ್ತಿಲ್ಲ. ಜನಪ್ರತಿನಿಧಿಗಳ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಂಸದ ಯದುವೀರ್ ಅಸಮಾಧಾನ ವ್ಯಕ್ತಪಡಿಸಿದರು.

Key words: Officers, No response, public, representatives, Mysore MP, Yaduveer

The post ಸಿಎಂ ತವರಲ್ಲಿ ಅಧಿಕಾರಿಗಳ ದರ್ಬಾರ್: ಜನಪ್ರತಿನಿಧಿಗಳ ಮಾತಿಗೂ ಸ್ಪಂದನೆ ಇಲ್ಲ- ಸಂಸದ ಯದುವೀರ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

"மக்கள் தங்குவதற்கு கட்டடம் இருக்கு; ஆனால்…" – விகடன் செய்திக்கு எழும்பூர் மருத்துவமனை விளக்கம்

முதல்வர் விஜய் ஆய்வு நடத்திய எழும்பூர் மகப்பேறு மருத்துவமனையில் அனுமதிக்கப்படும் பெண்களுக்கு...

Virat Curve 5G: 3డీ కర్వ్డ్ AMOLED డిస్‌ప్లే, 6000mAH బ్యాటరీ.. రేపు మధ్యాహ్నం 12 గంటలకు మార్కెట్లోకి విడుదల..

భారతీయ మార్కెట్లో విడుదల కానున్న కొత్త స్మార్ట్‌ఫోన్ లావా విరాట్ కర్వ్...

ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ಪತ್ರಕರ್ತರಿಂದ ಒತ್ತಾಯ

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in):  ರಾಜ್ಯದ ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು...

ബ്രാഹ്‌മണ്യത്തെ ഹൃദയത്തില്‍ കൊണ്ടുനടക്കുന്നവരാണ് ഈഴവര്‍: ജി.സുധാകരന്‍

ആലപ്പുഴ: ബ്രാഹ്‌മണ്യത്തെ ഹൃദയത്തില്‍ കൊണ്ടുനടക്കുന്ന ബ്രാഹ്‌മണരല്ലാത്ത വിഭാഗമാണ് കേരളത്തിന്റെ 33 ശതമാനം...