ಬೆಂಗಳೂರು. ಏ.೦೧,೨೦೨೬: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 17(ಎ) ಅಡಿ ತನಿಖೆಗೆ ಅನುಮತಿ ನೀಡುವಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಈ ಸಂಬಂಧ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ತನಿಖೆಗೆ ಅನುಮತಿ ನಿರಾಕರಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ , “ಭ್ರಷ್ಟಾಚಾರ ಕ್ಯಾನ್ಸರ್ ಮತ್ತು ಪ್ಲೇಗ್‌ನಂತೆ. ಅದನ್ನು ನಿರ್ಲಕ್ಷಿಸಿದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಂಗಗಳನ್ನು ಅಸ್ಥಿರಗೊಳಿಸುತ್ತದೆ” ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯ ಉಲ್ಲೇಖಿಸಿತು. ಭ್ರಷ್ಟಾಚಾರದ ಆರೋಪಗಳಿದ್ದಾಗ ತನಿಖೆ ನಡೆಯದೇ ಸತ್ಯ ಹೊರಬರುವುದಿಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ ಪ್ರಕಾರ, 13 ರೂ. ಬೆಲೆಯ ಬಟ್ಟೆ ಬ್ಯಾಗ್ ಅನ್ನು 52 ರೂ.ಗೆ ಖರೀದಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 7.55 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ವಕೀಲ ರವಿಚಂದ್ರೇಗೌಡ ಎನ್.ಆರ್. ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಿಸಿದ ಹೈಕೋರ್ಟ್, ತನಿಖೆಗೆ ದಾರಿ ತೆರೆದಿದೆ. ಪ್ರಕರಣ ಈಗ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.
Key words: Mysuru Cloth Bag Scam, IAS Officer Rohini Sindhuri, Faces Trouble, High Court Orders Probe

SUMMARY:
Mysuru Cloth Bag Scam: High Court Orders Probe
Mysuru: IAS officer Rohini Sindhuri is facing allegations of irregularities in the procurement of cloth bags during her tenure as Mysuru Deputy Commissioner. The High Court has ordered permission for an investigation under Section 17(A), marking a significant development in the case.
The court has directed the Under Secretary, Department of Personnel and Administrative Reforms (DPAR), to grant approval for the probe. It also quashed the State Government’s earlier decision denying sanction for investigation.

A bench led by Justice M. Nagaprasanna made strong observations, stating that “corruption is like cancer and plague,” echoing Supreme Court views. The court emphasized that if corruption allegations are not investigated, the truth will never come out, and such issues can destabilize democratic institutions.
According to the complaint, cloth bags worth ₹13 were allegedly procured at ₹52 each, causing an estimated loss of ₹7.55 crore to the state exchequer.

The High Court passed the order while hearing a writ petition filed by advocate Ravichandregowda N.R. With this ruling, the case has gained momentum, and further developments are expected.

The post ಮೈಸೂರು ಬಟ್ಟೆ ಬ್ಯಾಗ್ ಖರೀದಿ ಪ್ರಕರಣ: ಹೈಕೋರ್ಟ್‌ನಿಂದ ತನಿಖೆಗೆ ಹಸಿರು ನಿಶಾನೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





