31
March, 2026

A News 365Times Venture

31
Tuesday
March, 2026

A News 365Times Venture

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಗೆ ಮಾತೃ ವಿಯೋಗ

Date:

ಬೆಂಗಳೂರು,ಮಾರ್ಚ್,30,2026 (www.justkannada.in):  ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

86 ವರ್ಷದ ಸುವರ್ಣಲತಾ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.  ಇಂದು ಹೈದರಾಬಾದ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ನಟ  ಪ್ರಕಾಶ್ ರಾಜ್ ಕುಟುಂಬದ ಹಿರಿಯ ಮಗನಾಗಿದ್ದು, ಅವರ ಸಹೋದರ ಪ್ರಸಾದ್ ರಾಜ್ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರಕಾಶ್‌ ರಾಜ್‌ ಅವರ ವೈಯಕ್ತಿಕ ಬದುಕಿನ ಏರಿಳಿತಗಳ ಬಗ್ಗೆ ಮತ್ತು ತಾಯಿ ತೋರಿದ ಧೈರ್ಯದ ಬಗ್ಗೆ ಅನೇಕ ವೇದಿಕೆಯಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಹಸಿವು, ಬಡತನದಲ್ಲಿ ಬೆಂದ ಕುಟುಂಬವನ್ನು ತನ್ನ ಒಡಲಿನಲ್ಲಿಟ್ಟು ಮಕ್ಕಳನ್ನು ಲಾಲಿಸಿ, ಪಾಲಿಸಿ, ಪೋಷಿಸಿದ ತಾಯಿ ಸ್ವರ್ಣಲತಾ ಅವರ ಅಗಲಿಕೆ ಪ್ರಕಾಶ್‌ ರಾಜ್‌ ಮತ್ತು ಕುಟುಂಬದ ಸದಸ್ಯರನ್ನು ದುಃಖದಲ್ಲಿ ಮುಳುಗಿಸಿದೆ.‌

ತಾಯಿ ಸುವರ್ಣಲತಾ ನಿಧನಕ್ಕೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಖ್ಯಾತ ನಟ ಪವನ್‌ ಕಲ್ಯಾಣ್‌ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Key words: actor, Prakash Raj,  mother, Death

The post ಬಹುಭಾಷಾ ನಟ ಪ್ರಕಾಶ್‌ ರಾಜ್‌ ಗೆ ಮಾತೃ ವಿಯೋಗ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

തെരഞ്ഞെടുപ്പ് പ്രചരണത്തിനിടെ ഭിന്നശേഷിക്കാരനായ പ്രവര്‍ത്തകനെ തല്ലി ഡി.സി.സി പ്രസിഡന്റ്

ഇടുക്കി: കുമളിയില്‍ നടന്ന യു.ഡി.എഫ് പരിപാടിയില്‍ ഭിന്നശേഷികാരനായ പാര്‍ട്ടി പ്രവര്‍ത്തകനെ മര്‍ദിച്ച്...

Gas Cylinder Scam : కొరత పేరుతో కుంభకోణం.. శ్మశానంలోనే సిలిండర్ సీక్రెట్.!

హైదరాబాద్ నగరంలో గ్యాస్ సిలిండర్లను బ్లాక్ మార్కెట్‌కు తరలిస్తున్న భారీ దందాను...

ಬಿಜೆಪಿಯವರು ಕಳ್ಳೆತ್ತು: ಅವರಿಗೆ ವೋಟ್‍ ಹಾಕಬಾರದು- ಸಿಎಂ ಸಿದ್ಧರಾಮಯ್ಯ,

ಬಾಗಲಕೋಟೆ,ಮಾರ್ಚ್,30,2026 (www.justkannada.in):  ಬಿಜೆಪಿಯವರು ಕಳ್ಳೆತ್ತುಗಳು ಅವರಿಗೆ ಮತ ಹಾಕಬಾರದು ಎಂದು...