26
March, 2026

A News 365Times Venture

26
Thursday
March, 2026

A News 365Times Venture

ಜನರ, ಪಕ್ಷದ ಬೆಂಬಲ ಇಲ್ಲದಿದ್ದರೇ ನಾನು 17 ಬಜೆಟ್ ಮಂಡಿಸಲು ಹೇಗೆ ಸಾಧ್ಯವಾಗುತ್ತಿತ್ತು-ಸಿಎಂ ಸಿದ್ದರಾಮಯ್ಯ

Date:

ಬೆಂಗಳೂರು,ಮಾರ್ಚ್,26,2026 (www.justkannada.in):  ನನಗೆ ರಾಜ್ಯದ ಜನರ ಪಕ್ಷದ ಹೈಕಮಂಢ್  ಬೆಂಬಲ ಇಲ್ಲದಿದ್ದರೇ  ನಾನು ದಾಖಲೆಯ 17 ಬಜೆಟ್‌ ಮಂಡಿಸಲು ಹೇಗೆ ಸಾಧ್ಯವಾಗುತ್ತಿತ್ತು? ಎಂದು ವಿಪಕ್ಷ ನಾಯಕರಿಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ವಿಧಾನಪರಿಷತ್ ನಲ್ಲಿ  ಬಜೆಟ್‌ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು. ಈ ವೇಳೆ ಪರಿಷತ್ ವಿಪಕ್ಷ ನಾಯಕ  ಛಲವಾದಿ  ನಾರಾಯಣಸ್ವಾಮಿ, ನೀವು ಮುಂದಿನ ಎರಡು ಬಜೆಟ್‌ ಮಂಡಿಸುವುದಾದರೆ ಮುಖ್ಯಮಂತ್ರಿಯಾಗೇ ಇರಿ ಆದರೆ  ಹಣಕಾಸು ಸಚಿವರಾಗಿರುವುದು ಬೇಡ ಎಂದರು.

ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ನಾನು 1994ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವನಾಗಿ ಬಜೆಟ್‌ ಮಂಡನೆ ಮಾಡಿದ್ದೆ. ಅಲ್ಲಿಂದ ಈವರೆಗೂ ಒಟ್ಟು 17 ಬಜೆಟ್‌ ಮಂಡಿಸಿದ್ದೇನೆ. ಕರ್ನಾಟಕದಲ್ಲಿ ನಾನು ಮಂಡಿಸಿದಷ್ಟು ಆಯವ್ಯಯಗಳನ್ನು ಯಾರೂ ಕೂಡ ಮಂಡಿಸಿಲ್ಲ. ಇದು ಒಂದು ದಾಖಲೆ. ನನಗೆ ಶಾಸಕರು, ವಿಧಾನಪರಿಷತ್‌ ಸದಸ್ಯರು ಮತ್ತು ರಾಜ್ಯದ ಜನತೆಯ ಆಶೀರ್ವಾದವಿದೆ. ಹೈಕಮಾಂಡ್‌ ನ ಬೆಂಬಲವಿದೆ. ನಾನು ರಾಜ್ಯದ ಹಿತಾಸಕ್ತಿ ಮತ್ತು ಜನಪರವಾದ ಬಜೆಟ್‌ ಮಂಡನೆ ಮಾಡದಿದ್ದರೆ ನನಗೆ ಇಂಥ ಅವಕಾಶ ಸಿಗುತ್ತಿತ್ತೇ ಎಂದು ಪ್ರಶ್ನಿಸಿದರು.

ನಾನು ಜನಪರವಾಗಿ ರಾಜ್ಯದ ಹಿತವನ್ನು ಕಾಪಾಡಿದ್ದರಿಂದ  ನನಗೆ ಇಷ್ಟು ಅವಕಾಶ ಸಿಕ್ಕಿದೆ. ನೀವು ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

Key words: budget, support, people, CM, Siddaramaiah

The post ಜನರ, ಪಕ್ಷದ ಬೆಂಬಲ ಇಲ್ಲದಿದ್ದರೇ ನಾನು 17 ಬಜೆಟ್ ಮಂಡಿಸಲು ಹೇಗೆ ಸಾಧ್ಯವಾಗುತ್ತಿತ್ತು-ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സാദിഖലി തങ്ങളെ അപകീർത്തിപ്പെടുത്തിയുള്ള ഫേസ്ബുക്ക് പോസ്റ്റ്: കാപ്പ കേസ് പ്രതി ആവശ്യപ്പെട്ടത് 15 കോടി

മലപ്പുറം: സാദിഖലി തങ്ങളെ അപകീർത്തിപ്പെടുത്തിയുള്ള ഫേസ്ബുക് പോസ്റ്റിന് പിറകിലെ ലക്ഷ്യം ബ്ലാക്ക്...

ஸ்டாலின் Vs விஜய்… பெண்கள் வாக்குகளை வளைப்பதில் தீவிரம் | ‘வாவ்’ வியூகம் 10

பெண்கள் வாக்குகளை வளைப்பதில் தீவிரம்‘வாவ்’ வியூகம் 10வாக்காளர்கள் எதிர்பார்த்த ஜனநாயகத் திருவிழா...

Mermaid: రేజర్ షార్ప్ పళ్లు, చేప తోకతో మమ్మీ.. జపాన్‌లో సగం చేప సగం మానవుడి మెర్‌మెయిడ్

జపాన్‌లోని ఫుకుషిమాలోని ఒక పాత ఇంట్లో ఒక విచిత్రమైన మమ్మీ వెలుగుచూసింది....

ಟಿಪ್ಪರ್- ಖಾಸಗಿ ಬಸ್ ಡಿಕ್ಕಿ: 13 ಮಂದಿ ಸಜೀವ ದಹನ

ಪ್ರಕಾಶಂ, ಮಾರ್ಚ್,26,2026 (www.justkannada.in):  ಟಿಪ್ಪರ್ ಮತ್ತು ಖಾಸಗಿ ಬಸ್ ಗಳ...