ನವದೆಹಲಿ,ಮಾರ್ಚ್,25,2026 (www.justkannada.in): ಗ್ಯಾಸ್ ಸಿಲಿಂಡರ್ ಅಭಾವದ ನೆಪ ಹೇಳಿ ಬಿಲ್ ಗಳಲ್ಲಿ ಗ್ಯಾಸ್ ಚಾರ್ಜ್ ಎಂದು ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಆದೇಶಿಸಿದೆ.
ಹೋಟೆಲ್ ಬಿಲ್ ಗಳಲ್ಲಿ ಗ್ಯಾಸ ಚಾರ್ಜ್ ವಸೂಲಿ ಮಾಡುವಂತಿಲ್ಲ. ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಎಲ್ ಪಿಜಿ ಗ್ಯಾಸ್ ಚಾರ್ಜ್ ವಿಧಿಸುವುದು ಅಕ್ರಮ. ಗ್ಯಾಸ್ ಸರ್ ಚಾರ್ಚ್ ಇಂಧನ ರಿಕವರಿ ಹೆಸರಲ್ಇ ಬಿಲ್ ಹಾಕುವುದು ಅಕ್ಷೇಪಾರ್ಹ. ಯಾವುದೇ ಹೆಸರಲ್ಲಿ ಹೆಚ್ಚುವರಿ ಶುಲ್ಕ ವಿಧಿಸುವುದು ಕಾಯ್ದೆ ಉಲ್ಲಂಘನೆಯಾಗಲಿದೆ. ಅಹಾರದ ಬೆಲೆಯಲ್ಲೇ ವೆಚ್ಚ ಸೇರಿಸಬೇಕು ಎಂದು ಸಿಸಿಪಿಎ ಸ್ಪಷ್ಟನೆ ನೀಡಿದೆ.
ಆಹಾರದ ಬೆಲೆಯಲ್ಲೇ ಇಂಧನ ಸೇವೆಯ ವೆಚ್ಚ ಭರಿಸಬೇಕು. ಗ್ಯಾಸ್ ದರ ಏರಿಕೆಯ ನೆಪವೊಡ್ಡಿ ಹೆಚ್ಚಿನ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಡಿಫಾಲ್ಟ್ ಆಗಿ ಇಂಹತ ಚಾರ್ಜ್ ಸೇರಿಸಿವುದು ತಪ್ಪು. ಒಂದು ವೇಳೆ ಹೋಟೆಲ್ ಗಳು ಹೆಚ್ಚುವರಿ ಹಣ ಕೇಳಿದರೆ, ಅನಗತ್ಯ ಚಾರ್ಜ್ ಗಳ ವಿರುದ್ದ ಸಹಾಯವಾಣಿಗೆ ಗ್ರಾಹಕರು ದೂರು ನೀಢಬಹುದು. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ದೂರು ನೀಡಬಹುದು ಡಿಸಿಗೆ ಅಥವಾ ಸಿಸಿಪಿಎಗೆ ಇಮೇಲ್ ಮೂಲಕ ದೂರು ನೀಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Key words: No, additional charges, gas, bills, notice, hotels
The post ಗ್ಯಾಸ್ ಚಾರ್ಜ್ ಎಂದು ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ: ಹೋಟೆಲ್ ಗಳಿಗೆ ಕೇಂದ್ರ ಖಡಕ್ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





