ಬೆಂಗಳೂರು,ಮಾರ್ಚ್,25,2026 (www.justkannada.in): ದೇಶದಲ್ಲಿ LPG ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಬುಕ್ಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ. ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ನಿಯಮದ ಪ್ರಕಾರ, ಒಬ್ಬ ಗ್ರಾಹಕರು ಇನ್ನು ಮುಂದೆ ಮಿತಿಯಿಲ್ಲದೆ ಸಿಲಿಂಡರ್ ಪಡೆಯಲು ಸಾಧ್ಯವಿಲ್ಲ. ಹೌದು. ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ಸಾಗಾಟ ತಡೆಯಲು ಮತ್ತು ಪಾರದರ್ಶಕ ವಿತರಣೆ ಖಚಿತಪಡಿಸಲು ಕೇಂದ್ರ ಸರ್ಕಾರ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿವೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಸಿಲಿಂಡರ್ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಉಜ್ವಲ ಯೋಜನೆಯಡಿ 45 ದಿನ ಕಾಲಾವಕಾಶ ನೀಡಲಾಗಿದೆ. ಗೃಹಬಳಕೆಯವರಿಗೆ 1 ಸಿಲಿಂಡರ್ ಇದ್ದವರು 25 ದಿನಗಳ ನಂತರ ಬುಕ್ಕಿಂಗ್ ಕಾಲಾವಕಾಶ ನೀಡಲಾಗಿದೆ. 2 ಸಿಲಿಂಡರ್ ಇದ್ದವರು 35 ದಿನಗಳ ಬಳಿಕ ಬುಕ್ಕಿಂಗ್ ಗೆ ಅವಕಾಶವಿದೆ. 5 ಕೆಜಿ ಸಿಲಿಂಡರ್ ಗೂ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, 5 ಕೆಜಿ ಸಿಲಿಂಡರ್ ಗೆ 9ರಿಂದ 15 ದಿನ ಗ್ಯಾಪ್ ಇರಬೇಕು. 10 ಕೆ.ಜಿ ಸಿಲಿಂಡರ್ ಗೆ 18 ರಿಂದ 32 ದಿನ ಗ್ಯಾಪ್ ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Key words: New guidelines, released, gas cylinder, booking
The post ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ಮಾರ್ಗಸೂಚಿ ಬಿಡುಗಡೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





