21
March, 2026

A News 365Times Venture

21
Saturday
March, 2026

A News 365Times Venture

ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ. ಏರಿಕೆ

Date:

ನವದೆಹಲಿ, ಮಾರ್ಚ್, 20,2026 (www.justkannada.in):  ಇಸ್ರೇಲ್ ಮತ್ತು ಇರಾನ್‌ ಅಮೆರಿಕಾ ನಡುವಿನ ಯುದ್ಧದ ಬಿಸಿ ತೈಲ ಮಾರುಕಟ್ಟೆಗೆ ತಟ್ಟಿದ್ದು, ದೇಶಾದ್ಯಂತ ಪ್ರೀಮಿಯಂ ದರ್ಜೆಯ ಪವರ್ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದೆ.

ಹೌದು, ದೇಶದಲ್ಲಿ ಪ್ರೀಮಿಯಮ್ ಪೆಟ್ರೋಲ್ ದರಗಳನ್ನು ಏರಿಸಲಾಗಿದೆ. ಪ್ರೀಮಿಯಮ್ ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ  2.30 ರೂನಷ್ಟು ಹೆಚ್ಚಳ ಮಾಡಲಾಗಿದೆ.  ಜಾಗತಿಕವಾಗಿ ತೈಲ ಸರಬರಾಜು ವ್ಯತ್ಯಯಗೊಂಡಿರುವ ಪರಿಣಾಮ ಈ ಏರಿಕೆ ಆಗಿರಬಹುದು. ಇನ್ನು ಅನ್​ಲೆಡೆಡ್ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಡೀಸಲ್ ಬೆಲೆಯಲ್ಲೂ ಹೆಚ್ಚಳವಾಗಿಲ್ಲ.

ಪ್ರೀಮಿಯಮ್ ಪೆಟ್ರೋಲ್ ಹೈ ಆಕ್ಟೇನ್ ಪೆಟ್ರೋಲ್ ಆಗಿದೆ. ಇದು ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸಿ, ಮೈಲೇಜನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಬೆಲೆ ಮಾಮೂಲಿಯ ಪೆಟ್ರೋಲ್​ಗಿಂತ ತುಸು ಹೆಚ್ಚಿನದ್ದಿರುತ್ತದೆ. ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್, ಎಚ್​ಪಿಸಿಎಲ್ ಈ ಬೆಲೆ ಏರಿಕೆ ಮಾಡಿವೆ.

Key words: Premium petrol, price, hiked

The post ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ. ಏರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ലോകമറിയട്ടെ, ക്യൂബയില്‍ പ്രതിസന്ധിയില്ലെന്ന്, ഉള്ളത് അമേരിക്ക നടത്തുന്ന കൊലപാതകമാണ്; ചര്‍ച്ചയായി ക്യൂബയില്‍ നിന്നുള്ള തുറന്നകത്ത്

ഹവാന: അമേരിക്കയുടെ ഉപരോധത്തില്‍ പ്രതിസന്ധി അനുഭവിക്കുന്ന ക്യൂബന്‍ ജനതയുടെ യാഥാര്‍ത്ഥ്യം വരച്ചുകാട്ടുന്ന...

'புகார் மட்டும் சொல்கிறார்கள்; ஆனால், உதவவில்லை; கோழைகள்" – NATO-வை சாடும் ட்ரம்ப்

ஈரான் போர் தொடங்கி இன்றோடு நான்காவது வாரம் தொடங்குகிறது. ஈரான், அமெரிக்கா,...

Chicken Price Hike: రంజాన్ వేళ.. చుక్కలు చూపిస్తున్న చికెన్ ధరలు.. కిలో ఎంతంటే..

తెలుగు రాష్ట్రాల్లో మాంసాహార ప్రియులకు ఆదివారం అంటేనే పండుగ. కానీ.. ప్రస్తుత...

ಎಲ್ಲೆಂದರಲ್ಲಿ ಹಳೇ ವಾಹನಗಳನ್ನ ನಿಲ್ಲಿಸಿದ್ರೆ ಕಠಿಣ ಕ್ರಮ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,20,2026 (www.justkannada.in): ಎಲ್ಲೆಂದರಲ್ಲಿ ಹಳೆ ವಾಹನಗಳನ್ನ ನಿಲ್ಲಿಸಿದರೆ  ಕಠಿಣ ಕ್ರಮ...