19
March, 2026

A News 365Times Venture

19
Thursday
March, 2026

A News 365Times Venture

ಪಾರಂಪರಿಕ ಕಟ್ಟಡಗಳ ಎದುರು ಜಾಹೀರಾತು ಫಲಕ ಅಳವಡಿಕೆ ನಿಯಂತ್ರಿಸಿ: ಎಂಎಲ್‌ಸಿ ಕೆ.ಶಿವಕುಮಾರ್

Date:

 

ಬೆಂಗಳೂರು, ಮಾ.೧೯: ಪಾರಂಪರಿಕ ಕಟ್ಟಡಗಳ ಎದುರು ಯಾವುದೇ ಕಾರಣಕ್ಕೂ ಜಾಹೀರಾತು ಫಲಕಗಳನ್ನು ಅಳವಡಿಸಬಾರದು. ಇದರಿಂದ ನಗರದ ಸೌಂದರ್ಯಕ್ಕೆ ದಕ್ಕೆಯಾಗಲಿದ್ದು, ಪ್ರವಾಸಿಗರಿಗೂ ಅನಾನುಕೂಲತೆ ಉಂಟಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನ ಪರಿಷತ್‌ನ ಅಧಿವೇಶನದಲ್ಲಿ ಮಹಾನಗರ ಪಾಲಿಕೆಗಳು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಜಾಹೀರಾತು ಶುಲ್ಕ ನಿಗದಿಪಡಿಸುವ ಕಾನೂನಿನ ತಿದ್ದುಪಡಿಗೆ ಸಂಬಂಧಿಸಿದಂತೆ ಅವರು ಮಾತನಾಡಿದರು.

ಖಾಸಗಿ ಕಟ್ಟಡಗಳಲ್ಲಿ ಅಳವಡಿಸುವ ದೊಡ್ಡಮಟ್ಟದ ಜಾಹೀರಾತಿಗೆ ಕಡ್ಡಾಯವಾಗಿ ತೆರಿಗೆ ಹಾಕಲೇಬೇಕು. ಬಹುದೊಡ್ಡಮಟ್ಟದ ಜಾಹೀರಾತು ಫಲಕಗಳಿಂದ ವಾಹನ ಸವಾರರಿಗೆ ಅಡಚಣೆಯಾಗುತ್ತಿದೆ ಎಂದರು.

ಹೆಸರಾಂತ ವೃತ್ತಗಳಲ್ಲಿ ಅಳವಡಿಸಿರುವ ಎಲ್‌‌ಇಡಿ ಜಾಹೀರಾತು ಫಲಕಗಳ ಮೇಲೆ ಹೆಚ್ಚಿನ ತೆರಿಗೆ ವಿದಿಸಬೇಕು. ರಾಜ್ಯಾದ್ಯಾಂತ ಹವ್ಯಾಹತವಾಗಿ ನಡೆಯುತ್ತಿರುವ ಈ ಅನಧೀಕೃತ ಜಾಹೀರಾತನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಫ್ಲೆಕ್ಸ್‌ಗಳ ಹಾವಳಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಂದಲೇ ಹೆಚ್ಚಾಗಿದೆ. ಈ ಫ್ಲೆಕ್ಸ್ ಸಂಸ್ಕೃತಿಯು ಹಳ್ಳಿಗಳಿಗೂ ವ್ಯಾಪಿಸಿದೆ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಅನಧೀಕೃತ ಜಾಹೀರಾತು ಅಳವಡಿಕೆಯು ಒಂದು ಮಾಫಿಯಾ ಆಗಿದ್ದು, ಸಂಬಂಧಿಸಿದ ಮಂತ್ರಿಗಳು ಎಲ್ಲಾ ಪುರಸಭೆ ಮತ್ತು ನಗರ ಪಾಲಿಕೆಗಳಲ್ಲಿ ಲೆಕ್ಕಪರಿಶೋಧನೆ ಮಾಡಿಸಿ ಎಷ್ಟು ಹೋರ್ಡಿಂಗ್ಸ್‌ಗಳಿಗೆ ಅನುಮತಿ ನೀಡಲಾಗಿದೆ ಎಂಬ ಮಾಹಿತಿ ಸಂಗ್ರಹಿಸಬೇಕು ಎಂದರು.

ಕೆಲವು ಜಾಹೀರಾತು ಏಜೆನ್ಸಿಗಳು ಕಡಿಮೆ ಸಂಖ್ಯೆಯ ಹೋರ್ಡಿಗ್ಸ್‌ಗಳಿಗೆ ತೆರಿಗೆ ಪಾವತಿಸಿ ಹೆಚ್ಚು ಹೋರ್ಡಿಂಗ್ಸ್ ಅಳವಡಿಸಿಕೊಂಡಿರುತ್ತಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಇದನ್ನು ಕೂಡಲೇ ನಿಯಂತ್ರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಹಾಗೂ ಮೈಸೂರಂಥ ಮಹಾನಗರಗಳಲ್ಲಿ ಅನುಮತಿಗಿಂತ ಹೆಚ್ಚು ಜಾಹೀರಾತು ಫಲಕ ಅಳವಡಿಸಿರುವುದನ್ನು ಕಾಣಬಹುದು. ಮುಂಬೈ ಮತ್ತು ಚನ್ನೈ ನಗರದಲ್ಲಿ ಇರುವಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದರು.

Key words: Regulate Hoardings, in Front of, Heritage Buildings, MLC, K. Shivakumar

SUMMARY:

Regulate Hoardings in Front of Heritage Buildings: MLC K. Shivakumar

Bengaluru, March 19: Legislative Council Member K. Shivakumar said that hoardings should not be installed in front of heritage buildings under any circumstances.

Speaking during the Legislative Council session on amendments to the law related to fixing advertisement fees in municipal corporations and town municipalities, he stated that such hoardings damage the city’s aesthetics and cause inconvenience to tourists.

He also emphasized that large-scale advertisements installed on private buildings must be mandatorily taxed. Massive hoardings are creating obstacles for motorists and affecting smooth traffic movement, he added.

The post ಪಾರಂಪರಿಕ ಕಟ್ಟಡಗಳ ಎದುರು ಜಾಹೀರಾತು ಫಲಕ ಅಳವಡಿಕೆ ನಿಯಂತ್ರಿಸಿ: ಎಂಎಲ್‌ಸಿ ಕೆ.ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സമസ്തയെപ്പോലെ ജമാഅത്തെ ഇസ്‌ലാമിയും ഒരു മതസംഘടനയാണ്: പി.എം.എ. സലാം

കോഴിക്കോട്: ജമാഅത്തെ ഇസ്‌ലാമി സമസ്തയെ പോലെ ഒരു മതസംഘടനയാണെന്ന് മുസ്‌ലിം ലീഗ്...

தேமுதிக-வுக்கு எவ்வளவு ஓட்டு? விஜய்யின் தாக்கம் என்ன? – நேர்காணலில் ஸ்டாலின் கேட்ட முக்கிய கேள்வி!

சட்டமன்றத் தேர்தலில் திமுக சார்பில் போட்டியிட விருப்ப மனு அளித்தவர்களிடம் முதல்வர்...

iPhone 17e.. చౌకగా అత్యుత్తమ స్మార్ట్‌ఫోన్.. పనితీరు ఎలా ఉందంటే..?

iPhone 17e: యాపిల్‌ సంస్థ తయరు చేసే ఐఫోన్‌ కోసం ఎదురుచూసేవాళ్లు...

ಕೆಪಿಎಸ್ ಸಿಯಲ್ಲಿ ಅಕ್ರಮ : ವಿಧಾನಸಭೆಯಲ್ಲಿ ಉತ್ತರ ನೀಡಿದ ಸರ್ಕಾರ

ಬೆಂಗಳೂರು,ಮಾರ್ಚ್,18,2026 (www.justkannada.in): ಕೆಪಿಎಸ್ ಸಿ ನಡೆಸಿದ ಕೆಎಎಸ್ ನಲ್ಲಿ ಅಕ್ರಮ...