19
March, 2026

A News 365Times Venture

19
Thursday
March, 2026

A News 365Times Venture

ಚುನಾವಣಾ ವಿಚಾರ ಸಿಎಂ ಕಚೇರಿಯಲ್ಲಿ ಚರ್ಚಿಸಿದ್ದು ತಪ್ಪು – ಆರ್.ಅಶೋಕ್

Date:

ಬೆಂಗಳೂರು,ಮಾರ್ಚ್,18,2026 (www.justkannada.in):  ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಟಿಕೆಟ್   ಕುರಿತ ವಿಚಾರವನ್ನ ಸಿಎಂ ಸಿದ್ದರಾಮಯ್ಯ ಸಿಎಂ ಕಚೇರಿಯಲ್ಲಿ ಚರ್ಚೆ ನಡೆಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್, ಚುನಾವಣಾ ವಿಚಾರವನ್ನ ಸಿಎಂ ಕಚೇರಿಯಲ್ಲಿ ಚರ್ಚೆ ಮಾಡಿದ್ದು ತಪ್ಪು. ಸಿಎಂ ಸಿದ್ದರಾಮಯ್ಯಗೆ ಮರೆವು ಜಾಸ್ತಿಯಾದಂತಿದೆ. ಸಿಎಂ ಸಿದ್ದರಾಮಯ್ಯಗೆ ಏನು ಒತ್ತಡ ಇದೆಯೋ ಏನೋ ಎಂದು ವ್ಯಂಗ್ಯವಾಡಿದರು.

ತಮ್ಮ ಪದವಿಯನ್ನು ಸಿಎಂ ಸಿದ್ದರಾಮಯ್ಯ ಅವರೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣೆ ಬಗ್ಗೆ  ಮಾತನಾಡಲು ಪಕ್ಷದ ಕಚೇರಿ ಇದೆ.  ಅಧ್ಯಕ್ಷರಿದ್ದಾರೆ.  ಸಿಎಂ ಕೊಠಡಿಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದು ತಪ್ಪು ಎಂದು ಆರ್. ಅಶೋಕ್ ಕುಟುಕಿದರು.

ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಟಿಕೆಟ್ ಗಾಗಿ ದಿವಂಗತ ಎಚ್.ವೈ ಮೇಟಿ ಅವರ ಮಕ್ಕಳ ನಡುವೆ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಿಎಂ ಕಚೇರಿಯಲ್ಲಿ ಮೂವರ ಜೊತೆ ಈ ಬಗ್ಗೆ ಚರ್ಚೆ ನಡೆಸಿದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ನಡೆಗೆ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

Key words: discuss, election issue , CM’s office, CM Siddaramaiah, R. Ashok

 

The post ಚುನಾವಣಾ ವಿಚಾರ ಸಿಎಂ ಕಚೇರಿಯಲ್ಲಿ ಚರ್ಚಿಸಿದ್ದು ತಪ್ಪು – ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

തരൂരിനെ പിന്തുണച്ചതിന് അപമാനിക്കപ്പെട്ടു; കോണ്‍ഗ്രസ് വിട്ട് ബി.ജെ.പിയില്‍ ചേര്‍ന്ന് അസം എം.പി

ഗുവാഹത്തി: മുതിര്‍ന്ന നേതാവ് ശശി തരൂരിനെ പിന്തുണച്ചതിന്റെ പേരില്‍ കോണ്‍ഗ്രസിനുള്ളില്‍ നിന്നും...

முரண்டு பிடிக்கும் சிபிஎம்; ஆப்சென்ட் ஆன விசிக! – கூட்டணி தலைவலியில் அறிவாலயம்!

திமுக கூட்டணியில் நிலவி வரும் இழுபறிக்கு இன்னமும் ஒரு முடிவு கிடைக்கவில்லை....

Off The Record : కాంగ్రెస్ నేత ప్రపోజల్ విని కేటీఆర్ షాక్?

Off The Record: తెలంగాణలో ఖాళీ అయిన రెండు రాజ్యసభ స్థానాలకు...

ನಮಗೆ ಗೆಲುವೇ ಮಾನದಂಡ: ಸಿಎಂ,ಡಿಸಿಎಂ, ಹೈಕಮಾಂಡ್ ತೀರ್ಮಾನಕ್ಕೆ ಬದ್ದ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಮಾರ್ಚ್,18,2026 (www.justkannada.in):  ಬಾಗಲಕೋಟೆ,ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳ...