15
March, 2026

A News 365Times Venture

15
Sunday
March, 2026

A News 365Times Venture

ಖೇಲೋ ಇಂಡಿಯಾದಿಂದ ಕ್ರೀಡಾ ಪ್ರತಿಭೆಗಳ ಗುರುತಿಸಲು, ಪ್ರೋತ್ಸಾಹಿಸಲು ಸಾಧ್ಯವಾಗಿದೆ-ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯಾ

Date:

ಮಂಡ್ಯ,ಮಾರ್ಚ್,14,2026 (www.justkannada.in): ಖೇಲೋ ಇಂಡಿಯಾ  ಯೋಜನೆಯ ಮೂಲಕ ದೇಶದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಸಾಧ್ಯವಾಗಿದೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯಾ ಅವರು  ತಿಳಿಸಿದರು.

ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಖೇಲೋ ಇಂಡಿಯಾ ಯೋಜನೆ ಅಡಿ ರೂ 14.00 ಕೋಟಿ ವೆಚ್ಚದಲ್ಲಿ ವಿವಿದೋದ್ದೇಶ ಒಳಾಂಗಣ ಕ್ರೀಡಾ ಸಂಕೀರ್ಣ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ  ಜಿಲ್ಲಾ ಕೃಷಿ ವಿಶ್ವವಿದ್ಯಾಲಯ ವಿ.ಸಿ ಫಾರಂನಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತಾನಾಡಿದರು.

ಕ್ರೀಡೆಗೆ ಹೊಸ ಭಾಷೆ ಬರೆಯಲು ಖೇಲೋ ಇಂಡಿಯಾ ಸಹಕಾರಿಯಾಗಿದೆ. ಕೇಂದ್ರ ಸರ್ಕಾರ ಯುವ ಕ್ರೀಡಾಪಟಗುಗಳಿಗೆ ಸಹಕಾರಿಯಾಗುವಂತೆ ಕೆಲಸ ಮಾಡುತ್ತಿದೆ. ಮಂಡ್ಯದ ಯುವ ಕ್ರೀಡಾಪಟುಗಳಿಗೆ ಕ್ರೀಡಾ ಸಂಕೀರ್ಣಕ್ಕೆ ಅವಶ್ಯಕತೆ ಇದೆ‌. ಇದಕ್ಕಾಗಿ  ವೈಯುಕ್ತಿಕವಾಗಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಸಂಪರ್ಕ ಮಾಡಿ ಮನವಿ ಮಾಡಿದ್ದರು. ಅದರಂತೆ ಇಂದು ಈ ಅಭಿವೃದ್ಧಿ ಕೆಲಸ ನೆರವೇರಿದೆ ಎಂದು ಅವರು ತಿಳಿಸಿದರು. ಇಳಿ ವಯಸ್ಸಿನಲ್ಲಿಯೂ ಹೆಚ್. ಡಿ.ದೇವೆಗೌಡರ ಉತ್ಸಾಹ ಎಲ್ಲರಿಗೂ ಮಾದರಿಯಾಗಿದೆ.  ಅಷ್ಟೊಂದು ಉತ್ಸುಕವಾಗಿ ಸದನದಲ್ಲಿ ಭಾಗಿಯಾಗುತ್ತಾರೆ ಎಂದು ಅವರು ತಿಳಿಸಿದರು.

ವಿಕಲಚೇತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಹನ ನೀಡಲಾಗುತ್ತಿದೆ. ಮುಂದೆಯು ವಿಕಲಚೇತನ ಕ್ರೀಡಾಪಟುಗಳಿಗೆ ಅನುಕೂಲ ಆಗುವ ಕಾರ್ಯಕ್ರಮ ಕೊಡುತ್ತೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವರು ಕ್ರೀಡೆಗೆ ಪ್ರಮುಖ ಆದ್ಯತೆ ನೀಡುತ್ತಿದ್ದು ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಡಾ. ಮನ್ಸುಖ್ ಮಾಂಡವೀಯಾ ಅವರು ತಿಳಿಸಿದರು.

ಯುವ ಜನತೆಯ ಕ್ರೀಡೆಯಲ್ಲಿ ಆಸಕ್ತಿಯನ್ನು ತೊಡಗಿಸಿಕೊಳ್ಳಬೇಕು-ಕೇಂದ್ರ ಸಚಿವ HDK

ಭಾರತ ಸರ್ಕಾರದ ಉಕ್ಕು ಮತ್ತು ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿ ಯುವ ಜನತೆಯ ಕ್ರೀಡೆಯಲ್ಲಿ ಆಸಕ್ತಿಯನ್ನು ತೊಡಗಿಸಿಕೊಳ್ಳಬೇಕು ಖೇಲೋ ಇಂಡಿಯಾ ಯೋಜನೆಯಡಿ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ತಳಮಟ್ಟದಿಂದ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲು ಪ್ರಾರಂಭಿಸಿದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಯುವ ಕ್ರೀಡಾಪಟುಗಳಿಗೆ ಉತ್ತಮ ಮೂಲಸೌಕರ್ಯ, ತರಬೇತಿ ಮತ್ತು ಆರ್ಥಿಕ ನೆರವು ನೀಡುವ ಯೋಜನೆಯಗಿದೆ ಎಂದು ಅವರು ತಿಳಿಸಿದರು.

ಯುವಕರಿಗೆ ಉದ್ಯೋಗ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲೆಯ 380 ವಿಕಲಚೇತನರಿಗೆ ವಾಹನ ನೀಡಲಾಗುತ್ತಿದ್ದು 600 ಶಾಲೆಗಳಿಗೆ ಕಂಪ್ಯೂಟರ್ ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಜನತೆಗೆ ಸಿ.ಎಸ್. ಆರ್ ಅನುದಾನದ ಮೂಲಕ 97 ಕೋಟಿ ಕಾರ್ಯ ಯೋಜನೆಗೆ ನೀಡಲಾಗುತ್ತಿದೆ ಮತ್ತು ಜಿಲ್ಲಾ ರೈತ ಸಭಾಂಗಣವನ್ನು ಕಟ್ಟಡ ನವೀಕರಣಕ್ಕೆ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ ತಿಳಿಸಿದರು.

ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಪೀಠಾಧ್ಯಕ್ಷ  ಶ್ರೀ ನಿರ್ಮಲಾನಂದನಾಥ ಸ್ವಾಮಿ ಮಾತನಾಡಿ, ಭಾರತ ಸರ್ಕಾರವು ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ತಳಮಟ್ಟದಿಂದ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲು ಪ್ರಾರಂಭಿಸಿದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು  ಯುವ ಕ್ರೀಡಾಪಟುಗಳಿಗೆ ಉತ್ತಮ ಮೂಲಸೌಕರ್ಯ, ತರಬೇತಿ ಮತ್ತು ಆರ್ಥಿಕ ನೆರವು ನೀಡುವುದರ ಮೂಲಕ ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಯನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವುದು ಮತ್ತು ಯುವ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಅವಕಾಶಗಳನ್ನು ಕಲ್ಪಿಸಬೇಕು ಖೇಲೋ ಇಂಡಿಯಾ ಯೂತ್ ಗೇಮ್ಸ್, ಯೂನಿವರ್ಸಿಟಿ ಗೇಮ್ಸ್, ವಿಂಟರ್ ಗೇಮ್ಸ್ ಮತ್ತು ಪ್ಯಾರಾ ಗೇಮ್ಸ್ ಎಂಬ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಯುವಕರಿಗಾಗಿ 2 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಕಂಪನಿಗಳಿದ್ದು ಯುವಕರಿಗೆ ಮತ್ತು ನೇರ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಕಾರ್ಯ ನಿವಹಿಸುತ್ತಿವೆ. ಯುವಕರು ಕ್ರೀಡಾ ಕ್ಷೇತ್ರದಲ್ಲಿ ಪ್ರಾಬಲ್ಯ ಇರಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವಕರು ಭಾಗವಹಿಸುವಂತೆ ಸಾಮರ್ಥ್ಯ ಮತ್ತು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಖೇಲೋ ಇಂಡಿಯಾ ಯೋಜನೆಯಡಿ ಕೆಲವು ಕಂಪನಿಯ ದಾನಿಗಳಿಂದ ವಿಶೇಷ ಚೇತನರನ್ನು ಸಬಲರನ್ನಾಗಿ ಮಾಡಲು ಯಂತ್ರೋಪಕರಣಗಳನ್ನು ನೀಡಲಾಗುತ್ತಿದ್ದು ಮತ್ತು ಸರ್ಕಾರಿ ಶಾಲೆಗಳಿಗೆ ಲ್ಯಾಪ್ ಟಾಪ್ ನೀಡಿ ಯುವಕರನ್ನು ದೈಹಿಕ ಮತ್ತು ಮಾನಸಿಕವಾಗಿ ಧೈರ್ಯ ತುಂಬುವ ಕಾರ್ಯ ನಿರ್ವಹಿಸುತಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಸಂತಸಪಟ್ಟರು.

ಈ ಸಂದರ್ಭದಲ್ಲಿ ಕೆ.ಆರ್. ಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು, ಪರಿಷತ್ ಸದಸ್ಯರಾದ ಬೋಜೇಗೌಡ, ವಿವೇಕಾನಂದ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಸುರೇಶ್‌ಗೌಡ, ಡಾ.ಕೆ.ಅನ್ನದಾನಿ ಹಾಗೂ ಇತರರು ಉಪಸ್ಥಿತರಿದ್ದರು.

Key words: Khelo India, sports, Mandya, Union Minister, Dr. Mansukh Mandaviya

The post ಖೇಲೋ ಇಂಡಿಯಾದಿಂದ ಕ್ರೀಡಾ ಪ್ರತಿಭೆಗಳ ಗುರುತಿಸಲು, ಪ್ರೋತ್ಸಾಹಿಸಲು ಸಾಧ್ಯವಾಗಿದೆ-ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯಾ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പൂനെയില്‍ പൊതുസ്ഥലത്ത് നോമ്പ് തുറക്കുന്നത് ചോദ്യം ചെയ്ത് യുവാക്കളെ ആക്രമിച്ചു; അഞ്ച് പേര്‍ക്ക് പരിക്ക്; 15 പേര്‍ പിടിയില്‍

പൂനെ: പൂനെ അക്‌സര്‍വാഡിയില്‍ കുളത്തിനരികെ നോമ്പ് തുറയ്ക്കായി ഒത്തുകൂടിയ മുസ്‌ലിം യുവാക്കളെ...

“உளவுத் துறையைக் கையாளப் போகும் முதல் பெண் டி.ஜி.பி”- அதிரடி மாற்றங்களைக் கையில் எடுத்த அரசு!

தமிழகத்தில் கடந்த சில நாட்களாக நடந்துவந்த குற்றசெயல்களும், அதை தொடர்ந்து...

Fatty Liver: ఫ్యాటీలివర్ సమస్యతో బాధపడుతున్నారా..? మందులతో పని లేకుండా తగ్గించుకోండిలా..

కాలేయం మన శరీరంలోని అత్యంత కీలకమైన అవయవం. ఇది విషతుల్యాలను తొలగించడం,...

ಸಮಗ್ರ ಆರೋಗ್ಯಕ್ಕೆ ಯೋಗ-ವಿಜ್ಞಾನದ ಸಮನ್ವಯ ಅಗತ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಮೈಸೂರು,ಮಾರ್ಚ್,14,2026 (www.justkannada.in):  ಭಾರತ ದೇಶ ಜಗತ್ತಿಗೆ ಕೊಟ್ಟತಂಹ ಕೊಡಗೆಗಳಲ್ಲಿ ಯೋಗವೂ...