13
March, 2026

A News 365Times Venture

13
Friday
March, 2026

A News 365Times Venture

ಅಡಿಕೆ ಕಳ್ಳತನ ಮಾಡಿದ್ದ ಮೂವರು ಕಳ್ಳರು ಅಂದರ್

Date:

ಮೈಸೂರು,ಮಾರ್ಚ್,12,2026 (www.justkannada.in): ಸುಮಾರು 15 ಕ್ವಿಂಟಾಲ್ ನಷ್ಟು ಅಡಿಕೆಯನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಸರಗೂರು ತಾಲ್ಲೂಕಿನ ಕೆ.ಬೆಳತ್ತೂರು ಗ್ರಾಮದ ಬಿ.ಕೆ.ವಿವೇಕ್, ಮೈಸೂರಿನ ನಜರಬಾದ್ ನಿವಾಸಿ ಪ್ರಸನ್ನ.ಎಸ್ @ ರಾಮು,  ರಾಘವೇಂದ್ರನಗರದ ನಿವಾಸಿ ರಾಜೇಶ ಬಂಧಿತ ಆರೋಪಿಗಳು.

ಪೊಲೀಸ್ ಬೆಟ್ಟದಪುರ ವ್ಯಾಪ್ತಿಯ ಬೆಟ್ಟದತುಂಗಾ ಗ್ರಾಮದ ನಿವಾಸಿ ಟಿ.ಆರ್.ಶ್ರೀನಾಥ್‌ ರಾಜೇಅರಸ್ ಅವರು ಮಾರ್ಚ್ 3 ರಂದು ಬೆಟ್ಟದಪುರ ಪೊಲೀಸ್ ಠಾಣೆ ದೂರು ದಾಖಲಿಸಿದ್ದರು. ತಮ್ಮ ಜಮೀನಿನಲ್ಲಿ ಬೆಳೆದಿದ್ದ ಅಡಿಕೆಯನ್ನು ಬೆಟ್ಟದತುಂಗ ಗ್ರಾಮದ ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದು ಸದರಿ ಗೋಡೌನ್‌ನಲ್ಲಿ ಇಟ್ಟಿದ್ದ 15 ಕ್ವಿಂಟಾಲ್ ನಷ್ಟು ಅಡಿಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೈಲಕುಪ್ಪೆ ವೃತ್ತ ನಿರೀಕ್ಷಕ ದೀಪಕ್.ಎಂ.ಕೆ. ಪಿಎಸ್ಐ  ಅಜಯ್ ಕುಮಾರ್  ಅವರ ನೇತೃತ್ವದಲ್ಲಿ ಅಪರಾಧ ಪತ್ತೆ ದಳ ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡು ಕುಲಂಕುಷವಾಗಿ ವಿಚಾರಣೆ ಮಾಡಿದ್ದರು.

ಈ ವೇಳೆ ಮೂವರು ಆರೋಪಿಗಳು  ಬೆಟ್ಟದಪುರ ಪೊಲೀಸ್ ಠಾಣೆಯ ಒಂದು ಪ್ರಕರಣ ಬೈಲಕುಪ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ ಒಂದು ಪ್ರಕರಣ, ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳು ಹಾಗೂ ಮೈಸೂರು ನಗರ ಪೊಲೀಸ್ ಘಟಕದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಪ್ರಕರಣ ಸೇರಿದಂತೆ ಒಟ್ಟು 06 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಬೆಳಿಕಿಗೆ ಬಂದಿದೆ.

ಬಂಧಿತರಿಂದ 3 ಲಕ್ಷ ಬೆಲೆ ಬಾಳುವ KA-04 AA-0900 ರ ಟಾಟಾ ಏಸ್ ಗೂಡ್ಸ್ ವಾಹನ. ಈ ವಾಹನದಲ್ಲಿದ್ದ ಸುಮಾರು 3 ಲಕ್ಷ ಬೆಲೆ ಬಾಳುವ 3 ಚೀಲ ಬಟ್ಟೆಗಳು, ಒಟ್ಟು 8 ಲಕ್ಷ ಬೆಲೆ ಬಾಳುವ ಅಡಿಕೆ ಹಾಗೂ 2 ಲಕ್ಷ ರೂಪಾಯಿ ನಗದು ಹಣ, ಒಟ್ಟು 16 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: Mysore,Police, three thieves, arrest

The post ಅಡಿಕೆ ಕಳ್ಳತನ ಮಾಡಿದ್ದ ಮೂವರು ಕಳ್ಳರು ಅಂದರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഞെട്ടിപ്പിക്കുന്ന സംഭവം, ഉടന്‍ സമഗ്രമായ അന്വേഷണം നടത്തണം; ഫാറൂഖ് അബ്ദുല്ലക്ക് നേരെയുണ്ടായ വധശ്രമത്തില്‍ എം.എ. ബേബി

ന്യൂദല്‍ഹി: ജമ്മു കശ്മീര്‍ മുന്‍ മുഖ്യമന്ത്രി ഫാറൂഖ് അബ്ദുല്ലക്ക് നേരെയുണ്ടായ വധശ്രമം...

'6 தொகுதிகள் கொடுத்தே ஆகணும்' – கறார் காட்டும் கம்யூனிஸ்டுகள்; கைவிரித்த திமுக!

கம்யூனிஸ்ட் கட்சிகளுடனான தி.மு.க-வின் தொகுதி பங்கீட்டு பேச்சுவார்த்தையில் தொடர் இழுபறி நீடிக்கிறது....

ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,12,2026 (www.justkannada.in): ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದವಿದೆ...