10
March, 2026

A News 365Times Venture

10
Tuesday
March, 2026

A News 365Times Venture

ನೀರಿಗಾಗಿ ಮಕ್ಕಳ ಪತ್ರಕ್ಕೆ ಬಜೆಟ್ ನಲ್ಲಿ ಸ್ಪಂದನೆ: ಪುಟಾಣಿಗಳಿಗೂ ಪ್ರೀತಿತುಂಬಿದ ಅಪ್ಪುಗೆಗಳು ಎಂದ ಸಿಎಂ ಸಿದ್ದರಾಮಯ್ಯ

Date:

ಬೆಂಗಳೂರು,ಮಾರ್ಚ್,9,2026 (www.justkannada.in): ನೀರಿನ‌ ಸಮಸ್ಯೆ ಕುರಿತು ಮಕ್ಕಳು ಬರೆದಿದ್ದ ಪತ್ರಕ್ಕೆ ಬಜೆಟ್ ನಲ್ಲಿ ಉಡುತೊರೆಹಳ್ಳ ನೀರಾವರಿ ಯೋಜನೆ”ಯನ್ನು ಘೋಷಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ನೀರಿನ‌ ಸಮಸ್ಯೆ ಕುರಿತು ಕೆಲವು ಸಮಯದ ಹಿಂದೆ ಮಕ್ಕಳು ಪತ್ರ ಬರೆದು, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವಂತೆ ನನ್ನಲ್ಲಿ ಮನವಿ ಮಾಡಿದ್ದರು.

ಮಕ್ಕಳ ಕೋರಿಕೆಯ ಮೇರೆಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದಾಗ‌ ಆ ಹಳ್ಳಿಗೆ ಸಮರ್ಪಕ ನೀರಾವರಿ ಯೋಜನೆಯೊಂದರ ಅಗತ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್ ನಲ್ಲಿ “ಉಡುತೊರೆಹಳ್ಳ ನೀರಾವರಿ ಯೋಜನೆ”ಯನ್ನು ಘೋಷಿಸಿ, ರೂ.490 ಕೋಟಿ ಅನುದಾನವನ್ನು ಸಹ ಮೀಸಲಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಅಹವಾಲು ಸಲ್ಲಿಸಿದ ಮಕ್ಕಳ ಧ್ವನಿ ಎಳೆಯದಾದರೂ, ಅದನ್ನು ಕಡೆಗಣಿಸದೆ ಮುಕ್ತವಾಗಿ‌ ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ಗುಣ ನಮ್ಮ ಸರ್ಕಾರದ್ದು. ಪುಟಾಣಿ ಮಕ್ಕಳ‌ ಧನ್ಯವಾದವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ನುಡಿದಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ, ನನ್ನ ಮತ್ತು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟು ತಮ್ಮ ಕಷ್ಟವನ್ನು ನಮ್ಮ ಗಮನಕ್ಕೆ ತಂದು, ಇಂದು ಸಾವಿರಾರು ಕುಟುಂಬಗಳ ಭವಿಷ್ಯ ಬದಲಾಗಲು ಕಾರಣರಾದ ಪುಟಾಣಿಗಳಿಗೂ ಪ್ರೀತಿತುಂಬಿದ ಅಪ್ಪುಗೆಗಳು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Key words: Budget, childrens, letter, CM Siddaramaiah

The post ನೀರಿಗಾಗಿ ಮಕ್ಕಳ ಪತ್ರಕ್ಕೆ ಬಜೆಟ್ ನಲ್ಲಿ ಸ್ಪಂದನೆ: ಪುಟಾಣಿಗಳಿಗೂ ಪ್ರೀತಿತುಂಬಿದ ಅಪ್ಪುಗೆಗಳು ಎಂದ ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പശ്ചിമേഷ്യന്‍ സംഘര്‍ഷം ഉടന്‍ അവസാനിക്കും; യു.എസ് വേണ്ടത്ര വിജയിച്ചില്ല: ട്രംപ്

വാഷിങ്ടണ്‍: പശ്ചിമേഷ്യന്‍ സംഘര്‍ഷം ഉടന്‍ അവസാനിക്കുമെന്ന് യു.എസ് പ്രസിഡന്റ് ഡൊണാള്‍ഡ് ട്രംപ്....

கே.என்.பணிக்கர் மறைவு: "கலாசாரத் துறையைக் காவிமயமாக்குவதை எதிர்த்தவர்" – பினராயி விஜயன் இரங்கல்

நவீன இந்தியாவின் முன்னணி வரலாற்று ஆசிரியர்களில் ஒருவரும் காலடி ஸ்ரீசங்கராச்சார்யா பல்கலைக்கழக...

Mamidalapalli: మరణంలోనూ విడతీయని బంధం.. భర్త మరణించాడని భార్య కూడా..!

Mamidalapalli: భర్త మరణం తట్టుకోలేక ఆత్మహత్య చేసుకుంది ఓ భార్య. వృద్దాప్యంలో...

ಎರಡು ತಿಂಗಳಲ್ಲಿ ಹಲವು ಪ್ರಕರಣ ಭೇದಿಸಿದ ಮೈಸೂರು ಪೊಲೀಸರು: ನಗದು ಚಿನ್ನಾಭರಣ ವಶಕ್ಕೆ

ಮೈಸೂರು,ಮಾರ್ಚ್,9,2026 (www.justkannada.in):  ಮೈಸೂರು ಜಿಲ್ಲಾ ಪೊಲೀಸರು ಎರಡು ತಿಂಗಳಲ್ಲಿ ಕಾರ್ಯಾಚರಣೆ...