ಮೈಸೂರು,ಮಾರ್ಚ್,9,2026 (www.justkannada.in): ಇಬ್ಬರು ಮಹಿಳೆಯರು ವೃದ್ದೆಯ ಗಮನ ಬೇರೆಡೆ ಸೆಳೆದು 40 ಗ್ರಾಂ ಮಾಂಗಲ್ಯ ಸರ ದೋಚಿರುವ ಘಟನೆ ಮೈಸೂರನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೀಲಮ್ಮ(60) ಮಾಂಗಲ್ಯ ಸರ ಕಳೆದುಕೊಂಡ ವೃದ್ದೆ. ಬೆಳ್ಳೂರು ಕ್ರಾಸ್ ನಿಂದ ಮೈಸೂರಿಗೆ ಬರುವ ಬಸ್ ನಲ್ಲಿ ನೀಲಮ್ಮ ಪ್ರಯಾಣಿಸುತ್ತಿದ್ದ ವೇಳೆ ಇಬ್ಬರು ಅಪರಿಚಿತ ಮಹಿಳೆಯರು ಮಗು ಸಮೇತ ಶ್ರೀರಂಗಪಟ್ಟಣದಲ್ಲಿ ಬಸ್ ಹತ್ತಿದ್ದಾರೆ. ಮಗು ವಾಂತಿ ಮಾಡುತ್ತೆ ಕಿಟಕಿ ಪಕ್ಕ ಸ್ಥಳ ನೀಡುವಂತೆ ನೀಲಮ್ಮರನ್ನ ಕೇಳಿದ್ದಾರೆ.
ಇದಕ್ಕೆ ನೀಲಮ್ಮ ಒಪ್ಪಿಲ್ಲ.ಕೊಲಂಬಿಯಾ ಆಸ್ಪತ್ರೆ ಬಳಿ ಬಸ್ ಬಂದಾಗ ಮಹಿಳೆಯರು ಇಳಿಯಲು ಮುಂದಾಗಿ ತಮ್ಮ ಲಗೇಜ್ ಅನ್ನ ತೆಗೆಯುವಾಗ ನೀಲಮ್ಮ ಮೇಲೆ ಚಿಲ್ಲರೆ ಹಣ ಬೀಳಿಸಿದ್ದಾರೆ. ಹಣ ತೆಗೆದುಕೊಡಲು ನೀಲಮ್ಮ ಬಾಗಿದಾಗ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಎಗರಿಸಿದ್ದಾರೆ.
ಎಲ್ ಐಸಿ ಸ್ಟಾಪ್ ವೇಳೆ ಮಹಿಳೆಯರು ಬಸ್ ಇಳಿದುಹೋಗಿದ್ದು, ಮನೆಗೆ ಬಂದು ನೋಡಿದ ವೇಳೆ ಚಿನ್ನದ ಮಾಂಗಲ್ಯ ಸರ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ನೀಡಿದ್ದು ಅಪರಿಚಿತ ಮಹಿಳೆಯರ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Women, robbed, gold, FIR ,Mysore
The post ವೃದ್ದೆ ಮಾಂಗಲ್ಯ ದೋಚಿದ ಮಹಿಳೆಯರು: FIR ದಾಖಲು. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





